ತಿ.ನರಸೀಪುರ ಯುವಕನಿಂದ ‘ಬೆಂಗಳೂರು’ ಹೆಸರಲ್ಲಿ ಕನ್ನಡದ 5 ಹೊಸ ಯೂನಿಕೋಡ್ ಫಾಂಟ್

ತಿ.ನರಸೀಪುರ (ಮೈಸೂರು ಜಿಲ್ಲೆ): ಪಟ್ಟಣದ ಯುವ ಡಿಸೈನರ್ ಆರ್.ಮಂಜುನಾಥ್ ರಾಜ್ಯ ರಾಜಧಾನಿ ಎಟಿಎಸ್ ಬೆಂಗಳೂರು ಹೆಸರಿನಲ್ಲಿ ಐದು ಹೊಸ ಕನ್ನಡದ ಯೂನಿಕೋಡ್ ಫಾಂಟ್ ವಿನ್ಯಾಸಗೊಳಿಸಿದ್ದಾರೆ.
ಮೈಸೂರಿನ ಖಾಸಗಿ ಕಂಪನಿಯಲ್ಲಿ ಲೀಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ನಿವಾಸಿ ಆರ್.ಮಂಜುನಾಥ್, ತಮ್ಮ ಅಕ್ಷರ ಟೈಪ್ ಸ್ಟುಡಿಯೊ ಮೂಲಕ ಜನವರಿಯಲ್ಲಿ ಬಂಡೀಪುರ ಎಂಬ ಹೆಸರಿನಲ್ಲಿ ಹೊಸ ಕನ್ನಡ ಫಾಂಟ್ ನೀಡಿದ್ದರು.
ಈಗ ಮತ್ತೊಮ್ಮೆ ಸಾರ್ವಜನಿಕರ ಬಳಕೆಗೆ ಸರಳ, ಬಿಟ್ ಮ್ಯಾಪ್ ಮಾದರಿಯಲ್ಲಿ ವೈಯಕ್ತಿಕ ಹಾಗೂ ವಾಣಿಜ್ಯ ಬಳಕೆಗೆ ಪೂರಕವಾದ ಬೆಂಗಳೂರು ಹೆಸರಿನಲ್ಲಿ ಡಾಟ್, ಸ್ಮೂತ್, ಫಿಕ್ಸೆಲ್, ಸ್ಕ್ವೇರ್ ಹಾಗೂ ಎಲ್‌ಐಡಿ ಎಂಬ ಹೊಸ ಅಕ್ಷರಗಳನ್ನು ವಿನ್ಯಾಸಗೊಳಿಸಿ ತಮ್ಮ ವೆಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಫಾಂಟ್ ಡೌನ್‌ಲೋಡ್‌ಗೆ ಈ ಲಿಂಕ್ ಬಳಸಬಹುದಾಗಿದೆ. https://aksharatypestudio.in/fonts/bengaluru
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.