ಸೋಮವಾರ, ಮಾರ್ಚ್ 8, 2021
25 °C
ವನ್ಯಜೀವಿ ಪ್ರೇಮಿಗಳ ನೆಚ್ಚಿನ ಆ್ಯಪ್

ವೈಲ್ಡ್ ಟ್ರಯಲ್ಸ್ ಆ್ಯಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡೀಪುರದ ಅರಣ್ಯದಲ್ಲಿ ಹುಲಿ ಫೋಟೊ ತೆಗೆಯಲು ಮೂರು ದಿನಗಳಿಂದ ಕಾಯುತ್ತಿದ್ದಾರೆ ವನ್ಯಜೀವಿ ಛಾಯಾಗ್ರಾಹಕ ರಮೇಶ್. ಆದರೆ, ಅವರಿಗೆ ಹುಲಿ ಇರಲಿ, ಅದರ ಹೆಜ್ಜೆಯ ದರ್ಶನವೂ ಇಲ್ಲ.

ಪಕ್ಷಿತಜ್ಞ ಸುಂದರ್, ಮಂಡಗದ್ದೆ ಪಕ್ಷಿಧಾಮದಲ್ಲಿ ಅಪರೂಪದ ಉದ್ದ ಮೂತಿಯ ಕೊಕ್ಕರೆಯ ಜೀವನಕ್ರಮ ಅಭ್ಯಾಸ ನೋಡಲು ಬೈನಾಕ್ಯುಲರ್ ಹಿಡಿದು ಕಾಯುತ್ತಿದ್ದಾರೆ. ಆದರೂ ಪಕ್ಷಿ ಸಿಕ್ಕಿಲ್ಲ. ಒರಿಸ್ಸಾದ ಸಮೀಪದ ಸರೋವರವೊಂದರಲ್ಲಿ ಮೊಸಳೆಗಳೆಲ್ಲಾ ದಡದಲ್ಲಿ ಸೇರುತ್ತವೆ ಎಂದು ತಿಳಿದ ಆರ್. ಪಿ.ನಾಯರ್, ಕನ್ಯಾಕುಮಾರಿಯಿಂದ, ಅಲ್ಲಿಗೆ ಓಡೋಡಿ ಬಂದಿದ್ದಾರೆ. ಆದರೆ, ಮೊಸಳೆಗಳೊಂದೂ ಕಂಡಿಲ್ಲ.

ವನ್ಯಜೀವಿ ಧಾಮಗಳಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ಪಕ್ಷಿ ಪ್ರಿಯರು, ವನ್ಯಜೀವಿ ಪ್ರೇಮಿಗಳು, ಛಾಯಾಗ್ರಾಹಕರು, ಹವ್ಯಾಸಿ ಪ್ರವಾಸಿಗರು ಕಾದು ಕುಳಿತು ಕೊನೆಗೆ ಬರಿಗೈಯಲ್ಲಿ ವಾಪಸ್ ಬಂದ ಉದಾಹರಣೆಗಳಿವೆ. ಇವೆಲ್ಲ ಸರಿಯಾದ ಮುನ್ಸೂಚನೆ ಮಾರ್ಗದರ್ಶನ ನೀಡುವ ವ್ಯವಸ್ಥೆ ಇಲ್ಲದೇ ಕಾರಣ. ಇಂಥದ್ದನ್ನು ಗಮನಿಸಿದ, ಸಾಫ್ಟ್‌ವೇರ್‌ ಎಂಜಿನಿಯರ್, ವನ್ಯಜೀವಿ ಪ್ರಿಯ ಮಂಜುನಾಥಗೌಡ ಅವರು ‘ವನ್ಯಜೀವಿಗಳನ್ನು ನೋಡಲೆಂದೇ ಪ್ರವಾಸಕ್ಕೆ ತೆರಳುವವರಿಗೆ ಗೈಡ್ ಮಾಡಲೆಂದೇ ಒಂದು ಆ್ಯಪ್ ಸಿದ್ಧಪಡಿಸಿದ್ದಾರೆ.

ಅದರಲ್ಲಿ ವನ್ಯಜೀವಿಗಳು ಸಿಗುವ ಸ್ಥಳ, ಅವುಗಳನ್ನು ನೋಡಲು ಹೋಗಲು ಸರಿಯಾದ ಸಮಯ, ಅವುಗಳು ಯಾವ ಸಮಯಕ್ಕೆ ಬರುತ್ತವೆ ಎಂಬಂತಹ ಮಾಹಿತಿಯನ್ನು ನಿಮ್ಮ ಅಂಗೈಯಲ್ಲೇ ನೀಡುವ ಸಲುವಾಗಿ ಈ ಆ್ಯಪ್ ಕಾರ್ಯ ನಿರ್ವಹಿಸುತ್ತಿದೆ. ಅದರ ಹೆಸರು ‘ವೈಲ್ಡ್ ಟ್ರಯಲ್ಸ್ ಆ್ಯಪ್‌’. 

ಒಮ್ಮೆ ಈ ಅಪ್ಲಿಕೇಷನ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ ಸಾಕು. ದೇಶ, ವಿದೇಶಗಳ ಮೂಲೆ ಮೂಲೆಯ ವನ್ಯಜೀವಿ ತಾಣಗಳ ಪರಿಚಯವಾಗುತ್ತದೆ. ಜೊತೆಗೆ ಆ ಸ್ಥಳದ ಸುತ್ತಮುತ್ತಲಿನ ಪ್ರವಾಸಿ ತಾಣ ಹಾಗೂ ಸಫಾರಿ ಸೇವೆಗಳ ಮಾಹಿತಿಯೂ ಲಭ್ಯವಾಗುತ್ತದೆ.

ವನ್ಯಜೀವಿ ಪ್ರಿಯರೂ ಆದ ಮಂಜುನಾಥ್ ಗೌಡ, 20 ವರ್ಷಗಳಿಂದ ಕಬಿನಿಗೆ ಭೇಟಿ ನೀಡುತ್ತಿದ್ದರು. ಅಲ್ಲಿ  ಬೋರ್ಡ್ ಮೇಲೆ ಹುಲಿ ಕಾಣಿಸಿತು. ಚಿರತೆ ಕಾಣಿಸಿತು ಎಂದು ಬರೆಯುತ್ತಿದ್ದರು. ಆದರೆ ಅದು ಅವರಿಗೆ ಅಲ್ಲಿ ಹೋದರಷ್ಟೇ ತಿಳಿಯುತ್ತಿತ್ತು. ಆದರೆ ದೂರದ ಬೆಂಗಳೂರಿನಲ್ಲಿರುವ ವನ್ಯಜೀವಿ ಪ್ರೇಮಿಗಳಿಗೆ ಈ ಬಗ್ಗೆ ಮಾಹಿತಿ ಸಿಗುವುದಿಲ್ಲ. ಇದನ್ನು ಮನಗಂಡ ಮಂಜುನಾಥ್, ‘ಇಂಥ ತಂತ್ರಜ್ಞಾನದ ಯುಗದಲ್ಲಿ ಏನೇನೋ ಮಾಡುತ್ತಾರೆ. ಹಾಗೆಯೇ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ಏಕೆ ಕಷ್ಟ ಪಡಬೇಕು. ಎಲ್ಲಾ ಅಭಯಾರಣ್ಯ ಹಾಗೂ ಪಕ್ಷಿಧಾಮಗಳ ಮಾಹಿತಿಗಳು ಒಂದೆಡೆ ಸಿಗುವಂತಾದರೆ ಎಷ್ಟು ಚೆನ್ನ ಎನ್ನಿಸಿತ್ತು. ಹೀಗೆ ಆ ಯೋಚನೆಯಲ್ಲಿದ್ದಾಗಲೇ ಹುಟ್ಟಿಕೊಂಡಿದ್ದು ವೈಲ್ಡ್ ಟ್ರಯಲ್ಸ್ ಆ್ಯಪ್.

ಆ್ಯಪ್‌ನ ಸ್ವರೂಪ
ಈ ಆ್ಯಪ್‌ನಲ್ಲಿ ವಿಶ್ವದ ಸುಮಾರು 1700 ವನ್ಯಜೀವಿ ಧಾಮಗಳ ಪರಿಚಯವಿದೆ. ಕರ್ನಾಟಕದ ಸುಮಾರು 60ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳ ಧಾಮಗಳ ಪರಿಚಯ ಇದರಲ್ಲಿದೆ.

ಪ್ರತಿ ವನ್ಯಜೀವಿ ಧಾಮಗಳ ಮಾಹಿತಿಯನ್ನು ಕಲೆ ಹಾಕಲು ಗೈಡ್ ಗಳಿಗಾಗಿ ಇನ್ನೊಂದು ಆ್ಯಪ್ ಅನ್ನು ರಚಿಸಿದ್ದಾರೆ. ಅದರಲ್ಲಿ ಗೈಡ್ ಗಳು ತಮ್ಮ ತಮ್ಮ ಸ್ಥಳದ ಕುರಿತ ಪ್ರತಿದಿನದ ಅಪ್ ಡೇಟ್ ಅನ್ನು ತಿಳಿಸುತ್ತಾರೆ. ಆ ಅಪ್ ಡೇಟ್ ಗಳನ್ನು ಆಧರಿಸಿ ವೈಲ್ಡ್ ಟ್ರಯಲ್ಸ್ ತನ್ನ ಗ್ರಾಹಕರಿಗೆ ಮಾಹಿತಿ ನೀಡುತ್ತದೆ.

ಒಮ್ಮೆ ಆ್ಯಪ್ ಮೂಲಕ ಟ್ರಿಪ್ ಬುಕ್ ಮಾಡಿಕೊಂಡರೆ ಪ್ಯಾಕೇಜ್ ರೂಪದಲ್ಲಿ ಟ್ರಿಪ್ ವ್ಯವಸ್ಥೆ ಇರುತ್ತದೆ. ಏರ್ ಪೋರ್ಟ್ ಅಥವಾ ಬಸ್ ಸ್ಟ್ಯಾಂಡಿನಿಂದ ಕರೆದ್ಯೊಯುವುದರಿಂದ ಹಿಡಿದು ವನ್ಯಜೀವಿಧಾಮದ ಪ್ರವೇಶ ದರ, ಊಟ, ವಸತಿ ಎಲ್ಲವನ್ನೂ ಪ್ಯಾಕೇಜ್ ಒಳಗೊಂಡಿರುತ್ತದೆ. ಗೈಡ್, ಸುಫಾರಿ, ಹೋಟೆಲ್ ಎಲ್ಲವೂ ಪ್ಯಾಕೆಜ್‌ನಲ್ಲಿಯೇ ಬರುತ್ತದೆ. ಈ ಪ್ಯಾಕೇಜ್‌ಗಳು ಸಧ್ಯ ಭಾರತ ಹಾಗೂ ಆಫ್ರಿಕಾದ ಎಲ್ಲಾ ಸ್ಥಳಗಳನ್ನು ಒಳಗೊಂಡಿದೆ

70 ರಿಂದ 80 ದೇಶಗಳ ವನ್ಯಜೀವಿಧಾಮಗಳ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಿದೆ.

ಆ್ಯಪ್ ನಲ್ಲಿ ಟ್ರಿಪ್ ಗಳನ್ನು ನಾವೇ ಡಿಸೈನ್ ಮಾಡಿಕೊಂಡು ಆ ಮೂಲಕ ನಮಗಿಷ್ಟ ಬಂದ ಜಾಗಕ್ಕೆ ಹೋಗುವ ವ್ಯವಸ್ಥೆ ಸಿಗುವುದು ಇನ್ನೊಂದು ವಿಶೇಷ.


ಮಂಜುನಾಥ್‌ ಗೌಡ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು