ಭಾನುವಾರ, ಸೆಪ್ಟೆಂಬರ್ 20, 2020
21 °C

ಸ್ಪೇಸ್‌ಎಕ್ಸ್ ಬಾಹ್ಯಾಕಾಶಯಾನ ಯಶಸ್ವಿ: ವಾಪಸಾದ ನಾಸಾ ಗಗನಯಾತ್ರಿಗಳು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Nasa SpaceX

ವಾಷಿಂಗ್ಟನ್: ಅಮೆರಿಕದ ಖಾಸಗಿ ರಾಕೆಟ್ ಕಂಪನಿ ಸ್ಪೇಸ್ಎಕ್ಸ್ ಹಮ್ಮಿಕೊಂಡಿದ್ದ ಮಾನವಸಹಿತ ಬಾಹ್ಯಾಕಾಶಯಾನ ಯಶಸ್ವಿಯಾಗಿದೆ. ಗಗನಯಾತ್ರಿಗಳಾದ ರಾಬರ್ಟ್ ಬೆಹೆನ್ಕೆನ್ ಹಾಗೂ ಡೌಗ್ಲಾಸ್ ಹರ್ಲೀ ಸುರಕ್ಷಿತವಾಗಿ ‘ಮೆಕ್ಸಿಕೊ ಗಲ್ಫ್‌’ನಲ್ಲಿ ಭಾನುವಾರ ಇಳಿದಿದ್ದಾರೆ.

‌ಈ ಕುರಿತು ಅಮೆರಿಕದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾ ಟ್ವೀಟ್ ಮಾಡಿದ್ದು, ಗಗನಯಾತ್ರಿಗಳನ್ನು ಹೊತ್ತ ಪ್ಯಾರಾಚೂಟ್‌ ಸಮುದ್ರಕ್ಕಿಳಿಯುತ್ತಿರುವ ವಿಡಿಯೊವನ್ನೂ ಪ್ರಕಟಿಸಿದೆ. ‘ಸ್ಪೇಸ್‌ಎಕ್ಸ್‌ಗೆ ಧನ್ಯವಾದಗಳು. ಬೆಹೆನ್ಕೆನ್ ಹಾಗೂ ಡೌಗ್ಲಾಸ್ ವಾಪಸಾಗಿದ್ದಾರೆ. 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ಗಗನಯಾತ್ರಿಗಳು ಸಾಗರ ಲ್ಯಾಂಡಿಂಗ್‌ನಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಟ್ವೀಟ್ ಉಲ್ಲೇಖಿಸಿದೆ.

1975ರ ಬಳಿಕ ಇದೇ ಮೊದಲ ಬಾರಿಗೆ ನಾಸಾ ಗಗನಯಾತ್ರಿಗಳು ಸಮುದ್ರದಲ್ಲಿ ಲ್ಯಾಂಡಿಂಗ್ ಆಗಿದ್ದಾರೆ.

ಮೇ 31ರಂದು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿತ್ತು. ‘ಸ್ಪೇಸ್‌ಎಕ್ಸ್ ಡೆಮೋ- 2 ಮಿಶನ್’ ಎನ್ನುವ ಮಾನವಸಹಿತ ಗಗನಯಾನ ಯೋಜನೆ ಇದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು