ಶನಿವಾರ, ಅಕ್ಟೋಬರ್ 1, 2022
20 °C

ಬಳಕೆದಾರರಿಗೆ ಮತ್ತೊಂದು ಫೀಚರ್ ನೀಡಲು ಸಿದ್ದವಾದ ವಾಟ್ಸ್‌ಆ್ಯಪ್: ಏನದು?

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಸ್ಯಾನ್‌ಫ್ರಾನ್ಸಿಸ್ಕೊ: ಮೆಟಾ ಕಂಪನಿ ಮಾಲೀಕತ್ವದ ಮೆಸೇಜಿಂಗ್ ಆ್ಯಪ್ ‘ವಾಟ್ಸ್‌ಆ್ಯಪ್’ ಆಗಾಗ ತನ್ನ ಬಳಕೆದಾರರಿಗೆ ಹಿತವಾದ ಅಪ್ಡೇಟ್‌ಗಳನ್ನು ಕೊಡುವುದರಲ್ಲಿ ಸದಾ ಮುಂದು.

ಈಗ ವಾಟ್ಸ್‌ಆ್ಯಪ್ ಮತ್ತೊಂದು ಫೀಚರ್‌ ಅನ್ನು ಪರಿಚಯಿಸುತ್ತಿದೆ. ಸದ್ಯ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಗ್ರೂಪ್‌ನಿಂದ ಹೊರ ಹೋಗುವವರು ಅಂದರೆ ಲೆಫ್ಟ್‌ ಆದಾಗ ಅದು ಆ ಗ್ರೂಪ್‌ನಲ್ಲಿ ಎಲ್ಲರಿಗೂ ಗೊತ್ತಾಗುತ್ತಿದೆ. ಇದೀಗ ಗ್ರೂಪ್‌ನಿಂದ ಸೈಲೆಂಟ್ ಆಗಿ ಲೆಫ್ಟ್‌ ಆಗುವ ಅವಕಾಶವನ್ನು ಈ ಜನಪ್ರಿಯ ಮೆಸೆಂಜರ್ ನೀಡುತ್ತಿದೆ.

ಅಂದರೆ ಗ್ರೂಪ್‌ ಅಡ್ಮಿನ್‌ಗಳನ್ನು ಹೊರತುಪಡಿಸಿ ಆ ಗ್ರೂಪ್‌ನ ಇತರೆ ಸದಸ್ಯರಿಗೆ ಗೊತ್ತಾಗದಂತೆ ಗ್ರೂಪ್‌ ತೊರೆಯಬಹುದು. ಈ ರೀತಿಯ ಒಂದು ಫೀಚರ್‌ ಸಿದ್ದತೆಯಲ್ಲಿ ಇದ್ದು ಪ್ರಾಯೋಗಿಕವಾಗಿ ಜಾರಿಯಾದ ನಂತರ ಅದು ಎಲ್ಲರಿಗೂ ಲಭ್ಯವಾಗಲಿದೆ ಎಂದು WABetaInfo ವರದಿ ಮಾಡಿದೆ.

ಹಾಗೆಯೇ ವಾಟ್ಸ್‌ಆ್ಯಪ್‌ ಗ್ರುಪ್‌ ಅಡ್ಮಿನ್‌ಗಳ ಮಿತಿಯನ್ನು ಹೆಚ್ಚಳ ಮಾಡಲು ಮೆಟಾ ಕ್ರಮ ಕೈಗೊಳ್ಳುತ್ತಿದೆ ಎಂದು ವರದಿ ತಿಳಿಸಿದೆ.

ಇನ್ನೊಂದು ವಿಶೇಷತೆ ಎಂದರೆ ಕಳಿಸಿದ ಮೆಸೇಜ್‌ಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಅಥವಾ ಡಿಲೀಟ್ ಮಾಡಲು 1 ತಾಸು 8 ನಿಮಿಷ ಸಮಯ ಇದೆ. ಆದರೆ ಈ ಸಮಯವನ್ನು ಗರಿಷ್ಠ 2 ದಿನ ಅಂದರೆ 48 ಗಂಟೆವರೆಗೆ ಕೊಡಲು ವಾಟ್ಸ್‌ಆ್ಯಪ್ ಮುಂದಾಗಿದೆ ಎಂದು ಕೂಡ ವರದಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು