ಕಿಸ್ಸಿಂಗ್ ಗೂಬೆಗಳ ಫೋಟೊ ವೈರಲ್; ಕ್ಯೂಟ್ ಕ್ಯೂಟ್ ಎಂದ ನೆಟ್ಟಿಗರು

ಮುಂಬೈ: ಗೂಬೆ ಎಂಬ ಸುಂದರ ನಿಶಾಚರಿ ಪಕ್ಷಿಗಳು ಅಪಶಕುನ ಎಂದು ಭಾವಿಸುವವರು ಬಹಳ ಜನ. ಆದರೆ ಅವುಗಳೂ ಸೃಷ್ಟಿಯ ಸೌಂದರ್ಯ ಎಂದು ಭಾವಿಸುವವರು ವಿರಳ.
ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ವನ್ಯಜೀವಿ ಛಾಯಾಗ್ರಾಹಕರೊಬ್ಬರು ಕ್ಲಿಕ್ಕಿಸಿದ ಜೋಡಿ ಗೂಬೆ ಚುಂಬಿಸುವ ಫೋಟೊಗಳು ಈಗ ವೈರಲ್ ಆಗಿವೆ.
ಮುದ್ದಾದ ಗೂಬೆ ಜೋಡಿಯೊಂದು ಸ್ವಚ್ಛಂದವಾಗಿ ಕಾಡಿನಲ್ಲಿ ವಿಹರಿಸುವಾಗ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ಎರಡೂ ಗೂಬೆಗಳು ಪರಸ್ಪರ ಮುದ್ದಿಸುತ್ತಾ ಆನಂದವಾಗಿದ್ದ ಗೂಬೆಗಳನ್ನು ಬಾಂದ್ರಾದಲ್ಲಿ ಅಶ್ವಿನಿ ಕಂಕ್ರೆ ಎನ್ನುವ ಛಾಯಾಗ್ರಾಹಕ ಸೆರೆಹಿಡಿದಿದ್ದಾರೆ.
ಇನ್ನು ಈ ಚಿತ್ರಗಳನ್ನು ಹಂಚಿಕೊಂಡಿರುವ ಐಎಫ್ಎಸ್ ಅಧಿಕಾರಿ ಮಧು ಮಿತಾ ಅವರು, ಒಹ್! ಲವ್ಲಿ.. ಇದು ಪ್ರಿ ವೆಡ್ಡಿಂಗ್ ಶೂಟ್ ಇರಬೋದಾ ಎಂದು ಉದ್ಘಾರ ತೆಗೆದಿದ್ದಾರೆ.
Pre Wedding Photoshoot I suppose! #Spotted owlets at Bhandara, #Maharashtra pic.twitter.com/cxygtO1x04
— Madhu Mitha, IFS (@IfsMadhu) January 19, 2022
ಅನೇಕರು ಇವು ಖಂಡಿತ ಕ್ಯೂಟ್ ಕ್ಯೂಟ್ ಲವ್ ಬರ್ಡ್ಸ್ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.