ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಶಾ ಬಾಂದ್ಲಾ ಬಾಹ್ಯಾಕಾಶ ಯಾನ ಮಾಡಲಿರುವ 2ನೇ ಭಾರತೀಯ ಸಂಜಾತೆ

Last Updated 3 ಜುಲೈ 2021, 10:10 IST
ಅಕ್ಷರ ಗಾತ್ರ

ನವದೆಹಲಿ: ಬಾಹ್ಯಾಕಾಶ ಯಾನ ನಡೆಸಲಿರುವ ಭಾರತ ಮೂಲದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಸಿರಿಶಾ ಬಾಂದ್ಲಾ ಪಾತ್ರರಾಗಲಿದ್ದಾರೆ.

ಮೊದಲ ಭಾರತ ಸಂಜಾತೆ ಮಹಿಳಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಅದೇ ಹಾದಿ ತುಳಿದಿರುವ ಸಿರಿಶಾ, ಜುಲೈ 11ರಂದು ಅಂತರಿಕ್ಷ ಯಾನ ನಡೆಸಲಿದ್ದಾರೆ.

ವರ್ಜಿನ್ ಗ್ಯಾಲಕ್ಟಿಕ್‌ನ 'ವಿಎಸ್‌ಎಸ್ ಯೂನಿಟಿ' ಗಗನ ನೌಕೆಯಲ್ಲಿ ಪ್ರಯಾಣಿಸಲಿರುವ ಆರು ಮಂದಿ ಗಗನಯಾತ್ರಿಗಳಲ್ಲಿ ಸಿರಿಶಾ ಓರ್ವರಾಗಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಲಾಗಿದ್ದು, ಸಂಸ್ಥಾಪಕ ರಿಚರ್ಡ್ ಬ್ರಾನ್ಸನ್ ಸೇರಿದಂತೆ ಆರು ಗನನಯಾತ್ರಿಗಳನ್ನು ಹೊಂದಿರುವ ಗಗನ ನೌಕೆಯು ಮೆಕ್ಸಿಕೊದಿಂದ ಉಡ್ಡಯನ ನಡೆಸಲಿವೆ.

34 ವರ್ಷದ ಏರೋನಾಟಿಕಲ್ ಎಂಜಿನಿಯರ್, ಪರ್ದ್ಯೂ ವಿಶ್ವವಿದ್ಯಾಲಯದ ಪದವೀಧರೆ ಸಿರಿಶಾ, 2015ರಲ್ಲಿ ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆಯಲ್ಲಿ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಆಕೆ ಸಂಸ್ಥೆಯಲ್ಲಿ ಸರ್ಕಾರಿ ವ್ಯವಸ್ಥೆಗಳ ಉಪಾಧ್ಯಕ್ಷೆ ಸ್ಥಾನವನ್ನು ಹೊಂದಿದ್ದಾರೆ. ಜಾರ್ಜ್‌ಟೌನ್ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬ್ಯುಸಿನೆಸ್ ಆಡ್ಮಿನಿಸ್ಟ್ರೇಷನ್ ಪದವೀಧರೆ ಕೂಡಾ ಆಗಿದ್ದಾರೆ.

ಸಿರಿಶಾಗೆ ಕುಟುಂಬ, ಸ್ನೇಹಿತರು ಹಾಗೂ ಆಪ್ತ ಬಳಗದಿಂದ ವ್ಯಾಪಕ ಬೆಂಬಲ ದೊರಕಿವೆ. ನಿನ್ನೆಯಿಂದಲೇ ಸಾಕಷ್ಟು ಶುಭ ಹಾರೈಕೆ ಸಂದೇಶಗಳು ಬರುತ್ತಿವೆ ಎಂದು ನುಡಿದಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಸಿರಿಶಾ ಬಳಿಕ ಅಮೆರಿಕದ ಹೂಸ್ಟನ್‌ನಲ್ಲಿ ಬೆಳೆದರು. ಈಗ ಕಲ್ಪನಾ ಚಾವ್ಲಾ ಬಳಿಕ ಬಾಹ್ಯಾಕಾಶಕ್ಕೆ ತೆರಳಲಿರುವ ಭಾರತ ಮೂಲದ ಎರಡನೇ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಒಟ್ಟಾರೆಯಾಗಿ ಈ ಕೀರ್ತಿ ಮೆರೆದ ನಾಲ್ಕನೇ ಅನಿವಾಸಿ ಭಾರತೀಯರಾಗಲಿದ್ದಾರೆ. ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ ಪ್ರಥಮ ಭಾರತೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT