ಅಂಗಡಿಗಳಿಗೆ ಕನ್ನ; ಲೈವ್‌ಬ್ಯಾಂಡ್‌ನಲ್ಲಿ ಮೋಜು– ಮಸ್ತಿ

ಬುಧವಾರ, ಜೂಲೈ 24, 2019
27 °C

ಅಂಗಡಿಗಳಿಗೆ ಕನ್ನ; ಲೈವ್‌ಬ್ಯಾಂಡ್‌ನಲ್ಲಿ ಮೋಜು– ಮಸ್ತಿ

Published:
Updated:
Prajavani

ಬೆಂಗಳೂರು: ಬಸವನಗುಡಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ಕಳ್ಳತನ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಆರ್‌.ಟಿ. ನಗರದ ಸುಲ್ತಾನ್‌ ಪಾಳ್ಯದ ಸೈಯದ್ ಮೊಹಮ್ಮದ್ ಫೈಜಲ್ ಅಲಿಯಾಸ್ ಸೈಯದ್ ಇಸ್ಮಾಯಿಲ್ (20) ಮತ್ತು ವಿಕ್ರಮಕುಮಾರ್ ಅಲಿಯಾಸ್ ಉಸ್ಮಾನ್ (20) ಬಂಧಿತರು. ಅವರಿಬ್ಬರಿಂದ ₹ 40 ಸಾವಿರ ನಗದು, ಎರಡು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಎನ್‌.ಆರ್‌. ಕಾಲೊನಿಯಲ್ಲಿರುವ ನಾಲ್ಕು ಅಂಗಡಿಗಳಲ್ಲಿ ಜೂನ್‌ 30ರಂದು ರಾತ್ರಿ ಕಳ್ಳತನವಾಗಿತ್ತು. ಅಂಗಡಿಗಳ ಬಾಗಿಲುಗಳನ್ನು ಮೀಟಿ ತೆಗೆದು ಗಲ್ಲಾ ಪೆಟ್ಟಿಗೆಯಲ್ಲಿ ಹಣ ಹಾಗೂ ವಿವಿಧ ವಸ್ತುಗಳನ್ನು ಕದ್ದೊಯ್ಯಲಾಗಿತ್ತು. ಆ ಸಂಬಂಧ ದಾಖಲಾದ ದೂರಿನ ತನಿಖೆ ಕೈಗೊಂಡು, ಆರ್‌.ಟಿ. ನಗರದ ಕೆಂಪಾಪುರ ಪಾರ್ಕ್‌ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

‘ಕಳ್ಳತನದಿಂದ ಬಂದ ಹಣವನ್ನು ಆರೋಪಿಗಳು, ಐಷಾರಾಮಿ ಜೀವನಕ್ಕೆ ಖರ್ಚು ಮಾಡುತ್ತಿದ್ದರು. ಪ್ರತಿ ಬಾರಿ ಕಳ್ಳತನ ಮಾಡಿದಾಗಲೂ ಲೈವ್‌ ಬ್ಯಾಂಡ್‌ಗೆ ಹೋಗಿ ಮೋಜು– ಮಸ್ತಿ ಮಾಡುತ್ತಿದ್ದರು. ಹಣ ಖಾಲಿ ಆಗುತ್ತಿದ್ದಂತೆ ಪುನಃ ಕಳ್ಳತನ ಎಸಗುತ್ತಿದ್ದರು.’

‘ಕಬ್ಬಿಣದ ರಾಡ್‌ನಿಂದ ಬಾಗಿಲು ಮೀಟಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಬಾಣಸವಾಡಿ, ಕೋರಮಂಗಲ, ಮಹದೇವಪುರ, ಕೆ.ಆರ್. ಪುರ, ಆರ್‌.ಟಿ. ನಗರ ಹಾಗೂ ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲೂ ಇವರಿಬ್ಬರು ಕಳ್ಳತನ ಎಸಗಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !