ಬೆಂಗಳೂರು: ಪ್ರಸಕ್ತ ಸಾಲಿನ ಇನ್ಫೊಸಿಸ್ ವಿಜ್ಞಾನ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿಜ್ಞಾನಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ.ಬೆಂಗಳೂರು ಐಐಎಸ್ಸಿವಿಜ್ಞಾನಿ ಜಿ.ಮುಗೇಶ್ ಸಹಿತ ಆರು ವಿಜ್ಞಾನಿಗಳುಇನ್ಫೊಸಿಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇನ್ಫೊಸಿಸ್ ಸಮಾಜ ವಿಜ್ಞಾನ ಪ್ರಶಸ್ತಿಗೆ ಅಮೆರಿಕದಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಆನಂದ ಪಾಂಡ್ಯನ್ ಆಯ್ಕೆಯಾಗಿದ್ದಾರೆ.

ಮಾನವೀಯ ವಿಭಾಗದ ಪ್ರಶಸ್ತಿಗೆ ಐಐಟಿ ಮಂಡಿಯ ಮನು ವಿ.ದೇವದೇವನ್ ಹಾಗೂಜೀವ ವಿಜ್ಞಾನ ಪ್ರಶಸ್ತಿಗೆಹೈದರಾಬಾದ್ನ ಸೆಂಟರ್ ಫಾರ್ ಸೆಲ್ಯುಲಾರ್ ಬಯೊಲಜಿಯ ಮಂಜುಳಾ ರೆಡ್ಡಿ ಆಯ್ಕೆಯಾಗಿದ್ದಾರೆ.

ಬೆಂಗಳೂರು ಐಐಎಸ್ಸಿಯಇನ್ಆರ್ಗಾನಿಕ್ ಮತ್ತುಫಿಸಿಕಲ್ ಕೆಮಿಸ್ಟ್ರಿ ವಿಭಾಗದ ಪ್ರೊಫೆಸರ್ ಜಿ.ಮುಗೇಶ್ ಅವರನ್ನುಭೌತಿಕ ವಿಜ್ಞಾನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗಣಿತ ಪ್ರಶಸ್ತಿಗೆ ಜೂರಿಚ್ ಇಟಿಎಚ್ನ ಸಿದ್ದಾರ್ಥ ಮಿಶ್ರ,ಎಂಜಿನಿಯರಿಂಗ್ ಮತ್ತುಕಂಪ್ಯೂಟರ್ ಪ್ರಶಸ್ತಿಗೆ ಐಐಟಿ ಬಾಂಬೆಯ ಸಿನೀತಾ ಸರವಗಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 1 ಲಕ್ಷ ಡಾಲರ್ (ಸುಮಾರು ₹70 ಲಕ್ಷ) ನಗದು ಒಳಗೊಂಡಿದೆ. 2020ರ ಜನವರಿ 7ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾರ್ಯಕ್ರಮದಲ್ಲಿನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಭಾಗಿಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.