ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಸ್ಥಳ ಮಾಹಿತಿ ಕೇಳುವ ಬ್ರೌಸರ್ ನೋಟಿಫಿಕೇಶನ್ ನಿಲ್ಲಿಸುವುದು ಹೇಗೆ?

Last Updated 25 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬ್ರೌಸರ್‌ ನೋಟಿಫಿಕೇಷನ್‌ ನಿಲ್ಲಿಸುವುದು ಹೇಗೆ?

ಯಾವುದಾದರೊಂದು ವೆಬ್‌ಸೈಟ್ ತೆರೆದಾಗ ನೀವು ಬಳಸುತ್ತಿರುವ ಬ್ರೌಸರ್‌ನಲ್ಲಿ ನೀವಿರುವ ಸ್ಥಳದ ಮಾಹಿತಿ ನೀಡುವಂತೆ ನೋಟಿಫಿಕೇಶನ್ ಕಾಣಿಸಿಕೊಳ್ಳುತ್ತದೆ. ನೀವು ಭೇಟಿ ನೀಡಿದ ಅಥವಾ ಬ್ರೌಸ್ ಮಾಡಿರುವ ವಿಷಯದ ಜತೆಗೆ ನಿಮ್ಮ ಸ್ಥಳದ ಮಾಹಿತಿಯನ್ನೂ ಈ ವೆಬ್‌ಸೈಟ್‌ಗಳು ಪಡೆದುಕೊಳ್ಳುತ್ತವೆ.

ಉದಾಹರಣೆಗೆ ನೀವು ಗೂಗಲ್‌ನಲ್ಲಿ ಯಾವುದಾದರೊಂದು ವಸ್ತು ಬಗ್ಗೆ ಹುಡುಕಾಡಿರುತ್ತೀರಿ. ಕೆಲವು ಕ್ಷಣ ಬಳಿಕ ಅದೇ ವಸ್ತುವಿನ ಜಾಹೀರಾತು ನಿಮ್ಮ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ವಿಮಾನದ ಟಿಕೆಟ್‌ಗಾಗಿ ಹುಡುಕಿದ್ದರೆ ಇದಕ್ಕೆ ಸಂಬಂಧಿಸಿದ ಜಾಹೀರಾತುಗಳು ನಿಮ್ಮ ಫೇಸ್‌ಬುಕ್ ಗೋಡೆ ಮೇಲಿರುತ್ತವೆ.

ಇನ್ನೂ ಕೆಲವು ಜಾಹೀರಾತುಗಳು ನಿಮ್ಮ ಫೇಸ್‌ಬುಕ್ ಫೀಡ್‌ನಲ್ಲಿ ಕಾಣಿಸಿಕೊಂಡಾಗ ನಾವು ಈ ರೀತಿಯ ವಿಷಯವೇನೂ ಹುಡುಕಿಲ್ಲ. ಆದರೂ ಈ ಜಾಹೀರಾತು ಯಾಕೆ ಕಾಣಿಸಿಕೊಳ್ಳುತ್ತಿದೆ ಎಂಬುದು ನಿಮ್ಮ ಪ್ರಶ್ನೆಯಾದರೆ ಜಾಹೀರಾತಿನ ಬಲಭಾಗದಲ್ಲಿ ಡ್ರಾಪ್ ಡೌನ್ ಮೆನು ಕ್ಲಿಕ್ ಮಾಡಿ. ಅದಕ್ಕೆ ಕಾರಣವನ್ನೂ ಫೇಸ್‌ಬುಕ್ ತೋರಿಸುತ್ತದೆ.ಕೆಲವು ಜಾಹೀರಾತು ನೀವಿರುವ ಜಾಗವನ್ನು ಗುರಿಯಾಗಿರಿಸಿ ನೋಟಿಫಿಕೇಶನ್ ಕಾಣಿಸುವಂತೆ ಮಾಡುತ್ತದೆ. ಅಂದರೆ ನೀವು ಫೇಸ್‌ಬುಕ್‌ನಲ್ಲಿ ನೀವಿರುವ ಜಾಗ ನಮೂದಿಸಿರುತ್ತೀರಿ. ಈ ಜಾಗದ ಮಾಹಿತಿ ಪಡೆದು ಈ ಜಾಹೀರಾತುಗಳು ನಿಮ್ಮ ಟೈಮ್‌ಲೈನ್‌ನಲ್ಲಿ ಕಾಣಿಸುತ್ತವೆ. ಇತ್ತ ಕೆಲವು ಬ್ರೌಸರ್‌ಗಳು ನಿಮ್ಮ ಜಾಗದ ಮಾಹಿತಿ ಕೇಳುತ್ತವೆ. ಈ ರೀತಿಯ ನೋಟಿಫಿಕೇಷನ್‌ಗಳನ್ನು ಯಾವ ರೀತಿ ತಡೆಯಬಹುದು ಎಂಬುದನ್ನು ಇಲ್ಲಿ ನೋಡೋಣ.

ಕ್ರೋಮ್ ಬ್ರೌಸರ್

ಬ್ರೌಸರ್ ಬಲ ಭಾಗದಲ್ಲಿ ಡ್ರಾಪ್‌ಡೌನ್ ಮೆನು ಕ್ಲಿಕ್ ಮಾಡಿ ಸೆಟ್ಟಿಂಗ್ಸ್ ಕ್ಲಿಕ್ಕಿಸಿ. ಅಡ್ವಾನ್ಸ್ಡ್ ಸೆಟ್ಟಿಂಗ್ಸ್‌ನಲ್ಲಿ ಪ್ರೈವೆಸಿ ಆ್ಯಂಡ್ ಸೆಕ್ಯೂರಿಟಿ ಅಡಿಯಲ್ಲಿ ಸೈಟ್ ಸೆಟ್ಟಿಂಗ್ಸ್ ನಲ್ಲಿ ನಿಮ್ಮ ಸ್ಥಳ ಮಾಹಿತಿ ಅಥನಾ ಇನ್ನಿತರ ಮಾಹಿತಿ ಪಡೆಯಬೇಕೇ ಬೇಡವೇ ಎಂಬ ಆಯ್ಕೆ ಇರುತ್ತದೆ. ಅಲ್ಲಿ ಲೊಕೇಷನ್ ಕ್ಲಿಕ್ಕಿಸಿ ಅಗತ್ಯವಿದ್ದರೆ ಎನೇಬಲ್ ಮಾಡಬಹುದು ಇಲ್ಲವೇ ಬ್ಲಾಕ್ ಮಾಡಬಹುದು.

ಅಂಡ್ರಾಯ್ಡ್ ಮೊಬೈಲ್‌ನಲ್ಲಿ

ಅಂಡ್ರಾಯ್ಡ್ ಮೊಬೈಲ್‌ನಲ್ಲಿ ಬಳಸುವ ಕ್ರೋಮ್ ಬ್ರೌಸರ್‌ನಲ್ಲಿಯೂ ಇದೇ ರೀತಿ ಮಾಡಬಹುದು. ಆದರೆ ಡೆಸ್ಕ್‌ಟಾಪ್ ಆವೃತ್ತಿಯಲ್ಲಿದ್ದಂತೆ ಸ್ಥಳದ ಮಾಹಿತಿಯನ್ನು ಇಲ್ಲಿ ಡಿಸೇಬಲ್ ಮಾಡಲು ಸಾಧ್ಯವಾಗದೇ ಇದ್ದರೂ ನಿರ್ದಿಷ್ಟ ವೆಬ್‌ಸೈಟ್ ನಿಮ್ಮ ಸ್ಥಳದ ಮಾಹಿತಿಯನ್ನು ಪಡೆಯಲು ಇಚ್ಛಿಸುತ್ತದೆ ಎಂಬ ನೋಟಿಫಿಕೇಷನ್ ಬಂದರೆ ಅದಕ್ಕೆ ಬೇಡ ಎಂದು ಉತ್ತರಿಸಿ

ಫೈರ್‌ಫಾಕ್ಸ್

ಫೈರ್‌ಫಾಕ್ಸ್ ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ about:config ಎಂದು ಟೈಪಿಸಿ ಎಂಟರ್ ಕೀ ಒತ್ತಿದ ಕೂಡಲೇ ಬರುವ ನೋಟಿಫಿಕೇಷನ್‌ಗೆ ಸರಿ ಎಂದು ಕ್ಲಿಕ್ಕಿಸಿ. ಇದಾದ ಕೂಡಲೇ ತೆರೆದುಕೊಳ್ಳುವ ಪಟ್ಟಿಯಲ್ಲಿ dom.webnotifications.enabled ಮತ್ತು geo.enabled ಹುಡುಕಿ. ಇವುಗಳ ಮೇಲೆ ಡಬಲ್ ಕ್ಲಿಕ್ ಮಾಡಿ ವಾಲ್ಯೂ false ಎಂದು ಬದಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT