ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಯಾತ್ರಿಗಳಿಗೆ ಪಲಾವ್‌, ಇಡ್ಲಿ; 'ಬಿರಿಯಾನಿ ಯಾಕಿಲ್ಲ?'- ಟ್ವೀಟಿಗರ ಪ್ರಶ್ನೆ

Last Updated 7 ಜನವರಿ 2020, 11:30 IST
ಅಕ್ಷರ ಗಾತ್ರ

ಬೆಂಗಳೂರು:ಇಸ್ರೊದ ಮಹತ್ವದ ಬಾಹ್ಯಾಕಾಶ ಯೋಜನೆ 'ಮಿಷನ್‌ ಗಗನಯಾನ' ಕೈಗೊಳ್ಳಲಿರುವ ಗಗನಯಾತ್ರಿಗಳಿಗಾಗಿ ಮೈಸೂರಿನಲ್ಲಿ ಪೊಟ್ಟಣ ಆಹಾರ ಸಿದ್ಧಪಡಿಸಲಾಗುತ್ತಿದೆ. ಇಡ್ಲಿ–ಸಾಂಬಾರ್‌, ಪಲಾವ್‌, ಉಪ್ಪಿಟ್ಟು ಸೇರಿದಂತೆ ಹಲವು ತಿಂಡಿಗಳನ್ನು ತಯಾರಿಸಲಾಗುತ್ತಿದೆ. ಆದರೆ, 'ಬಿರಿಯಾನಿ ಇಲ್ಲವೇ? ಬರೀ ಸಸ್ಯಹಾರವೇ? ಮೈಸೂರ್‌ ಪಾಕ್‌ ಸಹ ಕಳಿಸಿದ್ದರೆ ಚೆನ್ನಾಗಿತ್ತು ಅಲ್ಲವೇ?,..' ಇಂಥ ಸಾಕಷ್ಟು ಪ್ರಶ್ನೆಗಳನ್ನು ಟ್ವೀಟಿಗರು ಕೇಳಿದ್ದಾರೆ.

ಕೆಲವು ಟ್ವೀಟಿಗರು ಆಹಾರದ ವಿಚಾರದಲ್ಲೂ ರಾಜಕೀಯ ಮಾಡಿದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರೆ, ಮತ್ತೆ ಕೆಲವರು ವಿಜ್ಞಾನಿಗಳು ಸಿದ್ಧಪಡಿಸದಿರುವ ತಿಂಡಿಗಳ ಹೆಸರುಗಳನ್ನು ಪಟ್ಟಿ ಮಾಡಿ ಇದನ್ನೂ ಕಳಿಸಿ ಎಂದಿದ್ದಾರೆ. ಇನ್ನಷ್ಟು ಟ್ವೀಟಿಗರು; ಬರೀ ಸಸ್ಯಾಹಾರ ತಿಂಡಿಗಳೇ ಇವೆ, ಪಲಾವ್‌ ಇದೆ ಆದರೆ ಬಿರಿಯಾನಿ ಇಲ್ಲ... ಎಂದೆಲ್ಲ ಕಮೆಂಟ್‌ ಮಾಡಿದ್ದಾರೆ.

ಡಿಆರ್‌ಡಿಒದ ಮೈಸೂರಿನ ಆಹಾರ ಸಂಶೋಧನಾ ಪ್ರಯೋಗಾಲಯ ತಯಾರಿಸಿರುವ ಆಹಾರ ಪೊಟ್ಟಣಗಳ ಚಿತ್ರಗಳನ್ನು ಎಎನ್‌ಐ ಪ್ರಕಟಿಸಿಕೊಂಡಿದ್ದು, ಟ್ವೀಟಿಗರು ಬಗೆಗೆಯ ಟ್ವೀಟ್‌ಗಳ ಮೂಲಕ ಒಂದಷ್ಟು ಸಲಹೆಗಳನ್ನೂ ನೀಡಿದ್ದಾರೆ.ಸ್ವಿಗ್ಗಿ ನೀವು ಅಲ್ಲಿಗೂ ಆಹಾರ ಡೆಲಿವರಿ ಮಾಡುವಿರಾ? ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಸ್ವಿಗ್ಗಿ, ರಾಕೆಟ್‌ ಉಡಾವಣೆಯ ವಿಡಿಯೊ ಹಾಕಿ 'ನಾವು ಆಗಲೇ ಹೊರಟಿದ್ದೇವೆ' ಎಂದಿದೆ.

'ಸಸ್ಯಹಾರ ಮಾತ್ರ ಸಿದ್ಧಪಡಿಸುವ ಮೂಲಕ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ. ಇದಕ್ಕಾಗಿ ರಾಷ್ಟ್ರವ್ಯಾಪಿ ಮತ್ತೊಂದು ಪ್ರತಿಭಟನೆ ಕರೆಯಬೇಕಾಗುತ್ತದೆ', 'ಇಡ್ಲಿಗೆ ಕಾಯಿ ಚೆಟ್ನಿನೂ ಸಿಗುತ್ತಾ. ', 'ಇಷ್ಟೆಲ್ಲ ತಿಂದು ಗಗನಯಾತ್ರಿಗಳು ತೂಕ ಹೆಚ್ಚಿಸಿಕೊಂಡು ಬಂದರೆ?',.. ಹೀಗೆ ಕಮೆಂಟ್‌ಗಳು ಬಹಳಷ್ಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT