ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ 10ಕ್ಕೆ ವರ್ಷದ ಮೊದಲ ಚಂದ್ರ ಗ್ರಹಣ: ಭಾರತದಲ್ಲಿ ಎಲ್ಲೆಲ್ಲಿ ಕಾಣಿಸಲಿದೆ?

Last Updated 7 ಜನವರಿ 2020, 7:24 IST
ಅಕ್ಷರ ಗಾತ್ರ

ನವದೆಹಲಿ:ಹೊಸ ವರ್ಷದ ಮೊದಲ ಚಂದ್ರಗ್ರಹಣವು ಜನವರಿ 10ಮತ್ತು 11ರಂದುಉಂಟಾಗಲಿದೆ. ಚಂದ್ರಗ್ರಹಣವು ಸುಮಾರು ನಾಲ್ಕು ಗಂಟೆ ಐದು ನಿಮಿಷಗಳ ವರೆಗೆಇರಲಿದ್ದು, ಭಾರತದ ಎಲ್ಲಾ ಭಾಗಗಳಲ್ಲೂ ಗೋಚರಿಸಿದೆ.

ಜನವರಿ 10ರ ರಾತ್ರಿ 10:37 ರಿಂದ ಚಂದ್ರಗ್ರಹಣ ಗೋಚರಿಸಲಿದೆ. ಇದನ್ನುತೋಳ ಚಂದ್ರ ಗ್ರಹಣ (Wolf Moon eclipse) ಎಂದು ಕೂಡ ಕರೆಯಲಾಗುತ್ತದೆ. ಈ ವರ್ಷದಲ್ಲಿ ನಿರೀಕ್ಷಿಸಲಾಗಿರುವ ನಾಲ್ಕುಅರೆನೆರಳು ಅಥವಾಮಸುಕಂಚಿನಚಂದ್ರ ಗ್ರಹಣಗಳಲ್ಲಿ (Penumbral) ಇದು ಮೊದಲನೆಯದು.

ಮಸುಕಂಚಿನಚಂದ್ರ ಗ್ರಹಣ ಎಂದರೆ...

ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ನೇರದಲ್ಲಿ ಇರದ ಸಮಯದಲ್ಲಿ ಸಂಭವಿಸುವ ಗ್ರಹಣವನ್ನು ಅರೆನೆರಳು ಅಥವಾ ಮಸುಕಂಚಿನಚಂದ್ರ ಗ್ರಹಣ ಎನ್ನಲಾಗುತ್ತದೆ.ಈ ವೇಳೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವುದನ್ನುಭೂಮಿಯ ಕೆಲ ಭಾಗ ತಡೆಯುತ್ತದೆ. ಇದರಿಂದ ಚಂದ್ರನ ಮೇಲೆ ಭೂಮಿಯ ಪಾರ್ಶ್ವ ನೆರಳುಆವರಿಸಿಕೊಳ್ಳುವುದರಿಂದ ಚಂದ್ರನ ಪೂರ್ಣ ಭಾಗ ಇಲ್ಲವೇ ಕೆಲ ಭಾಗ ನೆರಳಾಗುತ್ತದೆ.

ಭಾಗಶಃ ಚಂದ್ರಗ್ರಹಣದ ಸಮಯದಲ್ಲಿ, ಚಂದ್ರನ ಮೇಲ್ಮೈನ ಒಂದು ಭಾಗವು ಭೂಮಿಯ ನೆರಳಿನಿಂದ ಆವರಿಸಿದರೆ,ಉಳಿದ ಭಾಗವು ಬೆಳಕು ಸುಳಿಯದ ಭಾಗದಿಂದ ಗಾಢ ಛಾಯೆಯ ಪ್ರಭಾವಕ್ಕೆ ಒಳಗಾಗುತ್ತದೆ.

ಲಭ್ಯವಿರುವ ಮಾಹಿತಿ ಪ್ರಕಾರ, ಜನವರಿ 10ರ ಚಂದ್ರಗ್ರಹಣವು ಯೂರೋಪ್, ಆಫ್ರಿಕಾ, ಉತ್ತರ ಅಮೆರಿಕ, ಏಷ್ಯಾ, ಆಸ್ಟ್ರೇಲಿಯ, ದಕ್ಷಿಣ ಅಮೆರಿಕದ ಪೂರ್ವಭಾಗ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಆರ್ಕ್ಟಿಕ್‌ನಲ್ಲಿಗೋಚರಿಸಲಿದೆ. 2020ರ ಮೊದಲ ಚಂದ್ರಗ್ರಹಣವನ್ನು ಭಾರತೀಯರು ಕಣ್ತುಂಬಿಕೊಳ್ಳಬಹುದು.

ಭಾರತದಲ್ಲಿ ಚಂದ್ರಗ್ರಹಣವು ಜನವರಿ 10ರಂದು ರಾತ್ರಿ 10.37ರಿಂದ ಜನವರಿ 11ರ ನಸುಕಿನ 2.42ರವರೆಗೂ ಸಂಭವಿಸಲಿದೆ. ಚಂದ್ರಗ್ರಹಣವು 10.37ಕ್ಕೆ ಶುರುವಾಗಿ ಸಂಪೂರ್ಣ ಚಂದ್ರಗ್ರಹಣವು ಜನವರಿ 11ರ 12.40ಕ್ಕೆಗೋಚರಿಸಲಿದೆ. ನಂತರ 2.42ಕ್ಕೆ ಅಂತ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT