ಬೆಂಗಳೂರು: ಥಾಮ್ಸನ್ ಟಿವಿ ಈ ವರ್ಷದ ಮೊದಲ ವಿಶೇಷ ಮಾರಾಟ ಕೊಡುಗೆಯನ್ನು ಗ್ರಾಹಕರಿಗಾಗಿ ಆರಂಭಿಸುತ್ತಿದೆ.
ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷ ಮಾರಾಟ ಮೇಳವನ್ನು ಫ್ಲಿಪ್‌ಕಾರ್ಟ್‌ನಲ್ಲಿ ಥಾಮ್ಸನ್ ಆಯೋಜಿಸುತ್ತಿದ್ದು, ಜನವರಿ 16, 2022ರಂದು ಆಫರ್ ಸೇಲ್ ಆರಂಭವಾಗುತ್ತಿದೆ ಎಂದು ಕಂಪನಿ ಹೇಳಿದೆ.
ಥಾಮ್ಸನ್ ಆಂಡ್ರಾಯ್ಡ್, ಎಲ್‌ಇಡಿ ಮತ್ತು ಸ್ಮಾರ್ಟ್ ಟಿವಿ ಸರಣಿಯಲ್ಲಿ 24 ಇಂಚಿನ ಮಾದರಿಯಿಂದ ಆರಂಭಿಸಿ, 75 ಇಂಚಿನವರೆಗಿನ ವಿವಿಧ ಟಿವಿ ಲಭ್ಯವಿದೆ.
ಥಾಮ್ಸನ್ ಟಿವಿ ಸರಣಿ ಬೆಲೆ ದೇಶದಲ್ಲಿ ₹7,499ರಿಂದ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.