ಮಾನಸ ಸರೋವರ ಯಾತ್ರೆ, ತಿರುಪತಿ ಕಲ್ಯಾಣೋತ್ಸವ, ಕನ್ಯಾಕುಮಾರಿ–ಕಾಶ್ಮೀರ ಪ್ರಯಾಣ, ರಾಷ್ಟ್ರಪತಿ ಭವನ ಭೇಟಿ,.. ಎಲ್ಲಿಗೇ ಆದರೂ ಇದ್ದಲಿಂದಲೇ ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿ ಅಥವಾ ಟಿಕೆಟ್ ಪಡೆದು ಪ್ರಯಾಣದ ಗುರಿಯನ್ನು ಬಹಳ ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳಬಹುದು. ಡಿಜಿಟಲೀಕರಣದಿಂದ ಪ್ರವಾಸೋದ್ಯಮ, ಪ್ರಯಾಣ ಪರಿವರ್ತನೆ ಕಡೆಗೆ ಮುಖಮಾಡಿವೆ. ಸೆಪ್ಟೆಂಬರ್ 27, ’ವಿಶ್ವ ಪ್ರವಾಸೋದ್ಯಮ ದಿನ’. ಈ ದಿನದ ಆಚರಣೆಯ ಪ್ರಯುಕ್ತ ವಿಶ್ವಸಂಸ್ಥೆ ’ಪ್ರವಾಸೋದ್ಯಮ ಮತ್ತು ಡಿಜಿಟಲ್ ಪರಿವರ್ತನೆ’(Tourism and the Digital Transformation)ಘೋಷವಾಕ್ಯ ಪ್ರಕಟಿಸಿದೆ.

ಪ್ರವಾಸೋದ್ಯಮವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬಹುದಾದ ಉತ್ತಮ ಆಲೋಚನೆಯನ್ನು ಪ್ರೋತ್ಸಾಹಿಸಲು ಇದೇ ಮೊದಲ ಬಾರಿಗೆ ’ಸ್ಟಾರ್ಟ್ಅಪ್ ಸ್ಪರ್ಧೆ’ ಆಯೋಜಿಸಲಾಗಿದೆ. ಈ ಮೂಲಕ ಹೊಸ ಚಿಂತನೆಗಳಿಗೆ ವಿಶ್ವ ಮಟ್ಟದಲ್ಲಿ ವೇದಿಕೆ ಕಲ್ಪಿಸುತ್ತಿದೆ. ಹಂಗೇರಿಯ ಬುಡಾಪೆಸ್ಟ್ನಲ್ಲಿ ಈ ಬಾರಿಯ ಕಾರ್ಯಕ್ರಮ ನಡೆಯುತ್ತಿದೆ.

ಗೂಗಲ್ನಲ್ಲಿ ಇಡೀ ಪ್ರಯಾಣದ ಅನುಭವವನ್ನು ವಿಡಿಯೊ–ಫೋಟೊಗಳ ಮೂಲಕ ಗ್ರಹಿಸಿ ಸಾಗುವ ಹಾದಿಯ ಪ್ಲಾನ್ ಸಿದ್ಧಪಡಿಸಿಕೊಳ್ಳುವುದು ಇವತ್ತಿನ ಸಹಜ ಪ್ರಕ್ರಿಯೆ. ಪ್ರವಾಸದ ಅಗತ್ಯವನ್ನು ಪೂರೈಸಲು ಅದಾಗಲೇ ಬಹಳಷ್ಟ ವೆಬ್ಸೈಟ್ಗಳು, ಅಪ್ಲಿಕೇಷನ್ಗಳು ನಿರಂತರ ಕಾರ್ಯಾಚರಣೆಯಲ್ಲಿವೆ. ಏಕಾಂಗಿ ಪ್ರಯಾಣವಾಗಲಿ,ಇಡೀ ಕುಟುಂಬದ ಪ್ರವಾಸವಾಗಲಿ ಎಲ್ಲವನ್ನೂ ಬಹಳ ಸಲೀಸುಗೊಳಿಸಿದೆ ಡಿಜಿಟಲ್ ವೇದಿಕೆ.

ಗಡಿಗಳನ್ನು ಕೆಡವಿ ಸೇತುವೆಗಳ ನಿರ್ಮಿಸಿ

ದೇಶದ ಗಡಿಯನ್ನು ದಾಟಿ ಇನ್ನಾವುದೇ ದೇಶಕ್ಕೆ ಪ್ರಯಾಣ ಬೆಳೆಸಿದರೂ,ಅಲ್ಲೊಬ್ಬ ಸ್ನೇಹಿತ ಕಾದಿರುತ್ತಾನೆ. ಮುಖ ನೋಡಿರದಿದ್ದರೂ, ನಿಮಗಾಗಿ ತನ್ನ ಮನೆಯಲ್ಲಿಯೇ ವಾಸ್ತವ್ಯಕ್ಕೆ ಅಣಿಗೊಳಿಸಿರುತ್ತಾನೆ. ಊರು ಸುತ್ತಲೂ ದಾರಿ ತೋರಿ, ಊಟದ ವ್ಯವಸ್ಥೆಯನ್ನೂ ಮಾಡಬಹುದು. ಎಲ್ಲವೂ ಉಚಿತವಾಗಿ!

ಹೌದು, ಕೌಚ್ ಸರ್ಫಿಂಗ್’(CouchSurfing) ವೇದಿಕೆಯಿಂದಾಗಿ ಇದು ಸಾಧ್ಯವಾಗಿದೆ. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಕೌಚ್ ಸರ್ಫಿಂಗ್ ಸಮೂಹದ ಸದಸ್ಯ ಸಿಗಬಹುದು. ಪಯಣಿಗರ ಸತ್ಕಾರಕ್ಕಾಗಿ ನೋಂದಾಯಿಸಿಕೊಂಡಿರುವ 4 ಲಕ್ಷ ಮಂದಿ, 40 ಲಕ್ಷ ಮಂದಿ ಪಯಣಿಗರು ಈ ಸಮೂಹದಲ್ಲಿದ್ದಾರೆ.

ಜಗತ್ತನ್ನು ಸುತ್ತಿಬರಲು ಸಾಧ್ಯವಾಗದ ಅನೇಕರು ಈ ಸಮೂಹದ ಮೂಲಕ ತಾನಿರುವಲ್ಲಿಯೇ ಜಗತ್ತನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ತನ್ನ ಮನೆಯ, ಮನದ ಬಾಗಿಲು ತೆರೆದು; ದೇಶ–ಧರ್ಮ–ವರ್ಣ–ಭಾಷೆಗಳ ಮೀರಿದ ಹೆಬ್ಬಾಗಿಲನು ತೆರೆದಿದ್ದಾರೆ. ಇಲ್ಲಿ ಅಪರಿಚಿತ ಪಯಣಿಗನೊಬ್ಬ ಬರುತ್ತಾನೆ, ಅತಿಥಿಯಾಗುತ್ತಾನೆ, ಸ್ನೇಹಿತನಾಗಿ ಪ್ರಯಾಣ ಮುಂದುವರಿಸುತ್ತಾನೆ. ಇದರಿಂದ ವಿವಿಧ ಸ್ಥಳಗಳಿಗೆ ಭೇಟಿ ನೀಡುವ ಜತೆಗೆ ವೈವಿಧ್ಯಮಯ ಅನುಭವಗಳನ್ನು ಬೇರೆ ಬೇರೆ ಸಂಸ್ಕೃತಿಯ ಜನರೊಂದಿಗೆ ಬೆರೆತು ಪಡೆದುಕೊಳ್ಳಬಹುದು.

ಈಗಾಗಲೇ ನಿರ್ದಿಷ್ಟ ವ್ಯಕ್ತಿಯ ಆತಿಥ್ಯ ಸ್ವೀಕರಿಸುವ ಪಯಣಿಗ ಇದೇ ಆ್ಯಪ್ನಲ್ಲಿ ಅವರ ಅತಿಥಿ ಸತ್ಕಾರದ ಬಗ್ಗೆ, ಸ್ಥಳ ಹಾಗೂ ವಾತಾವರಣದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾನೆ. ಅವರು ನೀಡುವ ಶಿಫಾರಸು ಅಥವಾ ವಾಸ್ತವದ ಅವಲೋಕನವನ್ನು ಗಮನಿಸಿ ಮುಂದಿನ ಪಯಣಿಗ ಆ ಆತಿಥ್ಯ ಸ್ವೀಕರಿಸಬೇಕೋ ಇಲ್ಲವೋ ಎಂದು ನಿರ್ಧರಿಸುತ್ತಾನೆ.

ಆ್ಯಪ್ ಸಮೂಹದ ಸದಸ್ಯರಿಗೆ ಪ್ಯಾರಿಸ್, ಕಾಶ್ಮೀರ, ಶಾಂಘೈ, ನ್ಯೂಯಾರ್ಕ್, ಯಾವುದೇ ಸ್ಥಳದಲ್ಲಿ ಉಚಿತವಾಗಿ ಉಳಿದುಕೊಳ್ಳುವ ವ್ಯವಸ್ಥೆ ಸಾಧ್ಯವಾಗಿದೆ. ಕೌಚ್ ಸರ್ಫಿಂಗ್ ಅಪ್ಲೀಕೇಷನ್ ಡೌನ್ಲೋಡ್ ಮಾಡಿ ಕೇಳುವ ವಿವರ ನೀಡಿ ಸುಲಭವಾಗಿ ಲಾಗಿನ್ ಆಗಬಹುದು. ಈ ಆ್ಯಪ್ಗೆ ಪರ್ಯಾಯವಾಗಿ ಯುರೋಪ್ನಲ್ಲಿ ಮತ್ತಷ್ಟು ಪ್ರಾದೇಶಿಕ ಆ್ಯಪ್ಗಳು ಅಭಿವೃದ್ಧಿಯಾಗಿವೆ.

ಆಡಿಯೊ ಕಾಂಪಾಸ್ (AudioCompass)

ಭಾರತ ಪ್ರವಾಸೋದ್ಯಮ ಇಲಾಖೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ’ಆಡಿಯೊ ಕಾಂಪಾಸ್’ ಆ್ಯಪ್ ಹೊರತಂದಿದೆ. ಗೈಡ್ನಂತೆ ದೇಶ, ವಿದೇಶಗಳ ಪ್ರಮುಖ ಸ್ಥಳಗಳ ಮಾಹಿತಿಯನ್ನು ಸ್ಪಷ್ಟವಾಗಿ ಆಡಿಯೊ ಮೂಲಕ ಈ ಆ್ಯಪ್ನಲ್ಲಿ ಪಡೆಯಬಹುದು. ಬಹುತೇಕ ಸ್ಥಳಗಳ ಮಾಹಿತಿ ಉಚಿತವಾಗಿಯೇ ಸಿಗುತ್ತಿದ್ದು, ಎಲ್ಲ ಜಾಗಗಳ ಆಡಿಯೊ ವಿವರಣೆ ಕೇಳಲು ₹49 ನೀಡಿ ನೋಂದಾಯಿಸಿಕೊಳ್ಳಬಹುದು. ಸದ್ಯ ಭಾರತ, ಸಿಂಗಾಪುರ, ಇಸ್ತಾನ್ಬುಲ್, ಭೂತಾನ್, ಲಂಡನ್ ಹಾಗೂ ಓಮನ್ನ ಪ್ರಮುಖ ಸ್ಥಳ ಮಾಹಿತಿ ಲಭ್ಯವಿದೆ.

ಐಆರ್ಸಿಟಿಸಿ (irctc)

ಭಾರತೀಯ ರೈಲ್ವೆಯಲ್ಲಿ ಪ್ರಯಾಣದ ಟಿಕೆಟ್ ಕಾಯ್ದಿರಿಸಲು ಐಆರ್ಸಿಟಿಸಿ ಆ್ಯಪ್ ಉತ್ತಮ ವ್ಯವಸ್ಥೆಯಾಗಿದೆ. ಇತರೆ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ಮಾಹಿತಿ, ಪಿಎನ್ಆರ್ ಸ್ಟೇಟಸ್ ಗಮನಿಸಬಹುದು.

ಟ್ರಾವೆಲ್ ಖಾನಾ(travelkhana)

ರೈಲು ಪ್ರಯಾಣದ ವೇಳೆ ಬಿಸಿಯಾದ ಊಟ ತಿಂಡಿಯನ್ನು ಆನ್ಲೈನ್ ಮೂಲಕ ಬುಕ್ ಮಾಡಿ ಪಡೆಯಲು ಟ್ರಾವೆಲ್ ಖಾನಾ ಆ್ಯಪ್ ಸಹಕಾರಿ. ದಿನದ 24 ಗಂಟೆಯೂ ಕಾರ್ಯಾಚರಿಸುವ ವ್ಯವಸ್ಥೆಯಾಗಿದ್ದು, ನಾವು ಪ್ರಯಾಣಿಸುತ್ತಿರುವ ಮಾರ್ಗದಲ್ಲಿಯೇ ಆಹಾರ ಪೂರೈಕೆಯಾಗುತ್ತದೆ. 80 ನಗರಗಳಲ್ಲಿ ಈ ಆ್ಯಪ್ ಕಾರ್ಯವ್ಯಾಪ್ತಿ ಹೊಂದಿದ್ದು, ಪಿಎನ್ಆರ್ ಸಂಖ್ಯೆ ಹಾಗೂ ರೈಲ್ವೆ ನಿಲ್ದಾಣದ ಮಾಹಿತಿ, ನಿಗದಿತ ಬೆಲೆ ನೀಡಿ ಬಿಸಿ ಊಟ ಪಡೆಯಲು ಸಾಧ್ಯವಿದೆ.

ಗೂಗಲ್ ಟ್ರಿಪ್ಸ್(Google Trips)

ಎಲ್ಲ ಹುಟುಕಾಟವನ್ನೂ ಗೂಗಲ್ನಲ್ಲಿಯೇ ನಡೆಸುವುದರಿಂದ ಗೂಗಲ್ ಟ್ರಿಪ್ಸ್ ನಮ್ಮ ಪ್ರವಾಸದಲ್ಲಿ ಸಮಯ ಯೋಜನೆಯಲ್ಲಿ ಸಹಕಾರಿಯಾಗಿದೆ. ಕಾಯ್ದಿಸಿದ ಟಿಕೆಟ್, ಸಾಗುವ ಹಾದಿ, ಭೇಟಿ ನೀಡಲಿರುವ ಸ್ಥಳ, ಹೋಟೆಲ್ ಸೇರಿದಂತೆ ಎಲ್ಲ ಮಾಹಿತಿಯನ್ನು ನಿಮ್ಮ ಜಿಮೇಲ್ನಿಂದ ಪಡೆದು ಸಮಯ ಹಾಗೂ ದಿನಾಂಕದ ಅನ್ವಯ ಪಟ್ಟಿ ಸಿದ್ಧಪಡಿಸುತ್ತದೆ. ಪ್ರಯಾಣಕ್ಕೂ ಹಿಂದಿನ ದಿನದಿಂದಲೇ ಸೂಚನೆ ನೀಡುತ್ತಿರುತ್ತದೆ.

ಸ್ಪ್ಲಿಟ್ವೈಸ್ (Splitwise)

ಜತೆಗಾರರೊಂದಿಗೆ ಮಾಡುವ ಖರ್ಚಿನ ಲೆಕ್ಕ ಹಾಕಿ, ಅದನ್ನು ಹಂಚಿಕೊಳ್ಳಲು ಉಪಯುಕ್ತವಾಗಿರುವ ಸ್ಪ್ಲಿಟ್ವೈಸ್ ಆ್ಯಪ್, ಸ್ನೇಹಿತರು ಅಥವಾ ಸಾಮೂಹಿಕ ಪ್ರವಾಸದಲ್ಲಿ ಬಹಳ ಸಹಕಾರಿ. ಪ್ರಯಾಣದಲ್ಲಿರುವ ಎಲ್ಲರೂ ಈ ಆ್ಯಪ್ ಹೊಂದಿರಬೇಕು ಹಾಗೂ ಮಾಡುವ ಖರ್ಚಿನ ಲೆಕ್ಕವನ್ನು ನಮೂದಿಸುತ್ತ ಹೋದರೆ ಸಾಕು. ಅಂತಿಮವಾಗಿ ಆಗಿರುವ ಒಟ್ಟು ಖರ್ಚು, ತಲಾ ಖರ್ಚಿನ ಮೊತ್ತ ಹಾಗೂ ಪ್ರತ್ಯೇಕವಾಗಿ ಬಾಕಿಯಿರುವ ಹಣ ಎಲ್ಲವೂ ಕ್ಷಣದಲ್ಲಿ ಲೆಕ್ಕ ಮಾಡಿ ತೋರಿಸುತ್ತದೆ. ಇದರಿಂದಾಗಿ ಖರ್ಚಿನ ಗೊಂದಲಗಳಿಂದ ಮುಕ್ತರಾಗಬಹುದು.

ಇನ್ನಷ್ಟು

ಆ್ಯಪ್ಸಾರಥಿ ಜೊತೆ ಯುರೋಪ್ ಪ್ರವಾಸ

ಕಾರಿನಲ್ಲಿ ಖಂಡಾಂತರ ಪ್ರವಾಸ ಹೋಗುವವರಿಗೆ ಅತ್ಯಂತ ಅವಶ್ಯವಾದ ಕೆಲವು ಆ್ಯಪ್ಗಳು ಮತ್ತು ತಂತ್ರಜ್ಞಾನಗಳನ್ನು ನಾವು ನಮ್ಮ ಎರಡೂ ಪ್ರವಾಸಗಳಲ್ಲಿ ಬಳಸಿದ್ದೆವು. ಪ್ರವಾಸ ಹೋಗುವುದಕ್ಕೂ ಮೊದಲು ನಾವು ಇಂಟರ್ನೆಟ್ ಮೂಲಕ ಅಷ್ಟೂ ಮಾರ್ಗಗಳಲ್ಲಿ ಪ್ರಯಾಣಿಸಿದ್ದೆವು!ಪೂರ್ಣ ಓದು...

ವರ್ಲ್ಡ್ ಆನ್ ವೀಲ್ಸ್- ಇದು ಖಡಾಂತರ ಪ್ರವಾಸ
ನಮ್ಮಲ್ಲಿದ್ದಂತೆ ಹಲವು ಟೋಲ್ಗಳು, ವಾಹನಗಳ ಉದ್ದುದ್ದ ಸಾಲುಗಳು ಅಲ್ಲಿರಲಿಲ್ಲ. ಇಡೀ ದೇಶಕ್ಕೆ ಒಂದು ಟೋಲ್ಗೇಟ್ (ಅದರಲ್ಲಿ ಶೇ 90ರಷ್ಟು ಮಾನವರಹಿತ). ಟೋಲ್ ಪ್ರವೇಶಿಸುವಾಗ ಎಂಟ್ರಿ ಬಟನ್ ಒತ್ತಿದರೆ ಟಿಕೆಟ್ ಬರುತ್ತಿತ್ತು. ಪೂರ್ಣ ಓದು...

ಲೆಹ್–ಲಡಾಕ್ಬೈಕ್ ಯಾನ
ನನ್ನ ಪ್ರವಾಸಕ್ಕೆ ನಾನು ‘ಲೇಹ್– ಲಡಾಕ್– ಕ್ಯಾಮೆರಾ’ ಎಂದು ಹೆಸರಿಟ್ಟುಕೊಂಡಿದ್ದೆ. ಅದನ್ನು ಟ್ರಾವೆಲರ್ಸ್ ಸಾಕ್ಷ್ಯಚಿತ್ರವಾಗಿ ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ಹಂತ ಹಂತವಾಗಿ ಲೈವ್ ಪ್ರಸಾರ ಮಾಡುವವನಿದ್ದೆ. ಪೂರ್ಣ ಓದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.