ಕೈಗಡಿಯಾರ ತಯಾರಿಸುವ ಪ್ರಮುಖ ಕಂಪನಿ ಸೊನಾಟಾ, ಕಾಲಕ್ಕೆ ಅನುಗುಣವಾಗಿ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ತನ್ನ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಸಾಂಪ್ರದಾಯಿಕ ಕೈಗಡಿಯಾರಗಳಲ್ಲದೆ, ಸ್ಮಾರ್ಟ್ ಬ್ಯಾಂಡ್, ಹೈಬ್ರಿಡ್ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಹೀಗೆ ಇತ್ತೀಚೆಗೆ ಬಿಡುಗಡೆ ಮಾಡಿರುವುದೇ ಸೊನಾಟಾ ಸ್ಟ್ರೈಡ್ ಪ್ರೊ .

ಡಯಲ್, ಬೆಲ್ಟ್ ದೃಷ್ಟಿಯಿಂದ ಮೇಲ್ನೋಟಕ್ಕೆ ಸೊನಾಟಾದ ಸಾಮಾನ್ಯ ಅನಲಾಗ್ ವಾಚ್‌ನಂತೆ ಕಾಣುತ್ತದೆ. ಆದರೆ, ಇದರಲ್ಲಿ ಹೆಜ್ಜೆ ಲೆಕ್ಕಹಾಕುವ, ದಿನಕ್ಕೆ ಎಷ್ಟು ಕ್ಯಾಲರಿ ವ್ಯಯಿಸಲಾಗಿದೆ ಎಂದು ಹೇಳುವ, ಮೊಬೈಲ್‌ಗೆ ಕರೆ ಬಂದಾಗ ಎಚ್ಚರಿಸುವ ಮತ್ತು ಕ್ಯಾಮೆರಾ ನಿಯಂತ್ರಿಸುವ ಸೌಲಭ್ಯಗಳನ್ನು ನೀಡಿರುವುದರಿಂದ ಹೈಬ್ರಿಡ್ ಸ್ಮಾರ್ಟ್‌ವಾಚ್ ಆಗಿದೆ. ಬೆಲೆ ₹ 3,495. ಆಂಡ್ರಾಯ್ಡ್ 5.0 ಮತ್ತು ಐಒಎಸ್ 11 ಅದಕ್ಕೂ ಹೆಚ್ಚಿನದಕ್ಕೆ ಬೆಂಬಲಿಸುತ್ತದೆ.

ನೀವು, ಅನಲಾಗ್ ವಾಚ್ ಇಷ್ಟಪಡುವವರಾಗಿದ್ದು, ಅದರಲ್ಲಿಯೂ ಸ್ಮಾರ್ಟ್ ಸೌಲಭ್ಯಗಳು ಬೇಕೆಂದರೆ ಇದನ್ನು ಖರೀದಿಸಿಬಹುದು. ಎಬಿಎಸ್ ಕೇಸ್ ಹೊಂದಿದೆ. ಸ್ಮಾರ್ಟ್‌ವಾಚ್‌ನ ಒಳಗಡೆ ಎಡಬದಿಯ ಕೆಳಗಡೆ ಒಂದು ಡಯಲ್ ಇದೆ. ಇದರಲ್ಲಿ ಹೆಜ್ಜೆ, ಕ್ಯಾಲರಿ, ಕಾಲ್ ಅಲರ್ಟ್ ಸೂಚನೆಗಳು ಬರುತ್ತವೆ. 30 ಮೀಟರ್ ಆಳದವರೆಗೆ ನೀರಿನಲ್ಲಿ ಇಟ್ಟರೂ ಹಾಳಾಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಬಳಕೆ ಹೇಗೆ?: ಸೊನಾಟಾ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು ಸ್ಮಾರ್ಟ್‌ವಾಚ್‌ನೊಂದಿಗೆ ಸಂಪರ್ಕಿಸಬೇಕು. ಆ ಬಳಿಕ ಬರುವ ಸೂಚನೆಗಳನ್ನು ಅನುಸರಿಸಿ ಬಳಕೆ ಆರಂಭಿಸಬಹುದು.

ಕಾಲ್ ಅಲರ್ಟ್: ಮೊಬೈಲ್‌ಗೆ ಕರೆ ಬಂದಾಗ ವಾಚ್ ವೈಬ್ರೇಟ್ ಆಗುತ್ತದೆ. ವಾಚ್‌ನ ಆಫ್‌ಸೆಟ್ ಡಯಲ್ ಪಾಯಿಂಟ್ ಕರೆ ಬರುತ್ತಿರುವುದನ್ನು ಸೂಚಿಸುತ್ತದೆ.

ಕ್ಯಾಮೆರಾ ಕಂಟ್ರೋಲ್: ಆ್ಯಪ್ ಸಕ್ರಿಯವಾಗಿದ್ದಾಗ ಮಾತ್ರವೇ ಕ್ಯಾಮೆರಾ ನಿಯಂತ್ರಿಸಲು ಸಾಧ್ಯ.

ಫೋನ್ ಹುಡುಕು: ಸ್ಮಾರ್ಟ್ ಬಟನ್ ಒತ್ತಿದರೆ ಫೋನ್ ರಿಂಗ್ ಆಗುತ್ತದೆ. ಆಗ ಫೋನ್ ಎಲ್ಲಿದೆ ಅಂತ ಕಂಡುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.