ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಕೊಟ್ಟು ಹೋಗುವಾಗ ಶೂ ಕಳ್ಳತನ ಮಾಡಿದ ಸ್ವಿಗ್ಗಿ ಡೆಲಿವರಿ ಬಾಯ್!

ದಕ್ಷಿಣ ದೆಹಲಿಯ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ
Published 12 ಏಪ್ರಿಲ್ 2024, 12:35 IST
Last Updated 12 ಏಪ್ರಿಲ್ 2024, 12:35 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬ ಆಹಾರವನ್ನು ಡಿಲಿವರಿ ಮಾಡಿ ಮರಳಿ ಹೋಗುವ ಸಮಯದಲ್ಲಿ ಮನೆಯೊಂದರಿಂದ ದುಬಾರಿ ಶೂಗಳನ್ನು (ನೈಕಿ) ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ದಕ್ಷಿಣ ದೆಹಲಿಯ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ರೋಹಿತ್ ಅರೋರಾ ಎನ್ನುವರು ಎಕ್ಸ್‌ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೊ ಹಂಚಿಕೊಂಡಿದ್ದಾರೆ. ರೋಹಿತ್ ಅವರು ಇದು ತಮ್ಮ ಸ್ನೇಹಿತನ ಮನೆಯಲ್ಲಿ ನಡೆದಿರುವ ಕಳ್ಳತನ ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಸ್ವಿಗ್ಗಿ ಪ್ರತಿಕ್ರಿಯಿಸಿದ್ದು, ಹೆಚ್ಚಿನ ವಿವರಗಳನ್ನು ನಮಗೆ ನೇರ ಮೇಸೆಜ್‌ ಮೂಲಕ ಸಲ್ಲಿಸಿ. ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದೆ.

ಆದರೆ ಇದುವರೆಗೆ ಸ್ವಿಗ್ಗಿ ಏನೂ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಆರ್ಡರ್‌ ನೀಡಿದ್ದ ಆಹಾರ ಪದಾರ್ಥವನ್ನು ತಲುಪಿಸಲು ಮನೆಯೊಂದಕ್ಕೆ ಬಂದಿದ್ದ ಡೆಲಿವರಿ ಬಾಯ್, ಮಹಿಳೆಯೊಬ್ಬರ ಕೈಯಲ್ಲಿ ಅದನ್ನು ಕೊಡುತ್ತಾನೆ. ಬಳಿಕ ಆ ಮಹಿಳೆ ಬಾಗಿಲು ಹಾಕಿಕೊಳ್ಳುತ್ತಾರೆ. ಕೆಲ ಹೊತ್ತು ಅಲ್ಲಿಯೇ ನಿಂತ ಡೆಲಿವರಿ ಬಾಯ್ ಶೂ ರ್ಯಾಕ್‌ನಲ್ಲಿದ್ದ ಶೂಗಳನ್ನು ತನ್ನ ಬಳಿಯಿದ್ದ ಒಂದು ಚೀಲದೊಳಗೆ ಹಾಕಿಕೊಂಡು ಅಲ್ಲಿಂದ ತೆರಳುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ ಎಂದು ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT