ಶುಕ್ರವಾರ, ಜೂನ್ 18, 2021
28 °C
Kerala poet FB account suspended for posting satire clip on BJP poll defeat

ಬಿಜೆಪಿ ಸೋಲಿನ ವಿಡಂಬನಾತ್ಮಕ ವಿಡಿಯೊ: ಖಾತೆಗೆ ಫೇಸ್‌‌ಬುಕ್ ನಿರ್ಬಂಧ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಚ್ಚಿ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕುರಿತಂತೆ ವಿಡಂಬನಾತ್ಮಕ ಪೋಸ್ಟ್‌ ಹಾಕಿದ್ದಕ್ಕಾಗಿ ಹೆಸರಾಂತ ಕವಿ ಕೆ.ಸಚ್ಚಿದಾನಂದನ್‌ ಅವರ ಫೇಸ್‌ಬುಕ್‌ ಖಾತೆಯನ್ನು ಅಮಾನತ್ತಿನಲ್ಲಿ ಇಡಲಾಗಿದೆ.

‘24 ಗಂಟೆ ನಾನು ಯಾವುದೇ ಪೋಸ್ಟ್‌ ಕುರಿತು ಲೈಕ್‌ ಮಾಡುವಂತಿಲ್ಲ, ಅಭಿಪ್ರಾಯ ಹಾಕುವಂತಿಲ್ಲ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ನೇರ ಚರ್ಚೆಯಲ್ಲಿ ಭಾಗವಹಿಸದಂತೆ 30 ದಿನಗಳ ನಿರ್ಬಂಧ ವಿಧಿಸಲಾಗಿದೆ’ ಎಂದು ಅವರು ತಿಳಿಸಿದರು.

ಸಚ್ಚಿದಾನಂದನ್‌ ಅವರು ಕೇರಳ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ. ‘ನಾನು ಬಿಜೆಪಿ ಪರಾಭವ ಕುರಿತು ವಿಡಂಬನಾತ್ಮಕ ವಿಡಿಯೊ ಹಂಚಿಕೊಳ್ಳಲು ಬಯಸಿದಾಗ, ನಿಯಮ ಉಲ್ಲಂಘನೆ ಆಗಿದೆ ಎಂಬಂತೆ ಫೇಸ್‌ಬುಕ್‌ನಿಂದ ಒಂದು ಸಂದೇಶ ಬಂದಿತು. ಸಾಕಷ್ಟು ಹಂಚಿಕೆಯಾಗಿರುವ ಆ ವಿಡಿಯೋ ನಿಂದನಾತ್ಮಕವಾಗಿರಲಿಲ್ಲ’ ಎಂದು ತಿಳಿಸಿದರು.

ಜಾಲತಾಣಗಳಲ್ಲಿ ಬಲಪಂಥೀಯ ಚಿಂತಕರ ನಡೆಗಳನ್ನು ಗಮನಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು. ಫೇಸ್‌ಬುಕ್‌ ಕ್ರಮವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಬಿಜೆಪಿ, ‘ಎಲ್ಲದಕ್ಕೂ ಮಿತಿ ಇರುತ್ತದೆ. ಸಾಮಾಜಿಕ ಜಾಲತಾಣಗಳ ಸಮುದಾಯ ಮಾನದಂಡಗಳನ್ನು ಉಲ್ಲಂಘಿಸಲು ಯಾರಿಗೂ ಅವಕಾಶ ಇರುವುದಿಲ್ಲ’ ಎಂದು ಹೇಳಿದೆ.

ಫೇಸ್‌ಬುಕ್‌ ಕ್ರಮವನ್ನು ಕಾಂಗ್ರೆಸ್‌ ಮುಖಂಡ ಶಶಿ ತರೂರ್ ಮತ್ತು ಸಿಪಿಎಂ ನಾಯಕ ಟಿ.ಎಂ.ಥಾಮಸ್‌ ಐಸಾಕ್‌ ಅವರು ಟೀಕಿಸಿದ್ದಾರೆ. ‘ನಮ್ಮ ರಾಜಕಾರಣದಲ್ಲಿ ಸೆನ್ಸಾರ್‌ಷಿಪ್‌ಗೆ ಅವಕಾಶ ನೀಡಬಾರದು’ ಎಂದು ಐಸಾಕ್‌ ಪ‍್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು