ಸೋಮವಾರ, ಫೆಬ್ರವರಿ 24, 2020
19 °C

ವೈರಲ್ ಆಯ್ತು ಬಿಜೆಪಿ ನಾಯಕನ ‘ಹಿರೋಯಿನ್‌’ ಹೇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಔರಂಗಾಬಾದ್‌: ಬಿಜೆಪಿ ಮುಖಂಡ, ಮಹಾರಾಷ್ಟ್ರದ ಮಾಜಿ ಸಚಿವ ಬಬನ್‌ರಾವ್‌ ಲೋನಿಕರ್‌ ಅವರು ಯಾರ ಹೆಸರನ್ನೂ ಹೇಳದೆ, ಮಹಿಳಾ ತಹಶೀಲ್ದಾರ್‌ ಒಬ್ಬರನ್ನು ‘ಹಿರೋಯಿನ್‌’ ಎಂದು ತಮ್ಮ ಭಾಷಣದಲ್ಲಿ ಹೇಳಿರುವ ಧ್ವನಿ ಮುದ್ರಣವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ವಿವಾದ ಸೃಷ್ಟಿಸಿದೆ.

ರೈತರ ರ‍್ಯಾಲಿ ಆಯೋಜಿಸಿರುವ ಕುರಿತು ಜಾಲನಾ ಜಿಲ್ಲೆಯ ಪರ್ತೂರ್‌ ತಾಲ್ಲೂಕಿನ ಕಾರ್ಹಲಾ ಗ್ರಾಮದಲ್ಲಿ ಶನಿವಾರ ಕಾರ್ಯಕ್ರಮದಲ್ಲಿ ಅವರು, ರ‍್ಯಾಲಿಗೆ ಹಿರೋಯಿನ್‌ ಕರೆಸುವ ಬಗ್ಗೆ ಪ್ರಸ್ತಾವ ಮಾಡಿದ್ದರು.

ಈ ಹೇಳಿಕೆಗೆ ಆಡಳಿತಾರೂಢ ಎನ್‌ಸಿಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇಂಥ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಮತ್ತು ಮಹಿಳೆಯನ್ನು ನಿಂದಿಸಿದಂತೆ ಎಂದು ಆಪಾದಿಸಿದೆ.  ಹಿರೋಯಿನ್‌ ಎಂದು ಹೇಳುವುದು ನಿಂದನೆ ಮಾಡಿದಂತಾಗದು ಎಂದು ಹೇಳಿಕೆಯನ್ನು ಸಮರ್ಥಿಸಿ ಕೊಂಡಿರುವ ಲೋನಿಕರ್‌, ‘ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಲು ಈ ಪದ ಬಳಸಿದ್ದೇನೆ’ ಎಂದು ಹೇಳಿದ್ದಾರೆ.

‘ರೈತರ ರ‍್ಯಾಲಿಗೆ ಪಕ್ಷದ ಮುಖಂಡರನ್ನು ಆಹ್ವಾನಿಸಲಾಗುವುದು. ಈ ಸಂದರ್ಭದಲ್ಲಿ ‘ಹಿರೋಯಿನ್‌’ ಒಬ್ಬರನ್ನೂ ಕರೆಯಬಹುದು, ಇಲ್ಲದಿದ್ದರೆ, ನಮ್ಮ ಮಹಿಳಾ ತಹಶೀಲ್ದಾರ್‌ ಅವರನ್ನೇ ‘ಹಿರೋಯಿನ್‌’ ಎಂದು ಹೇಳಬಹುದು’ ಎಂದು ಅವರು ಹೇಳಿದ ಧ್ವನಿ ಮುದ್ರಣ ಸಾಮಾಜಿಕ ಜಾಲತಾಣದಲ್ಲಿ  ಹರಿದಾಡಿದೆ. 

‘ನನ್ನ ಹೇಳಿಕೆಯ ಮೂಲಕ ತಹಶೀಲ್ದಾರರನ್ನು ಅವಮಾನಿಸಿಲ್ಲ. ಹಿರೋಯಿನ್‌ ಅಥವಾ ಹಿರೋ ಎಂಬ ಪದವನ್ನು ಉತ್ತಮ ಕೆಲಸ ಮಾಡುವವರಿಗೆ ಬಳಸಲಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು