ಪ್ರಸ್ತುತ ವಿಡಿಯೊ ಕರೆ ಮಾಡುತ್ತಲೇ ಚಾಟ್ ಮಾಡುವುದು, ಇತರೆ ಆ್ಯಪ್ಗಳ ನೋಟಿಫಿಕೇಷನ್ ಗಮನಿಸುವುದನ್ನು ಅಡಚಣೆ ಇಲ್ಲದೆ ನಡೆಸಬಹುದು. ವಿಡಿಯೊ ಕರೆಗಳೂ ಎಂಡ್–ಟು–ಎಂಡ್ ಎನ್ಕ್ರಿಪ್ಷನ್ಗೆ ಒಳಪಟ್ಟಿರುತ್ತವೆ ಎಂದು ಟೆಲಿಗ್ರಾಂ ತನ್ನ ಬ್ಲಾಗ್ನಲ್ಲಿ ವಿವರಿಸಿದೆ. ಸ್ಕ್ರೀನ್ ಮೇಲೆ ಕಾಣುವ ನಾಲ್ಕು ಎಮೋಜಿಗಳು ಹೊಂದಿಕೆಯಾಗುವುದನ್ನು ಗಮನಿಸುವ ಮೂಲಕ ವಿಡಿಯೊ ಕರೆ ಎನ್ಕ್ರಿಪ್ಟ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಕೋವಿಡ್ ಕಾರಣಗಳಿಂದಾಗಿ ಬಹುತೇಕ ಸಭೆಗಳು, ಚರ್ಚೆಗಳು, ಪಾಠ ಮತ್ತು ತರಬೇತಿಗಳು ಜೂಮ್, ಗೂಗಲ್ ಮೀಟ್ ರೀತಿಯ ವಿಡಿಯೊ ಕಾನ್ಫರೆನ್ಸ್ ಆ್ಯಪ್ಗಳ ಮೂಲಕವೇ ನಡೆಯುತ್ತಿವೆ.