ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವರ್ ಪಾಯಿಂಟ್ ಸೃಷ್ಟಿಕರ್ತ ಟೆಕಿ ಡೆನ್ನಿಸ್ ಅಸ್ಟಿನ್ ನಿಧನ

ಪವರ್ ಪಾಯಿಂಟ್ ಸಾಫ್ಟವೇರ್ ಅನ್ವೇಷಕರಲ್ಲಿ ಒಬ್ಬರಾಗಿದ್ದ ಡೆನ್ನಿಸ್ ಅಸ್ಟಿನ್ ಅವರು ಮೃತರಾಗಿದ್ದಾರೆ.
Published 10 ಸೆಪ್ಟೆಂಬರ್ 2023, 16:06 IST
Last Updated 10 ಸೆಪ್ಟೆಂಬರ್ 2023, 16:06 IST
ಅಕ್ಷರ ಗಾತ್ರ

ಸ್ಯಾನ್ ಫ್ರಾನ್ಸಿಸ್ಕೊ: ಕಂಪ್ಯೂಟರ್ ಲೋಕದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಪವರ್ ಪಾಯಿಂಟ್ ಸಾಫ್ಟವೇರ್ ಅನ್ವೇಷಕರಲ್ಲಿ ಒಬ್ಬರಾಗಿದ್ದ ಡೆನ್ನಿಸ್ ಅಸ್ಟಿನ್ ಅವರು ಮೃತರಾಗಿದ್ದಾರೆ.

ಅವರಿಗೆ 76 ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ಕ್ಯಾನ್ಸರ್‌ನಿಂದ ಅವರು ಮೃತರಾಗಿದ್ದಾರೆ ಎಂದು ಸುದ್ದಿಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

1987 ರಲ್ಲಿ ಡೆನ್ನಿಸ್ ಅಸ್ಟಿನ್ ಅವರು ಅಮೆರಿಕದಲ್ಲಿ Forethought ಎಂಬ ಕಂಪನಿ ಸ್ಥಾಪಿಸಿ ತಂಡದ ಜೊತೆ ಪವರ್ ಪಾಯಿಂಟ್ ಎಂಬ ಸಾಫ್ಟವೇರ್ ಅನ್ವೇಷಿಸಿದ್ದರು. ಆರಂಭದಲ್ಲೇ ಸಾಕಷ್ಟು ಗಮನ ಸೆಳೆದ ಈ ಸಾಫ್ಟವೇರ್‌ ಅನ್ನು ಕೆಲವೇ ತಿಂಗಳುಗಳಲ್ಲಿ ಮೈಕ್ರೊಸಾಫ್ಟ್ ಕಂಪನಿ ಖರೀದಿಸಿತು. ನಂತರ ಅದು ಮೈಕ್ರೊಸಾಫ್ಟ್ ಪವರ್‌ ಪಾಯಿಂಟ್ ಎಂದು ಹೆಚ್ಚು ಜನಪ್ರಿಯವಾಯಿತು.

ಪವರ್ ಪಾಯಿಂಟ್ ಮುಖ್ಯವಾಗಿ ಸೆಮಿನಾರ್‌ಗಳಿಗೆ ಸಂಶೋಧನಾ ಲೇಖನಗಳು, ಯೋಜನೆಗಳು, ವರದಿಗಳು, ಅವಲೋಕನಗಳನ್ನು slides ಮೂಲಕ ಡಿಜಿಟಲ್ ರೂಪದಲ್ಲಿ ಮನಮುಟ್ಟುವಂತೆ ಪ್ರಸ್ತುತಪಡಿಸಲು ಸಾಕಷ್ಟು ಸಹಾಯಕವಾಗಿತ್ತು. ಇತ್ತೀಚೆಗೆ ಈ ಸಾಫ್ಟ್‌ವೇರ್‌ನಲ್ಲಿ ಸಾಕಷ್ಟು ಆಧುನಿಕ ಫೀಚರ್‌ಗಳು ಬಂದಿವೆ.

ಡೆನ್ನಿಸ್ ಆಸ್ಟಿನ್ 1947 ರ ಮೇ 28 ರಂದು ಪಿಟ್ಸ್‌ಬರ್ಗ್‌ನಲ್ಲಿ ಜನಿಸಿದ್ದರು. ಅವರು ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. 1996 ರಲ್ಲಿ ವೃತ್ತಿ ತೊರೆದು ಬೋಧಕರಾಗಿದ್ದರು.

Robert Gaskin ಪವರ್ ಪಾಯಿಂಟ್ ಸೃಷ್ಟಿಕರ್ತರಲ್ಲಿ ಮತ್ತೊಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT