ಬೈಕ್ ಸವಾರ ಹೆಲ್ಮೆಟ್ ಧರಿಸದಿದ್ದರೆ ವಾಹನ ಸ್ಟಾರ್ಟ್ ಆಗುವುದೇ ಇಲ್ಲ! ಇಂಥದೊಂದು ಸಾಧನವನ್ನು ನಗರದ ಎಂವಿಜೆ ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಅವಿಷ್ಕರಿಸಿದೆ. ಈ ವಿಶೇಷಸ್ಮಾರ್ಟ್ ಹೆಲ್ಮೆಟ್ಗೆ‘ಕವಚ’ ಎಂದು ನಾಮಕರಣ ಮಾಡಿದ್ದಾರೆ.

ಸವಾರ ಮದ್ಯಪಾನ ಮಾಡಿದ್ದರೂ ಬೈಕ್ ಚಾಲನೆಗೆ ಅವಕಾಶ ಕೊಡುವುದಿಲ್ಲ. ಈ ಸ್ಮಾರ್ಟ್ ಹೆಲ್ಮೆಟ್ ಮೂರು ವಿಭಿನ್ನ ಮಾದರಿಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.

ಎಂವಿಜೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದಸಾಯಿ ವೆಂಕಟ್ ಪಾತ್ರೊ, ನಿಖಿತಾ, ಮೇಘಾ ಎಸ್ ಮತ್ತು ಸುವ್ರಾ ಪ್ರತಿಮ್ ರಾಯ್ ಈ ‘ಕವಚ’ ವಿನ್ಯಾಸಗೊಳಿಸಿದ್ದಾರೆ.

ಬೇರೆ ವಿಧಗಳ ಮೂಲಕ ಬೈಕ್ನೊಂದಿಗೆ ಸಂಪರ್ಕ ಹೊಂದಿರುವ ಈ ಹೆಲ್ಮೆಟ್ ಅನ್ನು ಬಳಕೆದಾರ ಧರಿಸದಿದ್ದರೆ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಹೆಲ್ಮೆಟ್ನಲ್ಲಿರುವ ಸಂವೇದಕ ಸ್ವಯಂಚಾಲಿತವಾಗಿ ಚಾಲಕ ಮದ್ಯಪಾನ ಮಾಡಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚುತ್ತದೆ.

ಅಪಘಾತದ ಸಂದೇಶ ರವಾನಿಸುತ್ತದೆ!

ಕವಚ ಎಂ & ಸಿ, ಸ್ಮಾರ್ಟ್ ಹೆಲ್ಮೆಟ್ನ ಆಧುನಿಕ ಸುಧಾರಿತ ಆವೃತ್ತಿಯಾಗಿದ್ದು ಇದನ್ನು ನಿರ್ಮಾಣ ಕಾರ್ಮಿಕರು ಮತ್ತು ಗಣಿಗಾರರು ಬಳಸಬಹುದಾಗಿದೆ. ಹೆಲ್ಮೆಟ್ ಮೇಲೆ ಇರಿಸಲಾಗಿರುವ ಸಂವೇದಕಗಳು ಕಂಪನದ ಸಾಧ್ಯತೆಯನ್ನು ಗುರುತಿಸುತ್ತವೆ ಮತ್ತು ಅಪಘಾತ ಸಂಭವಿಸಿದಾಗ ಮೇಲ್ವಿಚಾರಣೆ ಮಾಡುವ ತುರ್ತು ಪರಿಸ್ಥಿತಿಗಳಲ್ಲಿ ಮೇಲ್ವಿಚಾರಕರಿಗೆ ತಕ್ಷಣವೇ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ. ಅಷ್ಟೇ ಅಲ್ಲ ಅಪಘಾತ ಸಂಭವಿಸಿದ ಸ್ಥಳದ ವಿವರವನ್ನೂ ಕಳುಹಿಸುತ್ತದೆ. ಇದರಿಂದ ರಕ್ಷಣಾ ಕಾರ್ಯವೂ ಸುಲಭವಾಗುತ್ತದೆ.

ಮಳೆಗಾಲದಲ್ಲಿ ಹೆಲ್ಮೆಟ್ ಗ್ಲಾಸ್ ಮೇಲೆ ಬೀಳುವ ಮಂಜು ಮತ್ತು ಮಳೆನೀರಿನ ಹನಿಗಳನ್ನು ತೊಡೆದು ಹಾಕುವ ಮತ್ತು ಬೇಸಿಗೆಯ ಬಿಸಿಯಿಂದ ತಲೆಯನ್ನು ತಂಪಾಗಿಸುವ ಶೀತಕ ವ್ಯವಸ್ಥೆಗಳ ಮಾದರಿಯನ್ನು ಮುಂಬರುವ ದಿನಗಳಲ್ಲಿ ಅವಿಷ್ಕರಿಸುವ ಭರವಸೆ ವಿದ್ಯಾರ್ಥಿಗಳದ್ದು. ಸ್ಮಾರ್ಟ್ ಹೆಲ್ಮೆಟ್ ಗ್ರಾಹಕರಿಗೆ ಸುಮಾರು 6 ಸಾವಿರ ರೂಪಾಯಿ ವೆಚ್ಚ ತಗುಲುತ್ತದೆ ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.