ಭಾನುವಾರ, ಆಗಸ್ಟ್ 14, 2022
19 °C

ದೇಶದಲ್ಲಿ ಶಿಯೋಮಿ ಎಂಐ ಕ್ಯೂಎಲ್‌ಇಡಿ 4ಕೆ ಟಿವಿ ಮೋಡಿ!

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Prajavani

ಅಗ್ಗದ ದರಗಳಲ್ಲಿ ಅತ್ಯಾಕರ್ಷಕ ಉತ್ಪನ್ನಗಳನ್ನು ನೀಡುವ ಮೂಲಕ ಮೋಡಿ ಮಾಡಿರುವ ಚೀನಾ ಮೂಲದ ಕಂಪನಿ ಶಿಯೋಮಿ, ದೇಶಕ್ಕೆ ಎಂಐ ಕ್ಯೂಎಲ್‌ಇಡಿ 4ಕೆ ಟಿವಿ ಪರಿಚಯಿಸಿದೆ. ಇದು ನೇರವಾಗಿ ಸ್ಯಾಮ್‌ಸಂಗ್, ಟಿಸಿಎಲ್ ಹಾಗೂ ಒನ್ ಪ್ಲಸ್ ಕ್ಯೂಎಲ್‌ಇಡಿ ಟಿವಿ ಮಾಡೆಲ್‌ಗಳಿಗೆ ಸ್ಪರ್ಧೆಯನ್ನು ಒಡ್ಡಲಿದೆ.

ಫ್ಯೂಚರ್ ರೆಡಿ ಟೆಕ್ನಾಲಜಿ ತಂತ್ರಗಾರಿಕೆ ಅಡಿಯಲ್ಲಿ ಶಿಯೋಮಿ ಪರಿಚಯಿಸುತ್ತಿರುವ ನೂತನ ಎಂಐ ಟಿವಿ, ಪ್ರೀಮಿಯಂ ವಿಭಾಗದಲ್ಲಿ ಹೆಚ್ಚಿನ ಆಯ್ಕೆಯನ್ನು ನೀಡುತ್ತದೆ.

ಬೆಲೆ ಎಷ್ಟು?
ಶಿಯೋಮಿ ಎಂಐ ಕ್ಯೂಎಲ್‌ಇಡಿ 4ಕೆ ಟಿವಿ ಬೆಲೆ ₹54,999. ಇದು ಸ್ಯಾಮ್‌ಸಂಗ್ ಕ್ಯೂ60ಟಿ, ಸೋನಿ ಎಕ್ಸ್‌800ಎಚ್ ಹಾಗೂ ಎಲ್‌ಜಿ ನ್ಯಾನೋಸೆಲ್ 55 ನ್ಯಾನೋ80 ಮಾದರಿಗಳಿಗೆ ಹೋಲಿಸಿದಾಗ ತುಂಬಾನೇ ಅಗ್ಗವೆನಿಸಿದೆ.

ವಿಶೇಷತೆಗಳು:
ಕ್ಯೂಎಲ್‌ಇಡಿ ಡಿಸ್‌ಪ್ಲೇ ಹೊಂದಿರುವ ಈ ಟಿವಿ, ಎಂಟಿಕೆ 64ಬಿಟ್ ಕ್ವಾಡ್ ಕೋರ್ ಎ55 ಪ್ರೊಸೆಸರ್ ಹಾಗೂ ಮಾಲಿ ಜಿ52 ಗ್ರಾಫಿಕ್ಸ್ ಒಳಗೊಂಡಿದೆ. ಪ್ರಸ್ತುತ ಟಿವಿ ಎಚ್‌ಡಿಆರ್ 10, ಆಂಡ್ರಾಯ್ಡ್ ಟಿವಿ 10 ಹಾಗೂ ಪ್ಯಾಚ್‌ವಾಲ್ ಲಾಂಚರ್ ಹೊಂದಿದೆ. ಹಾಗೆಯೇ 2ಜಿಬಿ RAM, 32 ಜಿಬಿ ಸ್ಟೋರೆಜ್ ಹಾಗೂ ಬ್ಲೂಟೂತ್ 5.0 ವ್ಯವಸ್ಥೆಯನ್ನು ಒಳಗೊಂಡಿದೆ.

ಕ್ವಾಂಟಮ್ ಡಾಟ್ ವಿಶುವಲ್ಸ್, ಡಾಲ್ಬಿ ವಿಷನ್, ಎಚ್‌ಡಿಆರ್‌ 10 ಪ್ಲಸ್ ಡಿಸ್‌ಪ್ಲೇ ಹಾಗೂ 4ಕೆ ಅಲ್ಟ್ರಾ ಎಚ್‌ಡಿ ರೆಸಲ್ಯೂಷನ್ ವಿಶೇಷತೆಯಾಗಿದೆ. ಇದಕ್ಕೆ ತಕ್ಕಂತೆ ಹೈ ಡೆಫಿನಿಷನ್ ಡಾಲ್ಬಿ ಆಡಿಯೋ ಹಾಗೂ ಡಿಟಿಎಸ್ ಎಚ್‌ಡಿ ಫೀಚರ್ಸ್ ಒಳಗೊಂಡಿದೆ.

ಇನ್ನಷ್ಟು ಫೀಚರ್ಸ್:
3 ಎಚ್‌ಡಿಎಂಐ 2.1 ಪೋರ್ಟ್,
ಇಎಆರ್‌ಸಿ,
ಎಎಲ್‌ಎಲ್‌ಎಂ,
ಎವಿ1,
ಯೂನಿವರ್ಸಲ್ ಸರ್ಚ್,
ಕಿಡ್ಸ್ ಮೋಡ್,
ಸ್ಮಾರ್ಟ್ ರೆಕಮಂಡೇಷನ್,
ಲೈವ್ ಚಾನೆಲ್,
ವಿವಿಡ್ ಪಿಕ್ಚರ್ ಎಂಜಿನ್,
ಕ್ವಾಂಟಮ್ ಡಾಟ್,
ಎಲ್‌ಇಡಿ ಬ್ಯಾಕ್‌ಲೈಟ್,
ಹೈಬ್ರಿಡ್ ಲಾಗ್-ಗಮ್ಮಾ (ಎಚ್‌ಎಲ್‌ಜಿ).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು