ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ನಲ್ಲಿ Auto correct ಫೀಚರ್ ಸದುಪಯೋಗ ಹೇಗೆ?

Last Updated 20 ನವೆಂಬರ್ 2019, 19:30 IST
ಅಕ್ಷರ ಗಾತ್ರ

‘ಮೆಸೇಜ್ ಮಾಡುವಾಗ ಸ್ಪೆಲ್ಲಿಂಗ್ ಯಾಕೆ ಗಮನಿಸಬೇಕು’ ಎಂದು ಕೇಳುವವರಿದ್ದಾರೆ. ಅಷ್ಟಕ್ಕೂ ಅದೇನು ಇಂಗ್ಲಿಷ್ ಪರೀಕ್ಷೆ ಅಲ್ಲ ಅಲ್ವಾ. ಉದ್ದಕ್ಕೆ ಟೈಪಿಸುವ ಬದಲು ಅದನ್ನು ಚುಟುಕಾಗಿ ಬರೆದರೆ ಸಾಕು. ಉದಾಹರಣೆಗೆ because ಎಂದು ಬರೆಯುವ ಬದಲು bze ಎಂದು ಬರೆದರೂ ಜನ ಅದನ್ನು because ಎಂದೇ ಓದುತ್ತಾರೆ. Okay ಬರೀ K ಆಯ್ತು, Thank you ಶಾರ್ಟ್ ಅಂಡ್ ಸ್ವೀಟ್ ಆಗಿ Tq ಆಯ್ತು. ಇನ್ನು Lingoಗಳು ಇದ್ದೇ ಇದೆ. ಅದರ ನಡುವೆ ಯಾರು ಸ್ಪೆಲ್ಲಿಂಗ್ ತಪ್ಪಿಲ್ಲದೆ ಸಂದೇಶ ಕಳುಹಿಸುವ ಮುತುವರ್ಜಿ ವಹಿಸುತ್ತಾರೆ? ಅಷ್ಟಕ್ಕೂ ಸ್ಪೆಲಿಂಗ್ ಸರಿ ಇರಲೇಬೇಕು ಎಂದಾದರೆ Auto correct ಇದ್ದೇ ಇದೆ. ಆದರೆ ಈ Auto correct ಬಳಸುವಾಗ ಎಡವಟ್ಟುಗಳು ಆಗುವುದುಂಟು. ಮೊಬೈಲ್‌ನಲ್ಲಿ ಟೈಪಿಸಿದಾಗ ಅಲ್ಲಿ Auto correct ಕೆಲವೊಂದು ತಪ್ಪು ಪದಗಳನ್ನು ನುಸುಳುವಂತೆ ಮಾಡಿದ್ದು ಕೆಲವರಿಗಾದರೂ ಅನುಭವವಾಗಿರಬಹುದು. ನಾವು ಉದ್ದೇಶಿಸಿದ ಪದಕ್ಕಿಂತ ತದ್ವಿರುದ್ಧ ಪದ ಮೆಸೇಜ್ ನಡುವೆ ನುಸುಳಿ ಪಜೀತಿಗೆ ಸಿಲುಕಿಸಿದ್ದೂ ಉಂಟು. ಮೊಬೈಲ್‌ನಲ್ಲಿ ಹಲವಾರು ವಿಧದ ಕೀಬೋರ್ಡ್‌ Appಗಳನ್ನು ನಾವು ಬಳಸುತ್ತೇವೆ. ಹೆಚ್ಚಾಗಿ ಬಳಕೆಯಲ್ಲಿರುವ Gboard Appನಲ್ಲಿ Auto Correct ಫೀಚರ್‌ ಅನ್ನು ಹೇಗೆ ಬಳಸುವುದು ಎಂಬುದನ್ನು ನೋಡೋಣ

ಹೀಗೆ ಮಾಡಿ: Gboard App ಸೆಟ್ಟಿಂಗ್ಸ್ ಓಪನ್ ಮಾಡಿ
ಅಲ್ಲಿ Text correction ಕ್ಲಿಕ್ ಮಾಡಿ ಕೆಳಗಡೆ ಸ್ಕ್ರಾಲ್ ಮಾಡಿದರೆ Auto correction ಎನೇಬಲ್ ಆಗಿರುತ್ತದೆ. ನಿಮಗೆ ಅಗತ್ಯವಿಲ್ಲ ಎಂದು ಅನಿಸಿದರೆ ಡಿಸೇಬಲ್ ಮಾಡಿ.ಅದೇ ರೀತಿ ನೀವು ಟೈಪಿಸುವಾಗ ಪದ ಅಥವಾ ವಾಕ್ಯಗಳು Suggestion ತೋರಿಸುವುದು ಬೇಡ ಎಂದಾದರೆ ಅದನ್ನೂ ಡಿಸೇಬಲ್ ಮಾಡಬಹುದು.ಕೆಟ್ಟ ಪದಗಳ ಬಳಕೆ ಬೇಡ ಎಂಬ ಆಪ್ಶನ್ ಅಲ್ಲಿದ್ದು ಅದು ಎನೇಬಲ್ ಆಗಿರುವಂತೆ ನೋಡಿಕೊಳ್ಳಿ.ಸ್ಪೆಲ್ಲಿಂಗ್ ತಪ್ಪು ಇದ್ದರೆ ಅದನ್ನು ಗುರುತು ಮಾಡಿ ತೋರಿಸುವ ಆಪ್ಶನ್ ಕೂಡಾ ಇಲ್ಲಿದೆ. ಅದು ಎನೇಬಲ್ ಮಾಡಿಕೊಂಡಿದ್ದರೆ ತಪ್ಪು ತಿದ್ದಲು ಸುಲಭ.ಇಲ್ಲಿ ಮೇಲೆ ಹೇಳಿರುವ ಎಲ್ಲ ಆಪ್ಶನ್‌ ಗಳು ಎನೇಬಲ್ ಆಗಿರುತ್ತವೆAuto correction ನಿಮಗೆ ಬೇಡ ಎಂದು ಅನಿಸಿದರೆ ಮಾತ್ರ ಡಿಸೇಬಲ್ ಮಾಡಬಹುದು.

ಸ್ಯಾಮ್‌ಸಂಗ್ ಡೀಫಾಲ್ಟ್ ಕೀಬೋರ್ಡ್

ಅಂಡ್ರಾಯ್ಡ್ ಸ್ಯಾಮ್‌ಸಂಗ್ ಫೋನ್‌ಗಳಲ್ಲಿ Auto Check Spelling, Predictive text ಎಂಬ ಆಯ್ಕೆ ಇರುತ್ತದೆ. ಅದನ್ನು ಎನೇಬಲ್ ಮಾಡಿಕೊಂಡರೆ ಇಂಗ್ಲಿಷ್ (UK), ಇಂಗ್ಲಿಷ್ (US) ಮಾತ್ರ ಅಲ್ಲ ಕನ್ನಡ, ಮಲಯಾಳಂ, ಮರಾಠಿ ಸೇರಿದಂತೆ 14 ಭಾಷೆಗಳಲ್ಲಿ ನಾವು ಟೈಪಿಸುವಾಗ ಸರಿಯಾದ ಪದವನ್ನು ಸೂಚಿಸುವ ಆಯ್ಕೆಯನ್ನು ಎನೇಬಲ್ ಮಾಡಬಹುದಾಗಿದೆ.

ಹೀಗೆ ಮಾಡಿ: ನಿಮ್ಮ ಸ್ಯಾಮ್‌ಸಂಗ್ ಅಂಡ್ರಾಯ್ಡ್ ಫೋನ್ ಸೆಟ್ಟಿಂಗ್ಸ್ ಓಪನ್ ಮಾಡಿ Language and Input ಕ್ಲಿಕ್ ಮಾಡಿ.ಅಲ್ಲಿ Language ಆಯ್ಕೆಯಡಿಯಲ್ಲಿ ನೀವು ಆಯ್ಕೆ ಮಾಡಿರುವ ಭಾಷೆ ಇಂಗ್ಲಿಷ್ (UK )/ ಇಂಗ್ಲಿಷ್ (US), ಕನ್ನಡ ಅಥವಾ ಇನ್ಯಾವುದೇ ಭಾಷೆ ಆಯ್ಕೆ ಮಾಡಿದ್ದರೆ ಅದನ್ನು ತೋರಿಸುತ್ತದೆ.

ಡಿಫಾಲ್ಟ್ ಕೀಬೋರ್ಡ್ Samsung keyboard ಎಂದಿರುತ್ತದೆ. ಅದರ ಕೆಳಗೆ Keyboard and input preference ನಡಿಯಲ್ಲಿ Samsung keyboard Multiple languages ಎಂದು ಕಾಣುತ್ತದೆ. ಅದನ್ನು ಕ್ಲಿಕ್ಕಿಸಿದರೆ Add Input Language ಎಂಬ ಆಪ್ಶನ್ ಇದೆ. ಇಲ್ಲಿ ನಿಮಗೆ ಇಂಗ್ಲಿಷ್ ಜತೆಗೆ ನಿಮ್ಮ ಮಾತೃಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಟೈಪಿಸುವ ಜತೆಗೆ ಸ್ಪೇಸ್ ಬಾರ್ ಸ್ವೈಪ್ ಮಾಡಿದರೆ ನಿಮ್ಮ ಆಯ್ಕೆಯ ಭಾಷೆಯ ಕೀಬೋರ್ಡ್ ತೆರೆದುಕೊಳ್ಳುತ್ತದೆ.

ಈ ಆಪ್ಶನ್ ಕೆಳಗಡೆ Auto Check Spelling ಆನ್ ಮಾಡಿದರೆ ನೀವು ಆಯ್ಕೆ ಮಾಡಿರುವ ಭಾಷೆಗಳಲ್ಲಿ ಅಕ್ಷರದೋಷ ಇದ್ದರೆ ಅದನ್ನು ತೋರಿಸಿ, ಸರಿಪಡಿಸುವ ಆಯ್ಕೆಯನ್ನು ಎನೇಬಲ್ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT