ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾದ ‘ಸ್ಪಿರ್ಜರ್‌’ ಗಗನನೌಕೆಯ ಯಾನಕ್ಕೆ 15 ವರ್ಷ

Last Updated 26 ಆಗಸ್ಟ್ 2018, 16:05 IST
ಅಕ್ಷರ ಗಾತ್ರ

ವಾಷಿಂಗ್ಟನ್ : ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ‘ಸ್ಪಿರ್ಜರ್’ ನೌಕೆಯುಬಾಹ್ಯಾಕಾಶ ಯಾನದಲ್ಲಿ 15 ವರ್ಷಗಳನ್ನು ಪೂರೈಸಿದೆ. 2003ರಲ್ಲಿಉಡ್ಡಯನ ಮಾಡಿದ್ದ ನೌಕೆಗೆಎರಡೂವರೆ ವರ್ಷಗಳ ಅವಧಿ ನಿಗದಿಪಡಿಸಲಾಗಿತ್ತು.

ಶನಿ ಗ್ರಹದ ಹೊಸ ಉಂಗುರ, ವ್ಯೋಮಾಕಾಶದ ಹಲವು ಗ್ಯಾಲಕ್ಸಿಗಳು ಬೆಳಕಿಗೆ ಬರುವಲ್ಲಿ ಸ್ಪಿಟ್ಜರ್ ಪಾತ್ರ ಮಹತ್ವದ್ದು. ಹೊಸ ನಕ್ಷತ್ರಗಳ ಉದಯ ಹಾಗೂ ಕಪ್ಪುರಂಧ್ರಗಳ ಅಧ್ಯಯನಕ್ಕೆ ಮಹತ್ವದ ಮಾಹಿತಿಯನ್ನು ಇದು ಒದಗಿಸಿದೆ.

ನಮ್ಮ ಸೌರಮಂಡಲದಾಚೆಗಿನ ವಿದ್ಯಮಾನಗಳಿಗೆ ಇದು ಬೆಳಕಿಂಡಿಯಾಗಿದೆ. ಟ್ರಾಪಿಸ್ಟ್–1 ನಕ್ಷತ್ರದ ಸುತ್ತ ಭೂಮಿ ಗಾತ್ರದ ಏಳು ಗ್ರಹಗಳು ಗಿರಕಿ ಹೊಡೆಯುತ್ತಿರುವ ವಿದ್ಯಮಾನವನ್ನು ಸ್ಪಿಟ್ಜರ್‌ ನೆರವಿನಿಂದ ಪತ್ತೆಹಚ್ಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT