ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ಸಮಸ್ಯೆ: ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡಿಕೊಳ್ಳಿ!

ಗೂಗಲ್ ಕ್ರೋಮ್ ಬ್ರೌಸರ್‌ ಲೋಪ–ಹೊಸ ಅಪ್‌ಡೇಟ್ ಬಿಡುಗಡೆ
Last Updated 28 ನವೆಂಬರ್ 2022, 9:23 IST
ಅಕ್ಷರ ಗಾತ್ರ

ಬೆಂಗಳೂರು: ಗೂಗಲ್ ಕ್ರೋಮ್‌ ವೆಬ್ ಬ್ರೌಸರ್‌ನಲ್ಲಿ ಭದ್ರತಾ ಲೋಪವೊಂದು ಕಂಡುಬಂದಿದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವಂತೆ ಕಂಪನಿ ಸೂಚಿಸಿದೆ.

ಗೂಗಲ್ ಕ್ರೋಮ್ ಬಳಕೆದಾರರಿಗಾಗಿ ನೂತನ ಅಪ್‌ಡೇಟ್ ಒಂದನ್ನು ಬಿಡುಗಡೆ ಮಾಡಿದೆ. ಎಲ್ಲರೂ ಅದನ್ನು ಡೌನ್‌ಲೋಡ್ ಮಾಡಿಕೊಂಡು, ಅಪ್‌ಡೇಟ್ ಮಾಡಿಕೊಳ್ಳಿ ಎಂದು ಸಂಸ್ಥೆಯ ಸೈಬರ್ ಭದ್ರತೆ ಮತ್ತು ಸೆಕ್ಯುರಿಟಿ ವಿಭಾಗದ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಲಿನಕ್ಸ್ ಮತ್ತು ವಿಂಡೋಸ್ ಬಳಕೆದಾರರಿಗೆ 107.0.5304.121/.122 ಹೊಸ ಅಪ್‌ಡೇಟ್ ಲಭ್ಯವಿದ್ದು, ಬಳಕೆದಾರರು ಮೆನುವಿಗೆ ಹೋಗಿ, ಅಲ್ಲಿರುವ ಸೆಟ್ಟಿಂಗ್ಸ್ ಆಯ್ಕೆ ಮೂಲಕ ಎಬೌಟ್ ಕ್ರೋಮ್ ಎಂದಿರುವುದನ್ನು ಕ್ಲಿಕ್ ಮಾಡಬೇಕು.

ನಂತರ, ಗೂಗಲ್ ಕ್ರೋಮ್ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿಕೊಳ್ಳಿ. ಹೊಸ ಅಪ್‌ಡೇಟ್ ಬಳಕೆ ಮಾಡುವುದರಿಂದ ಹ್ಯಾಕಿಂಗ್ ಸಾಧ್ಯತೆಯನ್ನು ತಪ್ಪಿಸಬಹುದು. ಜತೆಗೆ, ಕ್ರೋಮ್ ಮೂಲಕ ವೈರಸ್, ಮಾಲ್ವೇರ್ ನಿಮ್ಮ ಕಂಪ್ಯೂಟರ್ ಪ್ರವೇಶಿಸುವುದನ್ನು ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT