ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಯ್‌ ವಿರುದ್ಧ ಕಾನೂನು ಸಮರಕ್ಕೆ ತಯಾರಿ ನಡೆಸಿದೆ ಆ್ಯಪಲ್‌

Last Updated 23 ಜುಲೈ 2018, 11:47 IST
ಅಕ್ಷರ ಗಾತ್ರ

‘ಡೂ ನಾಟ್ ಡಿಸ್ಟರ್ಬ್‌’ ಆ್ಯಪ್‌ ಕುರಿತುಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ರೂಪಿಸಿರುವ ನಿಯಮಾವಳಿಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಆ್ಯಪಲ್ ಕಂಪನಿ ತಯಾರಿ ನಡೆಸಿದೆ.

ಈ ಆ್ಯಪ್‌ ಅಥವಾ ಇದರಲ್ಲಿನ ಆಯ್ಕೆಗಳನ್ನೆ ಹೋಲುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡದ ಹ್ಯಾಂಡ್‌ಸೆಟ್‌ಗಳನ್ನು 6 ತಿಂಗಳೊಳಗೆ ಶಟ್‌ಡೌನ್‌ ಮಾಡುವ ಅವಕಾಶವನ್ನು ಟೆಲಿಕಾಂ ಸೇವಾದಾತ ಕಂಪನಿಗಳಿಗೆ ನೀಡಲು ಟ್ರಾಯ್‌ ನಿರ್ಧರಿಸಿದೆ.

ಹ್ಯಾಂಡ್‌ಸೆಟ್‌ಗಳನ್ನು ನಿಯಂತ್ರಿಸುವ ಅಧಿಕಾರವನ್ನು ಟೆಲಿಕಾಂ ಕಂಪನಿಗಳಿಗೆ ನೀಡುವ ಮೂಲಕಟ್ರಾಯ್‌ ತನ್ನ ಅಧಿಕಾರ ವ್ಯಾಪ್ತಿ ಮೀರಿ ನಿಯಮಾವಳಿ ರೂಪಿಸಿದೆ ಎಂದು ಆ್ಯಪಲ್‌ ದೂರಿದೆ.

ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಈಗಾಗಲೇ ಬಳಸುತ್ತಿರುವ ಹಲವಾರು ಆ್ಯಪ್‌ಗಳ ಆಯ್ಕೆಗಳೇ ‘ಡೂ ನಾಟ್ ಡಿಸ್ಟರ್ಬ್‌’(ಡಿಎನ್‌ಡಿ)ನಲ್ಲಿವೆ. ಅವುಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದರಿಂದ ಬಳಕೆದಾರರ ಕರೆ, ಸಂದೇಶಗಳ ಮಾಹಿತಿ ಸೋರಿಕೆ ಆಗುವುದಿಲ್ಲ. ಬೇಡವಾದ ಕರೆ, ಸಂದೇಶಗಳನ್ನು ತಡೆಯಬಹುದು. ವ್ಯಕ್ತಿಯ ಖಾಸಗಿತನಕ್ಕೂ ದಕ್ಕೆ ಆಗುವುದಿಲ್ಲ ಎಂದು ಆ್ಯಪಲ್‌ ಕಂಪನಿ ಟ್ರಾಯ್‌ಗೆ ತಿಳಿಸಿದೆ. ಹಾಗೆಯೇ ಕಂಪನಿಯಖಾಸಗಿತನ ನೀತಿಯನ್ನು ಮುಂದಿರಿಸಿ ಡಿಎನ್‌ಡಿ ಅನ್ನು ತನ್ನ ಆ್ಯಪ್‌ ಸ್ಟೋರ್‌ನಲ್ಲಿ ಸೇರಿಸಲು ನಿರಾಕರಿಸಿದೆ.ಆ್ಯಪಲ್‌ನೊಂದಿಗೆ ಮೊಬೈಲ್‌ ತಯಾರಿಕೆಯ ಇತರೆ ಕಂಪನಿಗಳು ದನಿಗೂಡಿಸಿವೆ.

ಡಿಎನ್‌ಡಿ ಆ್ಯಪ್‌ ಅನ್ನು ಈಗಾಗಲೇ 1 ಲಕ್ಷದಷ್ಟು ಜನರು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಇದಕ್ಕೆ ಸದ್ಯ 2.6 ರೇಟಿಂಗ್‌ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT