ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮರಳಿದ ರಾಜೀವ್‌ ಚಂದ್ರಶೇಖರ್‌ ಟ್ವಿಟರ್‌ ಖಾತೆಯ 'ನೀಲಿ ಗುರುತು'

ಅಕ್ಷರ ಗಾತ್ರ

ನವದೆಹಲಿ: ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ನೂತನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ನೀಲಿ ಬಣ್ಣದ ಗುರುತು (ಬ್ಲೂ ಬ್ಯಾಡ್ಜ್‌) ಸೋಮವಾರ ದಿಢೀರ್‌ ಕಣ್ಮರೆಯಾಗಿತ್ತು. ಕೆಲವು ನಿಮಿಷಗಳ ನಂತರ ಮತ್ತೆ ಬ್ಲೂಟಿಕ್‌ ಕಾಣಿಸಿಕೊಂಡಿದೆ.

ಜುಲೈ 7ರಂದು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ರಾಜೀವ್‌ ಚಂದ್ರಶೇಖರ್‌, @rajeev_mp ಎಂದಿದ್ದ ಟ್ವಿಟರ್‌ನ ಖಾತೆಯ ಹೆಸರನ್ನು (ಯೂಸರ್‌ನೇಮ್‌) @Rajeev_GoI ಎಂದು ಬದಲಿಸಿಕೊಂಡಿದ್ದಾರೆ. ಟ್ವಿಟರ್‌ ಖಾತೆಯ ಅಧಿಕೃತತೆ ಪರಿಶೀಲನೆ ನೀತಿಯ ಪ್ರಕಾರ, ಟ್ವಿಟರ್‌ ಬಳಕೆದಾರ ಈಗಾಗಲೇ ನಮೂದಿಸಿರುವ ಹೆಸರು ಬದಲಾಯಿಸಿದರೆ ತಾನಾಗಿಯೇ ನೀಲಿ ಬಣ್ಣದ ಗುರುತು ಇಲ್ಲವಾಗುತ್ತದೆ.

ರಾಜೀವ್ ಅವರ ಟ್ವಿಟರ್ ಖಾತೆಯಲ್ಲಿ ನೀಲಿ ಗುರುತು ಇಲ್ಲವಾಗಿರುವುದು, ಮತ್ತೆ ಮರಳಿರುವುದು
ರಾಜೀವ್ ಅವರ ಟ್ವಿಟರ್ ಖಾತೆಯಲ್ಲಿ ನೀಲಿ ಗುರುತು ಇಲ್ಲವಾಗಿರುವುದು, ಮತ್ತೆ ಮರಳಿರುವುದು

ಟ್ವಿಟರ್‌ ನಿಯಮಗಳ ಪ್ರಕಾರ, ಖಾತೆಯಲ್ಲಿ ಆರು ತಿಂಗಳ ವರೆಗೂ ಚಟುವಟಿಕೆಗಳು ಇಲ್ಲವಾದರೆ, ಆಗಲೂ ಸಹ ನೀಲಿ ಬಣ್ಣದ ಗುರುತು ಮರೆಯಾಗುತ್ತದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಇಂಥದ್ದೇ ಕಾರಣದಿಂದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್‌ ಖಾತೆಯಲ್ಲಿ ಅಧಿಕೃತತೆಯ ಗುರುತು ಜೂನ್‌ನಲ್ಲಿ ಇಲ್ಲವಾಗಿತ್ತು. ಈ ಪ್ರಕರಣದಲ್ಲಿಯೂ ಕೆಲವೇ ಸಮಯದಲ್ಲಿ ನೀಲಿ ಗುರುತು ಮರಳಿ ಬಂದಿತ್ತು.

ಹೊಸ ಮಾಹಿತಿ ಮತ್ತು ತಂತ್ರಜ್ಞಾನ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್‌ ನಡುವೆ ಸಂಘರ್ಷ ಶಮನಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಸುದ್ದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT