ಬೆಂಗಳೂರು: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಹೊಸ ಅಪ್‌ಡೇಟ್ ಪರಿಚಯಿಸಿದೆ. ಆ್ಯಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ನೂತನ ಅಪ್‌ಡೇಟ್ ಹಂತಹಂತವಾಗಿ ಲಭ್ಯವಾಗುತ್ತಿದೆ.
ಏನಿದೆ ವಿಶೇಷ?
ಇನ್ನು ಮುಂದೆ ನೂತನ ಅಪ್‌ಡೇಟೆಡ್ ವಾಟ್ಸ್ಆ್ಯಪ್ ಆವೃತ್ತಿ ಬಳಸುವವರು ತಮ್ಮ ಮೊಬೈಲ್‌ನಿಂದ ವಾಟ್ಸ್ಆ್ಯಪ್ ಮೂಲಕ ಫೋಟೊ ಮತ್ತು ವಿಡಿಯೊಗಳನ್ನು ‘ವ್ಯೂ ಒನ್ಸ್’ ಆಯ್ಕೆಯ ಮೂಲಕ ಕಳುಹಿಸಬಹುದು.
ವಾಟ್ಸ್ಆ್ಯಪ್‌ನಲ್ಲಿ ವ್ಯೂ ಒನ್ಸ್ ಆಯ್ಕೆ ನೀಡಿದರೆ, ನೀವು ಕಳುಹಿಸಿದ ಫೋಟೊ ಮತ್ತು ವಿಡಿಯೊ ಸ್ವೀಕರಿಸಿದವರು, ಅದನ್ನು ಒಮ್ಮೆ ನೋಡಿದ ಬಳಿಕ ತಾನಾಗಿಯೇ ಅಳಿಸಿ ಹೋಗಲಿದೆ. ಇದರಿಂದ ಫೋಟೊ ಅಥವಾ ವಿಡಿಯೋ ಚಾಟ್‌ನಲ್ಲಿ ಸೇವ್ ಆಗುವುದಿಲ್ಲ. ಜತೆಗೆ ಗ್ಯಾಲರಿಯಲ್ಲೂ ಇರುವುದಿಲ್ಲ.
ಸ್ಟೋರೇಜ್ ಸಮಸ್ಯೆಗೂ ಇದರಿಂದ ಪರಿಹಾರ ಲಭ್ಯವಾಗಲಿದೆ. ಜತೆಗೆ ಖಾಸಗಿತನಕ್ಕೂ ಇದರಿಂದ ಪ್ರಯೋಜನವಿದೆ ಎಂದು ವಾಟ್ಸ್ಆ್ಯಪ್ ಹೇಳಿದೆ.
ಆದರೆ ಈ ಅಪ್‌ಡೇಟ್ ಬಳಸಿದರೂ, ಕೆಲವರು ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವ ಸಾಧ್ಯತೆಯಿರುತ್ತದೆ ಮತ್ತು ಸ್ಕ್ರೀನ್‌ಶಾಟ್ ತೆಗೆದುಕೊಂಡರೆ, ಕಳುಹಿಸಿದವರಿಗೆ ನೋಟಿಫಿಕೇಶನ್ ಕೂಡ ಹೋಗುವುದಿಲ್ಲ.
ಇದೇ ಫೀಚರ್ ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ನಲ್ಲಿ ಇದೆ. ಸ್ನ್ಯಾಪ್‌ಚಾಟ್‌ನಲ್ಲಿ ಸ್ಕ್ರೀನ್‌ಶಾಟ್ ತೆಗೆದುಕೊಂಡಾಗ ನೋಟಿಫಿಕೇಶನ್ ಅಲರ್ಟ್ ಕಾಣಿಸಿಕೊಳ್ಳುತ್ತದೆ. ಜತೆಗೆ ಹಳೆಯ ಆವೃತ್ತಿ ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಹೊಸ ಫೀಚರ್ ಅಪ್‌ಡೇಟ್ ಬೆಂಬಲಿಸುವುದಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.