ಬುಧವಾರ, ಜುಲೈ 28, 2021
25 °C
ಕರಾಚಿಯಲ್ಲಿ ಆತಂಕ

ಪಾಕ್‌ನಲ್ಲಿ ಭೀತಿ | 'ಭಾರತದ ಯುದ್ಧ ವಿಮಾನಗಳು ಬರುತ್ತಿವೆ' ಟ್ವಿಟರ್‌ ಟ್ರೆಂಡಿಂಗ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯ ಜನರು ಮಂಗಳವಾರ ರಾತ್ರಿ ಸಾಮಾಜಿಕ ಮಾಧ್ಯಮಗಳಲ್ಲಿ 'ಭಾರತದ ಯುದ್ಧ ವಿಮಾನಗಳು ಬರುತ್ತಿವೆ' ಎಂದು ಗಾಬರಿಯಿಂದ ಪೋಸ್ಟ್‌ಗಳನ್ನು ಹಂಚಿಕೊಂಡರು.

ಟ್ವಿಟರ್‌ನಲ್ಲಿ ಬುಧವಾರ ರಾತ್ರಿಯವರೆಗೂ #IndianAirForce #KarachiBlackOut #PakistanAirForce ಹ್ಯಾಷ್‌ಟ್ಯಾಗ್‌ಗಳು ಟಾಪ್ ಟ್ರೆಂಡಿಂಗ್ ಆಗಿದ್ದವು.

ಭಾರತದ ಯುದ್ಧ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿ ಬಂದು ಕರಾಚಿಯ ಮೇಲೆ ಹಾರಾಡುತ್ತಿವೆ. ಸಿಂಧ್ ಪ್ರಾಂತ್ಯದಲ್ಲಿ ಬಾಲಾಕೋಟ್ ಮಾದರಿಯ ಮತ್ತೊಂದು ವಾಯುದಾಳಿ ನಡೆಯಬಹುದು ಎಂಬ ಆತಂಕ ವ್ಯಾಪಕವಾಗಿ ವ್ಯಕ್ತವಾಯಿತು. ಅಲ್ಲಿನ ಅಧಿಕಾರಿಗಳು ಕರಾಚಿ ನಗರದ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಬ್ಲಾಕ್‌ಔಟ್ ಮಾಡಿದರು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.


ಜೂನ್ 10ರ ರಾತ್ರಿ 7.55ಕ್ಕೆ ಟ್ವಿಟರ್ ಇಂಡಿಯಾ ಟ್ರೆಂಡಿಂಗ್

'ಫೆಬ್ರುವರಿ 27, 2019ರ ನಂತರ ಆಗಸದಲ್ಲಿ ಪಾಕಿಸ್ತಾನ ವಾಯುಪಡೆಯ ವಿಮಾನಗಳು ಗಸ್ತು ತಿರುಗುತ್ತಿರುವುದು ಕೇಳಿಸಿತು. ಗಂಭೀರವಾದ್ದು ಏನು ಆಗುವುದಿಲ್ಲ ಎಂದುಕೊಂಡಿದ್ದೆ' ಎಂದು ಪರೋಕ್ಷವಾಗಿ ಬಾಲಾಕೋಟ್ ಪ್ರಕರಣವನ್ನು ಪಾಕಿಸ್ತಾನದ ಪತ್ರಕರ್ತ ವಾಜ್ಹಾತ್ ಕಝ್ಮಿ ನೆನಪಿಸಿಕೊಂಡಿದ್ದಾರೆ.

ಕರಾಚಿ ನಿವಾಸಿ ಸಲ್ಮಾನ್ ಮಂಝೂರ್ 'ಪಾಕಿಸ್ತಾನ ವಾಯುಪಡೆಯ ವಿಮಾನಗಳು ಗಸ್ತು ತಿರುಗುತ್ತಿರುವೆ' ಎಂದು  ವಿಡಿಯೊ ತುಣುಕನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದೇ ಮಾದರಿಯ ವಿಡಿಯೊ ತುಣುಕುಗಳನ್ನು ಟ್ವಿಟರ್‌ನಲ್ಲಿ ಕೆಲವೊಂದಿಷ್ಟು ಜನರು, 'ಪಾಕಿಸ್ತಾನದ ಕರಾಚಿ ನಗರದ ಮೇಲೆ ಭಾರತೀಯ ವಾಯುಪಡೆಯ ವಿಮಾನಗಳು ಹಾರಾಡುತ್ತಿವೆ' ಎಂದು ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ರಕ್ಷಣಾ ಇಲಾಖೆ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. 

'ನಮ್ಮ ವಿಮಾನಗಳು ಗಡಿ ನಿಯಂತ್ರಣ ರೇಖೆ ದಾಟಿಲ್ಲ' ಎಂಬ ಭಾರತೀಯ ವಾಯುಪಡೆಯ ಹೆಸರು ಹೇಳದ ಇಚ್ಛಿಸದ ಅಧಿಕಾರಿಗಳ ಹೇಳಿಕೆಯನ್ನು ಎಎನ್‌ಐ ಸುದ್ದಿಸಂಸ್ಥೆಯು ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು