ವಿಜ್ಞಾನ ಪ್ರಪಂಚ ಒಂದಿಷ್ಟು ಕೌತುಕಗಳು

7

ವಿಜ್ಞಾನ ಪ್ರಪಂಚ ಒಂದಿಷ್ಟು ಕೌತುಕಗಳು

Published:
Updated:

1. ಧರೆಯ ಆದಿಕಾಲದ ಸಾಗರಾವಾರದ ಒಂದು ಚಿತ್ರಣ ಇಲ್ಲಿದೆ (ಚಿತ್ರ-1). 450 ಕೋಟಿ ವರ್ಷ ವಯಸ್ಸಾಗಿರುವ ನಮ್ಮ ಭೂಮಿಯಲ್ಲಿ ಸಾಗರಗಳು ಮೈದಳೆದು ಈವರೆಗೆ ಎಷ್ಟು ಕಾಲ ಸಂದಿದೆ ಗೊತ್ತೇ?
ಅ. 430 ಕೋಟಿ ವರ್ಷ 
ಬ. 380 ಕೋಟಿ ವರ್ಷ
ಕ. 260 ಕೋಟಿ ವರ್ಷ 
ಡ. 170 ಕೋಟಿ ವರ್ಷ

2. ಗೂಡಿನಲ್ಲಿ ಮರಿಗಳೊಡನಿರುವ ಅತ್ಯಂತ ಪರಿಚಿತ ಹಕ್ಕಿ ವಿಧವೊಂದು ಚಿತ್ರ-2ರಲ್ಲಿದೆ. ಈ ಹಕ್ಕಿಯನ್ನು ಗುರುತಿಸಬಲ್ಲಿರಾ? 
ಅ. ಕೊಕ್ಕರೆ→→ಬ. ಈಗ್ರೆಟ್ 
ಕ. ಪೆಲಿಕನ್ →→ಡ. ಹದ್ದು

3. ಸೌರವ್ಯೂಹದ ಅತ್ಯಂತ ದೈತ್ಯ ಗ್ರಹ ಗುರು ಮತ್ತು ಅದರ ನಾಲ್ಕು ಪ್ರಧಾನ ದೈತ್ಯ ಚಂದ್ರರು ಚಿತ್ರ-3ರಲ್ಲಿವೆ. ಸೌರವ್ಯೂಹದ ಕೆಲವು ಪ್ರಸಿದ್ಧ ಉಪಗ್ರಹಗಳ ಈ ಪಟ್ಟಿಯಲ್ಲಿ ಚಿತ್ರದಲ್ಲಿರುವ ಚಂದ್ರರನ್ನು ಪತ್ತೆ ಮಾಡಿ:
ಅ. ಟೈಟಾನ್ →ಬ. ಅಯೋ 
ಕ. ಹೈಪರಿಯಾನ್ →ಡ. ಟ್ರೈಟಾನ್ 
ಇ. ಯೂರೋಪಾ →ಈ. ಚಾರನ್ 
ಉ. ಮಿರಾಂಡಾ →ಟ. ಕ್ಯಾಲಿಸ್ಟೋ 
ಣ. ಗ್ಯಾನಿಮೀಡ್ →ಸ. ಡೀಮಾಸ್

4. ಸ್ತನಿ ವರ್ಗಕ್ಕೆ ಸೇರಿದ್ದರೂ ನೇರವಾಗಿ ಮರಿಯನ್ನು ಪ್ರಸವಿಸದೆ ಮೊಟ್ಟೆ ಇಟ್ಟು ಮರಿಮಾಡುವ ಪ್ರಾಣಿಗಳ ಎರಡೇ ಎರಡು ವಿಧಗಳಿವೆ: ಅವುಗಳಲ್ಲೊಂದಾದ ‘ಎಖಿಡ್ನಾ’ ಚಿತ್ರ-4ರಲ್ಲಿದೆ. ಹಾಗೆ ಮೊಟ್ಟೆ ಇಟ್ಟು ಮರಿ ಮಾಡುವ ಮತ್ತೊಂದು ಸ್ತನಿ ಯಾವುದು?
ಅ. ಬಾವಲಿ →→ಬ. ವಲ್ಲಭೀ 
ಕ. ಪ್ಯಾಂಗೋಲಿನ್ →ಡ. ಪ್ಲಾಟಿಪಸ್

5. ಅತ್ಯಾಕರ್ಷಕ ಹಕ್ಕಿಗಳಾದ ಗಿಣಿಗಳ ಒಂದು ವಿಧ ಚಿತ್ರ-5ರಲ್ಲಿದೆ. ಗಿಣಿಗಳಷ್ಟೇ ಅಲ್ಲದೆ ಸಕಲ ಹಕ್ಕಿ ಪ್ರಭೇದಗಳ ಗರಿಷ್ಠ ಸಂಖ್ಯೆ ಮತ್ತು ದಟ್ಟಣೆ ದಕ್ಷಿಣ ಅಮೆರಿಕದಲ್ಲಿದೆ. ಹಾಗೆಯೇ ಸರೀಸೃಪ ಪ್ರಭೇದಗಳ ಗರಿಷ್ಠ ಸಂಖ್ಯೆ ಮತ್ತು ದಟ್ಟಣೆ ಯಾವ ಭೂ ಖಂಡದಲ್ಲಿದೆ? 
ಅ. ಆಸ್ಟ್ರೇಲಿಯಾ →ಬ. ಏಷ್ಯಾ 
ಕ. ಆಫ್ರಿಕಾ →→ಡ. ಯುರೋಪ್

6. ಆಸ್ಟ್ರೇಲಿಯಾ ಖಂಡದ ಸುಪ್ರಸಿದ್ಧ ಸಂಚಿ ಸ್ತನಿ (ಮಾರ್ಸೂಪಿಯಲ್) ಕಾಂಗರೂದಂತೆಯೇ ಅದೇ ಖಂಡದ, ಅದೇ ವರ್ಗದ ಇನ್ನೊಂದು ಪ್ರಸಿದ್ಧ ಪ್ರಾಣಿ ಚಿತ್ರ-6ರಲ್ಲಿದೆ. ಯಾವುದು ಈ ಪ್ರಾಣಿ? 
ಅ. ವೂಂಬ್ಯಾಟ್ →ಬ. ಓಪಾಸಂ 
ಕ. ಕೂವಾಲೇ →ಡ. ಕ್ವೊಕ್ಕಾ

7. ಜೇಡದಿಂದ ನೇಯಲ್ಪಟ್ಟಿರುವ ವಿಶಿಷ್ಟ ಬಗೆಯ ರೇಷ್ಮೆ ನಿರ್ಮಿತಿಯೊಂದು ಚಿತ್ರ-7ರಲ್ಲಿದೆ. ಈ ಜೇಡ ನಿರ್ಮಿತಿಯ ಉದ್ದೇಶ ಏನು? 
ಅ. ಸುರಕ್ಷಿತ ವಸತಿ  
ಬ. ಆಹಾರ ಕೀಟಗಳ ಆಕರ್ಷಣೆ 
ಕ. ಕೀಟಗಳ ಸೆರೆ 
ಡ. ಜೇಡದ ಮೊಟ್ಟೆಗಳಿಗೆ ಭದ್ರ ಗೂಡು

8. ಖನಿಜಗಳು, ಶಿಲೆಗಳು ಮತ್ತಿತರ ವಸ್ತುಗಳ ಸ್ಯಾಂಪಲ್‌ಗಳನ್ನು ವಿಪರೀತ ಒತ್ತಡ ಮತ್ತು ಶಾಖಕ್ಕೆ ಒಳಪಡಿಸಿ ಅವುಗಳಲ್ಲಾಗುವ ಮಾರ್ಪಾಡುಗಳನ್ನು ಅಭ್ಯಸಿಸಲು ನೆರವಾಗುವ ಅತ್ಯಂತ ವಿಶಿಷ್ಟ ವೈಜ್ಞಾನಿಕ ಸಾಧನವೊಂದು ಚಿತ್ರ-8ರಲ್ಲಿದೆ. ಈ ಸಾಧನ ಗೊತ್ತೇ? 
ಅ. ಲೇಸರ್ ಜನರೇಟರ್ 
ಬ. ಬೆಂಚ್ ಪ್ರೆಸ್ 
ಕ. ಏರ್ ಕಂಪ್ರೆಸರ್ 
ಡ. ಡೈಮಂಡ್ ಆನ್ವಿಲ್

9. ಇರುಳಿನಾಗಸದಲ್ಲಿ ಬರಿಗಣ್ಣಿಗೇ ಅತ್ಯಂತ ಉಜ್ವಲವಾಗಿ ಗೋಚರಿಸುವ ನಮ್ಮ ಚಂದ್ರ ಮತ್ತು ಒಂದು ಗ್ರಹ ಚಿತ್ರ-9ರಲ್ಲಿವೆ. ಆ ಅತ್ಯಂತ ಉಜ್ವಲ ಹೊಳಪಿನ ಗ್ರಹ ಯಾವುದು?
ಅ. ಗುರು ಗ್ರಹ ಬ. ಮಂಗಳ ಗ್ರಹ 
ಕ. ಶುಕ್ರ ಗ್ರಹ ಡ. ಶನಿ ಗ್ರಹ

10. ನಮ್ಮ ಸೌರವ್ಯೂಹದ ಹೊರಗಿನ ಗ್ರಹವೊಂದರ ದೃಶ್ಯ ಚಿತ್ರ-10ರಲ್ಲಿದೆ. ಅನ್ಯಗ್ರಹಗಳನ್ನು ಪತ್ತೆಹಚ್ಚಲೆಂದೇ ಇತ್ತೀಚೆಗೆ ವಿಶೇಷ ಕೃತಕ ಉಪಗ್ರಹವೊಂದನ್ನು ಅಂತರಿಕ್ಷಕ್ಕೆ ಹಾರಿಬಿಡಲಾಗಿದೆ. ಆ ಅತ್ಯಾಧುನಿಕ ಉಪಗ್ರಹ ಯಾವುದು? 
ಅ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್  
ಬ. ಟೆಸ್ (TESS) 
ಕ. ಪಾರ್ಕರ್ ಸೋಲಾರ್ ಪ್ರೋಬ್ 
ಡ. ಕೆಪ್ಲರ್ ಸ್ಪೇಸ್ ಟೆಲಿಸ್ಕೋಪ್

11. ಪುಟ್ಟ ಗಾತ್ರದ, ಆಕರ್ಷಕ ವರ್ಣದ ಹಕ್ಕಿ ಗುಂಪೊಂದು ಚಿತ್ರ-11ರಲ್ಲಿದೆ. ಈ ಹಕ್ಕಿಗಳನ್ನು ಗುರುತಿಸಬಲ್ಲಿರಾ? 
ಅ. ಜೇನ್ನೊಣ ಭಕ್ಷಕ 
ಬ. ನೊಣ ಹಿಡುಕ 
ಕ. ಝೇಂಕಾರದ ಹಕ್ಕಿ 
ಡ. ಸೂರಕ್ಕಿ

12. ಧರೆಯ ಒಂದೇ ಒಂದು ದ್ವೀಪಕ್ಕೆ ಸೀಮಿತವಾದ ವಾಸ್ತವ್ಯ ಪಡೆದಿರುವ, ಪ್ರೈಮೇಟ್‌ಗಳ ಒಂದು ವಿಶಿಷ್ಟ ವಿಖ್ಯಾತ ವಿಧ ಸಿಫಾಕಾ ಚಿತ್ರ-12ರಲ್ಲಿದೆ. ಸಿಫಾಕಾಗಳು ನೆಲೆಸಿರುವ ದ್ವೀಪ ಯಾವುದು? 
‌ಅ. ನ್ಯೂಜಿಲೆಂಡ್
ಬ. ಮಡಗಾಸ್ಕರ್ 
ಕ. ಶ್ರೀಲಂಕಾ
ಡ. ಗ್ಯಾಲಪಗೋಸ್

13. ಆಫ್ರಿಕಾ ಖಂಡದಲ್ಲಿ ಮಾತ್ರವೇ ನೈಸರ್ಗಿಕವಾಗಿ ನೆಲೆಸಿರುವ, ಜಿಂಕೆಗಳ ವರ್ಗಕ್ಕೆ ಸೇರಿರುವ ಪ್ರಾಣಿ ನ್ಯಾಲಾ ಚಿತ್ರ-13ರಲ್ಲಿದೆ. ಜಿಂಕೆಗಳ ವರ್ಗಕ್ಕೇ ಸೇರಿರುವ ಪ್ರಾಣಿಗಳ ಈ ಪಟ್ಟಿಯಲ್ಲಿ ಯಾವುವು ಆಫ್ರಿಕಾ ಖಂಡಕ್ಕಷ್ಟೇ ಸೀಮಿತವಾಗಿವೆ? 
ಅ. ಕೆಂಪು ಚಿಗರೆ →ಬ. ಇಂಪಾಲಾ 
ಕ. ಸ್ಪ್ರಿಂಗ್ ಬಾಕ್ →ಡ. ಕಪ್ಪು ಜಿಂಕೆ 
ಇ. ಕುಡು →→ಈ. ಆರಿಕ್ಸ್ 
ಉ. ಜಮ್ಸ್ ಬಾಕ್ →ಟ. ಚುಕ್ಕಿ ಜಿಂಕೆ 
ಣ. ಸಾಂಬಾರ್ →ಸ. ಕ್ಯಾರಿಬೂ

14. ಹಿಮಲೋಕದ ಪ್ರಸಿದ್ಧ ಪ್ರಾಣಿ ಪೋಲಾರ್ ಬೇರ್ ಚಿತ್ರ-14ರಲ್ಲಿದೆ. ಶ್ವೇತ ವರ್ಣದ, ಭಾರೀ ಗಾತ್ರದ ಈ ಪ್ರಸಿದ್ಧ ಬೇಟೆಗಾರ ಪ್ರಾಣಿಗಳನ್ನು ಈ ಕೆಳಗೆ ಹೆಸರಿಸಿರುವ ಯಾವ ದೇಶ/ಪ್ರದೇಶಗಳಲ್ಲಿ ಕಾಣಬಹುದು? 
ಅ. ಗ್ರೀನ್ ಲ್ಯಾಂಡ್ →ಬ. ಸೈಬೀರಿಯಾ 
ಕ. ಅಂಟಾರ್ಕ್ಟಿಕಾ →ಡ. ಅಲಾಸ್ಕ 
ಇ. ಹವಾಯ್ →ಈ. ಜಪಾನ್

 ಉತ್ತರಗಳು:

1. ಬ. 380 ಕೋಟಿ ವರ್ಷ

2. ಬ. ಈಗ್ರೆಟ್

3. ಬ, ಇ, ಟ ಮತ್ತು ಣ

4. ಡ. ಪ್ಲಾಟಿಪಸ್

5. ಅ. ಆಸ್ಟ್ರೇಲಿಯಾ

6. ಕ. ಕೂವಾಲೇ

7. ಡ. ಮೊಟ್ಟೆಗಳಿಗೆ ಗೂಡು

8. ಡ. ಡೈಮಂಡ್ ಅನ್ವಿಲ್

9. ಕ. ಶುಕ್ರ ಗ್ರಹ

10. ಬ. ಟೆಸ್ (ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೇ ಸ್ಯಾಟಲೈಟ್)

11. ಅ. ಜೇನ್ನೊಣ ಭಕ್ಷಕ

12. ಬ. ಮಡಗಾಸ್ಕರ್

13. ಬ, ಕ, ಇ, ಈ ಮತ್ತು ಉ

14. ಅ ಮತ್ತು ಡ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !