ಈಗ ಫಿಟ್‌ನೆಸ್‌ಗೆ ಸಂಬಂಧಿಸಿದ ಸ್ಮಾರ್ಟ್‌ವಾಚ್‌ಗಳಿಗಿಂತಲೂ ಬ್ಲುಟೂತ್ ಕಾಲಿಂಗ್ ಆಯ್ಕೆ ಇರುವುದಕ್ಕೆ ಬೇಡಿಕೆ ಹೆಚ್ಚು. ಕಡಿಮೆ ಬೆಲೆಗೆ ಸ್ಮಾರ್ಟ್ ಸಾಧನಗಳನ್ನು ಬಿಡುಗಡೆ ಮಾಡುತ್ತಿರುವ ಪಿಟ್ರಾನ್ ಕಂಪನಿಯು ಬ್ಲುಟೂತ್ ಕಾಲಿಂಗ್ ಮತ್ತು ಫಿಟ್‌ನೆಸ್ ಸೌಲಭ್ಯಗಳು ಇರುವ ಪಿಟ್ರಾನ್ ಫೋರ್ಸ್ ಎಕ್ಸ್10 ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ಆರಂಭಿಕ ಹಂತದ ಫಿಟ್‌ನೆಸ್ ಟ್ರ್ಯಾಕರ್ ಸೌಲಭ್ಯಗಳನ್ನು (ಹೆಲ್ತ್, ಸ್ಪೋರ್ಟ್ ಮೋಡ್ ಮತ್ತು ಆಕ್ಟೀವ್ ಟ್ರ್ಯಾಕರ್ಸ್) ಇದು ಹೊಂದಿದೆ. ಬೆಲೆ ₹1,499.
1.7 ಇಂಚು ಪರದೆ 500ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಮನೆಯೊಳಗೆ ಇದ್ದಾಗ ಬ್ರೈಟ್‌ನೆಸ್ ಸಮಸ್ಯೆ ಅನ್ನಿಸುವುದಿಲ್ಲ. ಆದರೆ ಮನೆಯಿಂದಾಚೆ ಬಂದಾಗ ಬ್ರೈಟ್‌ನೆಸ್ ಸಾಕಾಗುವುದಿಲ್ಲ. ಬ್ರೈಟ್‌ನೆಸ್ ಕಂಟ್ರೋಲ್ ಮಾಡಲೂ ಸಾಧ್ಯವಿಲ್ಲ. ಇದು ಕಿರಿಕಿರಿ ಅನ್ನಿಸುತ್ತದೆ. ಫೋನ್ ಜೊತೆ ಬ್ಲುಟೂತ್ ಮೂಲಕ ಎರಡು ರೀತಿಯಲ್ಲಿ ಸಂಪರ್ಕಿಸಬೇಕು. ಮೊದಲಿಗೆ ಫೋನ್‌ನಲ್ಲಿ ಬ್ಲುಟೂತ್ ಆಯ್ಕೆ ಸಕ್ರಿಯಗೊಳಿಸಿದ ಬಳಿಕ ‘ಪಿಟ್ರಾನ್ ಸ್ಮಾರ್ಟ್ ವಾಚ್’ ಹುಡುಕಿ ಅದನ್ನು ಸಂಪರ್ಕಿಸಬೇಕು. ಆ ಬಳಿಕ ವಾಚ್‌ನಲ್ಲಿ ಕಾಲಿಂಗ್ ಆಯ್ಕೆ ಸಕ್ರಿಯಗೊಳಿಸಲು ‘ಪಿಟ್ರಾನ್ ಆಡಿಯೊ’ ಜೊತೆ ಸಂಪರ್ಕಿಸಬೇಕು. ಮಕ್ಕಳ ಕೈಗೆ ವಾಚ್ ಕೊಟ್ಟಾಗ ಅವರು ಕಾಲ್ ಮಾಡುವುದನ್ನು ತಪ್ಪಿಸಲು ಇದು ಹೆಚ್ಚು ಉಪಯೋಗಕ್ಕೆ ಬರುತ್ತದೆ.
ಬ್ಲುಟೂತ್ ಕಾಲಿಂಗ್ ಇದರ ಹೈಲೈಟ್. ಬಿಲ್ಟ್–ಇನ್ ಸ್ಪೀಕರ್ ಮತ್ತು ಮೈಕ್ರೊಫೋನ್ ಒಳಗೊಂಡಿದ್ದು, ಕಾಲ್ ಗುಣಮಟ್ಟ ಚೆನ್ನಾಗಿದೆ. ದ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ. ಫೋನ್‌ನಲ್ಲಿ ಇರುವ ಕಾಂಟ್ಯಾಕ್ಟ್‌ಗಳನ್ನು ವಾಚ್ ಜೊತೆ ಸಿಂಕ್ ಮಾಡುವ ಆಯ್ಕೆಯನ್ನು ಆ್ಯಪ್ ಮತ್ತು ವಾಚ್ ಎರಡರಲ್ಲಿಯೂ ನೀಡಲಾಗಿದೆ. ವಾಚ್‌ನಲ್ಲಿಯೇ ನಂಬರ್ ಡಯಲ್ ಮಾಡಿ ಕರೆ ಮಾಡುವ ಆಯ್ಕೆಯೂ ಇದರಲ್ಲಿ. ಫೋನ್ ಇರುವಲ್ಲಿಂದ 10 ಮೀಟರ್ ವ್ಯಾಪ್ತಿಯಲ್ಲಿ ಕರೆ ಮಾಡಿದಾಗ ಧ್ವನಿಯು ಸ್ವಷ್ಟವಾಗಿ ಕೇಳಿಸುತ್ತದೆ.
ಟಚ್ ಆಯ್ಕೆಯು ಚೆನ್ನಾಗಿ ಕೆಲಸ ಮಾಡುತ್ತದೆ. ಫೋನ್‌ನೊಂದಿಗೆ ವಾಚ್ ಸಂಪರ್ಕದಲ್ಲಿ ಇದ್ದಾಗ ಆ್ಯಪ್ ಮೂಲಕ ರೈಸ್ ಟು ವೇಕ್ ಅಥವಾ ಟಿಲ್ಟ್ ಟು ವೇಕ್ ಅನ್ನು ಎನೇಬಲ್ ಅಥವಾ ಡಿಸೇಬಲ್ ಮಾಡಬಹುದು.
200ಎಂಎಎಚ್ ಲಿ–ಪಾಲಿ ಬ್ಯಾಟರಿ ಇದೆ.ಬ್ಯಾಟರಿ ಬಾಳಿಕೆ ವಿಷಯದಲ್ಲಿ ಕಂಪನಿ ಇನ್ನಷ್ಟು ಗಮನ ಹರಿಸಬಹುದು. ವಾಚನ್ನು ಕಾಲ್ ಮಾಡಲು ಹೆಚ್ಚಾಗಿ ಬಳಸಿದರೆ ಆಗ ಹೆಚ್ಚೆಂದರೆ ಎರಡು ದಿನ ಬ್ಯಾಟರಿ ಚಾರ್ಜ್ ಉಳಿಯುತ್ತದೆ. ಫಿಟ್‌ನೆಸ್ ಮತ್ತು ಇತರೆ ಸಾಮಾನ್ಯ ಆಯ್ಕೆಗಳನ್ನು ಮಾತ್ರವೇ ಬಳಸುವುದಿದ್ದರೆ ನಾಲ್ಕು ದಿನ ಚಾರ್ಜ್ ಉಳಿಯುತ್ತದೆ. ಆದರೆ, ಬ್ಲುಟೂತ್ ಕಾಲಿಂಗ್‌ಗೆ ಕಂಪನಿಯು ಆದ್ಯತೆ ನೀಡಿರುವ ಸ್ಮಾರ್ಟ್‌ವಾಚ್ ಇದಾಗಿರುವುದರಿಂದ ಕಾಲಿಂಗ್ ಆಯ್ಕೆಯನ್ನು ಬಳಸುವಾಗ ಬ್ಯಾಟರಿ ಬಾಳಿಕೆಯಲ್ಲಿ ಸುಧಾರಣೆ ಬಯಸುವುದು ಸಹಜ.
ಪಿಟ್ರಾನ್ ಫಿಟ್+ ಆ್ಯಪ್: ಈ ಸ್ಮಾರ್ಟ್‌ವಾಚ್ ಬ್ಲುಟೂತ್ 5.0ಗೆ ಬೆಂಬಲಿಸುತ್ತದೆ. ಆಂಡ್ರಾಯ್ಡ್ 8.0 ಮತ್ತು ಅದಕ್ಕಿಂತ ಹೆಚ್ಚಿನದ್ದು ಹಾಗೂ ಐಒಎಸ್ 9.1 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯ ಒಎಸ್ ಇರುವ ಫೋನ್‌ಗಳಿಗೆ ಇದು ಬೆಂಬಲಿಸುತ್ತದೆ. ಫಿಟ್‌ನೆಸ್, ವ್ರಿಸ್ಟ್ ಸೆನ್ಸ್, ಡುನಾಟ್ ಡಿಸ್ಟರ್ಬ್, ಅಲಾರ್ಮ್ ರಿಮೈಂಡರ್ ಫೈಂಡ್, ರಿಮೋಟ್ ಶಟರ್ ಅನ್ನು ಆ್ಯಪ್ ಮೂಲಕವೇ ನಿಯಂತ್ರಿಸಬಹುದು. ಹೀಗೆ ಮಾಡುವಾಗ ಸ್ಮಾರ್ಟ್‌ವಾಚ್ ಜೊತೆ ಸಂಪರ್ಕ ಹೊಂದಿರಬೇಕು.
ಚಾರ್ಜ್ ಆಗಲು ಎರಡು ಗಂಟೆ ಬೇಕಾಗುತ್ತದೆ. ಬೆಲೆಯನ್ನು ಗಮನದಲ್ಲಿ ಇಟ್ಟುಕೊಂಡು ನೊಡುವುದಿದ್ದರೆ ಮಾತ್ರ ಬ್ಯಾಟರಿ ಬಾಳಿಕೆಯ ಬಗ್ಗೆ ಅಷ್ಟೇನೂ ಅಸಮಾಧಾನ ಆಗುವುದಿಲ್ಲ. ಪಿಟ್ರಾನ್ ಫಿಟ್+ ಆ್ಯಪ್‌ನಲ್ಲಿ 150ಕ್ಕೂ ಅಧಿಕ ವಾಚ್ ಫೇಸ್ ಇದೆ. ಅಲ್ಲದೆ, ನಿಮ್ಮದೇ ಆದ ಅಥವಾ ಬೇರೆ ಫೋಟೊವನ್ನು ವಾಲ್‌ಪೇಪರ್‌ನಲ್ಲಿ ಆಗಿಸಬಹುದು.
ಫೋನ್‌ನಲ್ಲಿ ಟೆಕ್ಸ್ಟ್, ವಾಟ್ಸ್‌ಆ್ಯಪ್ ಮೆಸೇಜ್ ಮತ್ತು ನೋಟಿಫಿಕೇಷನ್‌ಗಳನ್ನು ನೋಡಬಹುದು. ಆದರೆ, ಪ್ರತಿಕ್ರಿಯೆ (ಕ್ವಿಕ್ ರಿಪ್ಲೆ)ನೀಡಲು ಸಾಧ್ಯವಿಲ್ಲ. ಗೂಗಲ್ ಅಸಿಸ್ಟ್, ಸಿರಿಗೆ ಬೆಂಬಲ ನೀಡುತ್ತದೆ. ಡ್ಯುಯಲ್ ಮೋಡ್ ಆನ್ ಆಗಿರಬೇಕು. ಇದರ ಬೆಲ್ಟ್ ಮೆದುವಾಗಿದೆ. ಆದರೆ, ದೂಳು ಹಿಡಿಯುತ್ತದೆ. ಇದು ದೊಡ್ಡ ಸಮಸ್ಯೆ ಏನಲ್ಲ. ಹೀಗಿದ್ದರೂ ಬೆಲ್ಟ್‌ನ ಗುಣಮಟ್ಟ ತುಸು ಸುಧಾರಿಸಿದರೆ ದೂಳು ಅಂಟಿಕೊಳ್ಳುವುದನ್ನು ತಪ್ಪಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.