ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ 5ಜಿ ಸ್ಮಾರ್ಟ್‌ಫೋನ್‌ಗಳು

Last Updated 27 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಗ್ರಾಹಕರಿಗೆ ಐದನೇ ಪೀಳಿಗೆಯ (5ಜಿ) ಸ್ಮಾರ್ಟ್‌ಫೋನ್‌ ನೀಡಲು ಮೊಬೈಲ್‌ ಕಂಪನಿಗಳು ಪರಸ್ಪರ ಪೈಪೋಟಿಗೆ ಬಿದ್ದಿವೆ. ಸ್ಯಾಮ್ಸಂಗ್‌ ಕಂಪನಿ ಮೊದಲ 5ಜಿ ಫೋಲ್ಡಿಂಗ್‌ ಫೋನ್‌ ಬಿಡುಗಡೆ ಮಾಡಿದ ಬೆನ್ನಲ್ಲೇ ಶಿಯೋಮಿ, ಹುವಾವೆ ಸೇರಿದಂತೆ ಪ್ರಮುಖ ಕಂಪನಿಗಳೂ ಹೊಸ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡಲಾರಂಭಿಸಿವೆ. ಈ ಕುರಿತು ವಿಶ್ವನಾಥ ಶರ್ಮಾ ಇಲ್ಲಿ ವಿವರಿಸಿದ್ದಾರೆ

ಗ್ರಾಹಕರಿಗೆ ಐದನೇ ಪೀಳಿಗೆಯ (5ಜಿ) ಸ್ಮಾರ್ಟ್‌ಪೋನ್‌ ನೀಡಲು ಮೊಬೈಲ್‌ ಕಂಪನಿಗಳು ಪರಸ್ಪರ ಪೈಪೋಟಿಗೆ ಬಿದ್ದಿವೆ. ಸ್ಯಾಮ್ಸಂಗ್‌ ಕಂಪನಿ ಮೊದಲ 5ಜಿ ಫೋಲ್ಡಿಂಗ್‌ ಫೋನ್‌ ಬಿಡುಗಡೆ ಮಾಡಿದ ಬೆನ್ನಲ್ಲೇ ಶಿಯೋಮಿ, ಹುವಾವೆ ಸೇರಿದಂತೆ ಪ್ರಮುಖ ಕಂಪನಿಗಳೂ ಹೊಸ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡಲಾರಂಭಿಸಿವೆ.

ಗ್ಯಾಲಕ್ಸಿ ಫೋಲ್ಡ್‌
ಮಾರುಕಟ್ಟೆಗೆ ಬಂದಿರುವ ಮೊದಲ 5ಜಿ ಪೋಲ್ಡಿಂಗ್‌ ಸ್ಮಾರ್ಟ್‌ಫೋನ್‌ ಇದಾಗಿದೆ.ಫೋನ್‌ ಮಡಚಿದಾಗ ಪರದೆ ಗಾತ್ರ 4.6 ಇಂಚು ಇದ್ದು, ಬಿಡಿಸಿದಾಗ 7.3 ಇಂಚಿನ ಟ್ಯಾಬ್ಲೆಟ್‌ ಗಾತ್ರಕ್ಕೆ ಹಿಗ್ಗುತ್ತದೆ. ಬೆಲೆ ₹ 1,40,580) ಇದೆ. ಅಮೆರಿಕವನ್ನೂ ಒಳಗೊಂಡು ಆಯ್ದ ಕೆಲವೇ ಮಾರುಕಟ್ಟೆಗಳಲ್ಲಿಏಪ್ರಿಲ್‌ 26ರಿಂದ ಖರೀದಿಗೆ ಲಭ್ಯವಿರಲಿದೆ.

ಗ್ಯಾಲಕ್ಸಿ ಫೋಲ್ಡ್‌ ವೈಶಿಷ್ಟ್ಯ
ಪರದೆ; 4.6 ಇಂಚು, ಬಿಡಿಸಿದಾಗ 7.6ವರೆಗೆ ಹಿಗ್ಗಲಿದೆ.ಇನ್ಫಿನಿಟಿ ಫ್ಲೆಕ್ಸ್‌ + ಅಮೊಎಲ್‌ಇಡಿ ಪ್ಯಾನಲ್‌ ಮತ್ತು ಕ್ಯುಎಕ್ಸ್‌ಜಿಎ ಪ್ಲಸ್‌ ರೆಸಲ್ಯೂಷನ್

ಒಎಸ್‌: ಆಂಡ್ರಾಯ್ಡ್‌ 9.0, ಕಸ್ಟಮ್‌ ಯುಐ.

ಪ್ರೊಸೆಸರ್‌: ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 855

ರ್‍ಯಾಮ್‌: 12 ಜಿಬಿ, 512 ಜಿಬಿ ಆಂತರಿಕ ಸಾಮರ್ಥ್ಯ

ಬ್ಯಾಟರಿ: ಡ್ಯುಯೆಲ್‌ ಬ್ಯಾಟರಿ 4,380 ಎಂಎಎಚ್‌

ಫೇಸ್‌ ಅನ್‌ಲಾಕ್‌, ಫಿಂಗ್‌ಪ್ರಿಂಟ್‌ ಸ್ಕ್ಯಾನರ್‌,

ಕ್ಯಾಮೆರಾ: 6 ಕ್ಯಾಮೆರಾಗಳಿವೆ.

ಫ್ರಂಟ್‌ ಕ್ಯಾಮೆರಾ: 10ಎಂಪಿ,10ಎಂಪಿ + 8 ಎಂಪಿ

ರೇರ್‌ ಕ್ಯಾಮೆರಾ:12 ಎಂಪಿ+12ಎಂಪಿ ಟೆಲೆಫೋಟೊ + 16 ಎಂಪಿ ಅಲ್ಟ್ರಾ ವಯಡ್ ಆ್ಯಂಗಲ್ ವಿತ್‌ ಡ್ಯುಯಲ್‌ ಪಿಕ್ಸಲ್‌ ಆಟೊ ಫೋಕಸ್‌.ಡ್ಯುಯಲ್‌ ಆಪ್ಟಿಕಲ್‌ ಇಮೇಜ್‌ ಸ್ಟೆಬಿಲೈಸೇಷನ್‌ ಮತ್ತು ಡ್ಯುಯಲ್‌ ಅಪಾರ್ಚರ್‌

**
ಹುವಾವೆ ಮೇಟ್‌ 10
ಹುವಾವೆಟೆಕ್ನಾಲಜೀಸ್‌ ಕಂಪನಿ ‘ಹುವಾವೆ ಮೇಟ್‌ 10’ ಎನ್ನುವ 5ಜಿಫೋಲ್ಡಿಂಗ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದರ ಬೆಲೆ ₹ 1.84 ಲಕ್ಷ ಇದೆ. ಎರಡು ಸ್ಕ್ರೀನ್‌ ಹೊಂದಿದ್ದು, ಪರದೆಯು ಮಡಚಿದ್ದಾಗ 6.6 ಇಂಚು, ಬಿಡಿಸಿದಾಗ 8 ಇಂಚಿನ ಟ್ಯಾಬ್ಲೆಟ್‌ ಪರದೆಯ ಗಾತ್ರಕ್ಕೆ ಹಿಗ್ಗಲಿದೆ.

ಸೂಪರ್‌ ಫಾಸ್ಟ್‌ ನೆಟ್‌ವರ್ಕ್‌ ಇದ್ದು, ಮೂರು ಸೆಕೆಂಡ್‌ಗಳಲ್ಲಿ 1 ಗಿಗಾಬೈಟ್‌ ಗಾತ್ರದ ಮೂವಿ ಡೌನ್‌ಲೋಡ್‌ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಹುವಾವೆ ಮೇಟ್‌ 10 ವೈಶಿಷ್ಟ್ಯ

ಪರದೆ:6.6 ಇಂಚು, ಬಿಡಿಸಿದಾಗ 8 ಇಂಚಿನವರೆಗೆ ಹಿಗ್ಗಲಿದೆ

ಒಎಸ್‌: ಆಂಡ್ರಾಯ್ಡ್‌ 9

ಪ್ರೊಸೆಸರ್‌: ಹುವಾವೆ ಕೀರನ್‌ 980

ರ್‍ಯಾಮ್‌: 8 ಜಿಬಿ, 512 ಜಿಬಿ

ಬ್ಯಾಟರಿ: 4,500 ಎಂಎಎಚ್‌. 55 ಡಬ್ಲ್ಯು ಹುವಾವೆ ಸೂಪರ್‌ ಚಾರ್ಜರ್‌

ಕ್ಯಾಮೆರಾ: 40 ಎಂಪಿ (ವೈಡ್‌ ಆ್ಯಂಗಲ್‌ ಲೆನ್ಸ್‌) + 16 ಎಂಪಿ (ಅಲ್ಟ್ರಾ ವೈಡ್‌ ಆ್ಯಂಗಲ್‌ ಲೆನ್ಸ್‌) + 8 ಎಂಪಿ (ಟೆಲೆಫೋಟೊ)

ಟೈಪ್‌ ಸಿ ಯುಎಸ್‌ಬಿ, ಡ್ಯುಯಲ್‌ ಸಿಮ್‌ ಕಾರ್ಡ್‌

**

ಮಿ ಮಿಕ್ಸ್‌ 3
ಶಿಯೋಮಿ ಕಂಪನಿ ಹೊಸ ಸ್ಮಾರ್ಟ್‌ಫೋನ್‌ ‘ಮಿ ಮಿಕ್ಸ್‌ 3’ ಸ್ಲೈಡಿಂಗ್‌ ಆಯ್ಕೆಯೊಂದಿಗೆ ಮಾರುಕಟ್ಟೆ ಬಂದಿದೆ. ಸ್ಲೈಡಿಂಗ್‌ ಆಯ್ಕೆ ಹಳತಾದರೂ ಸ್ಕ್ರೀನ್‌ ಅನ್ನು ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗುವಂತೆ ಮಾಡಲು ಈ ಆಯ್ಕೆ ನೀಡಿರುವುದಾಗಿ ಕಂಪನಿ ತಿಳಿಸಿದೆ.ಫೋನ್‌ ಸ್ಲೈಡ್‌ ಮಾಡಿದಾಗಷ್ಟೆ ಫ್ರಂಟ್‌ ಡ್ಯುಯಲ್‌ ಕ್ಯಾಮೆರಾ ಮತ್ತು ಫ್ಲ್ಯಾಷ್‌ ಕಾಣಿಸುತ್ತವೆ.

6.39 ಇಂಚು ಪರದೆ ಇದ್ದು, ಸ್ಕ್ರೀನ್‌ ಟು ಬಾಡಿ ರೇಷಿಯೊ ಶೇ 93.4ರಷ್ಟಿದೆ. ಬೆಲೆ ₹ 48,280 ರಿಂದ ಆರಂಭವಾಗಲಿದೆ.

ಸ್ಯಾಮ್ಸಂಗ್‌ ಫೋನ್‌ಗಿಂತಲೂ ಕಡಿಮೆ ಬೆಲೆಗೆ ’ಮಿ ಮಿಕ್ಸ್‌ 3’ ನೀಡಲಾಗುತ್ತಿದೆ ಎನ್ನುವ ಮಾತುಗಳು ಮಾರಕಟ್ಟೆಯಲ್ಲಿವೆ. ಆದರೆ, ವೈಶಿಷ್ಟ್ಯಗಳ ದೃಷ್ಟಿಯಿಂದ ಎರಡೂ ಭಿನ್ನವಾಗಿವೆ.

ಮಿ ಮಿಕ್ಸ್‌ 3ವೈಶಿಷ್ಟ್ಯ

ಪರದೆ:6.39 ಅಮೊಎಲ್‌ಇಡಿ ಫುಲ್‌ ಸ್ಕ್ರೀನ್‌ ಡಿಸ್‌ಪ್ಲೇ

ಒಎಸ್‌: ಆಂಡ್ರಾಯ್ಡ್‌ 9.0, ಕಸ್ಟಮ್‌ ಯುಐ.

ಪ್ರೊಸೆಸರ್‌:ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 855

ರ್‍ಯಾಮ್‌: 12 ಜಿಬಿ, 512 ಜಿಬಿ ಆಂತರಿಕ ಸಾಮರ್ಥ್ಯ

ಬ್ಯಾಟರಿ: 3,800 ಎಂಎಎಚ್‌

ಸಿಮ್‌: ಸಿಂಗಲ್‌ ಸಿಮ್‌ 5ಜಿ/4ಜಿ+/4ಜಿ/3ಜಿ/2ಜಿ

ಫೇಸ್‌ ಅನ್‌ಲಾಕ್‌, ಫಿಂಗ್‌ಪ್ರಿಂಟ್‌ ಸ್ಕ್ಯಾನರ್‌,

4 ಕ್ಯಾಮೆರಾ:ಫ್ರಂಟ್‌ ಕ್ಯಾಮೆರಾ:24ಎಂಪಿ + 2 ಎಂಪಿ.ರಿಯರ್‌ ಕ್ಯಾಮೆರಾ:, 12 ಎಂಪಿ+12 ಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT