ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ವೀಕ್ಷಿಸಿದ ವಾಟ್ಸ್‌ಆ್ಯಪ್ ಸ್ಟೇಟಸ್ ಸೇವ್ ಮಾಡಿ

Last Updated 2 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ವಾಟ್ಸ್‌ಆ್ಯಪ್‌ನಲ್ಲಿ ನಮ್ಮ ಗೆಳೆಯರು ಶೇರ್ ಮಾಡಿರುವ ಫೋಟೊಗಳು ಅಥವಾ quotes ನಿಮಗೆ ಇಷ್ಟವಾಗಿರುತ್ತದೆ. ಅದು ನಿಮಗೆ ಬೇಕು ಎಂದೆನಿಸಿದರೆ ತಕ್ಷಣ ಮಾಡುವ ಕೆಲಸ ಅದರ ಸ್ಕ್ರೀನ್‌ಶಾಟ್ ತೆಗೆದುಕೊಂಡು ಸೇವ್ ಮಾಡಿಟ್ಟುಕೊಳ್ಳುವುದು. ಕೆಲವೊಮ್ಮೆ ಹಲವಾರು ಸ್ಟೇಟಸ್‌ಗಳ ನಡುವೆ ನಿರ್ದಿಷ್ಟ ಒಂದು ಫೋಟೊ ಮಾತ್ರ ಬೇಕಾಗಿರುತ್ತದೆ ಅಥವಾ ಅದರ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ನೀವು ಮರೆತಿರುತ್ತೀರಿ. ಹೀಗಿರುವಾಗ ನೀವು ನೋಡಿದ ಸ್ಟೇಟಸ್ ನಿಮಗೆ ಮತ್ತೆ ಬೇಕು ಎಂದರೆ ಏನು ಮಾಡುವುದು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಉತ್ತರ Files by Google App.

ಗೂಗಲ್ ಪ್ಲೇ ಸ್ಟೋರ್‌ನಿಂದ Files by Google ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಆ್ಯಪ್ ಓಪನ್ ಮಾಡಿದ ಕೂಡಲೇ ನಿಮ್ಮ ಫೋನ್‌ನಲ್ಲಿ ಲಿಂಕ್ ಆಗಿರುವ ಗೂಗಲ್ ಖಾತೆಯೊಂದಿಗೆ ನಿಮ್ಮ ಖಾತೆ ಡಿಸ್‌ಪ್ಲೇ ಆಗುತ್ತದೆ.ಕೆಳಗೆ ಸ್ಕ್ರಾಲ್ ಮಾಡಿದರೆ Show hidden Files ಎಂಬ ಆಪ್ಶನ್ ಇರುತ್ತದೆ. ಅದನ್ನು ಎನೇಬಲ್ ಮಾಡಿ.ಬ್ಯಾಕ್ ಬಟನ್ ಕ್ಲಿಕ್ ಮಾಡಿ main pageಗೆ ಬನ್ನಿ. ಅಲ್ಲಿ storage devices ಕೆಳಗೆ internal storage ಎಂದಿರುತ್ತದೆ. ಕ್ಲಿಕ್ ಮಾಡಿ.

ಅಲ್ಲಿ ವಾಟ್ಸ್‌ಆ್ಯಪ್ ಎಂಬ ಫೋಲ್ಡರ್ ಕಾಣುತ್ತದೆ. ಕ್ಲಿಕ್ ಮಾಡಿ. ಅಲ್ಲಿಯೇ ಮೀಡಿಯಾ ಎಂಬ ಪೋಲ್ಡರ್ ಕ್ಲಿಕ್ ಮಾಡಿದ ಕೂಡಲೇ Statuses ಕಾಣುತ್ತದೆ. ಇಲ್ಲಿ ಕ್ಲಿಕ್ ಮಾಡಿದ ಕೂಡಲೇ ನೀವು ವೀಕ್ಷಿಸಿದ್ದ ನಿಮ್ಮ ಗೆಳೆಯರ ವಾಟ್ಸ್‌ಆ್ಯಪ್ ಸ್ಟೇಟಸ್ ಕಾಣುತ್ತದೆ.

ನಿರ್ದಿಷ್ಟ ಫೋಟೊ ಮುಂದೆ ಡ್ರಾಪ್‌ಡೌನ್ ಮೆನುವಿನಲ್ಲಿ ಸೆಲೆಕ್ಟ್, ಶೇರ್ , ಡಿಲೀಟ್ ಸೇರಿದಂತೆ ಹಲವಾರು ಆಪ್ಶನ್‌ಗಳು ಕಾಣಿಸುತ್ತವೆ. ಇಲ್ಲಿ ನಿರ್ದಿಷ್ಟ ಫೋಟೊವನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿಕೊಳ್ಳಬಹುದು. ಒಂದಕ್ಕಿಂತ ಹೆಚ್ಚು ಫೋಟೊಗಳನ್ನು ಸೆಲೆಕ್ಟ್ ಮಾಡಿ ಬೇರೆ ಫೋಲ್ಟರ್‌ಗೆ ವರ್ಗಾಯಿಸಬಹುದು.

ನೀವು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ ಅಥವಾ ಸ್ವೀಕರಿಸಿದ ಫೋಟೊಗಳು ವಾಟ್ಸ್‌ಆ್ಯಪ್ ಇಮೇಜ್ ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತದೆ.ಅದೇ ರೀತಿ main pageನ ಕೆಳಗಡೆ clean ಎಂಬ ಆಪ್ಶನ್ ಇದೆ. ನಿಮ್ಮ ಮೊಬೈಲ್‌ನಲ್ಲಿರುವ ಅನಗತ್ಯ ಫೋಟೊ ಅಥವಾ ಫೈಲ್‌ಗಳನ್ನು ಈ ಮೂಲಕವೂ ಡಿಲೀಟ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT