ಶುಕ್ರವಾರ, ನವೆಂಬರ್ 15, 2019
21 °C

ಪೊಲೀಸರ ಮೇಲೆ ಹಲ್ಲೆ; ಇಬ್ಬರ ಬಂಧನ

Published:
Updated:

ಬೆಂಗಳೂರು: ಮೈಕೊ ಲೇಔಟ್ ಸಂಚಾರ ಠಾಣೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಇಬ್ಬರು ಆರೋಪಿಗಳನ್ನು ತಿಲಕ್‌ನಗರ ಪೊಲೀಸರು ಬಂಧಿಸಿದ್ದಾರೆ.

’ಬೊಮ್ಮನಹಳ್ಳಿಯ ಅಬ್ದುಲ್ ಜಬೀರ್ (30) ಹಾಗೂ ಗುರಪ್ಪನಪಾಳ್ಯದ ತಹಮತೀನ್ (20) ಬಂಧಿತರು. ಅವರಿಬ್ಬರು ಜುಲೈ 4ರಂದು ಹೆಡ್‌ ಕಾನ್‌ಸ್ಟೆಬಲ್ ಎಸ್.ಬಿ. ಶಿವಲಿಂಗ ಹಾಗೂ ಅವರ ಜೊತೆಗಿದ್ದ ಎಎಸ್‌ಐ ಮೇಲೆ ಹಲ್ಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಗರಕ್ಕೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಜಯನಗರ 9ನೇ ಹಂತದ ಕೇಕ್‌ವಾಲ ಜಂಕ್ಷನ್‌ನಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು. ಭದ್ರತೆ ಕೆಲಸ ಮುಗಿಯುತ್ತಿದ್ದಂತೆ ಜಂಕ್ಷನ್‌ ಸಮೀಪದಲ್ಲಿ ವ್ಹೀಲಿಂಗ್ ಮಾಡುತ್ತಿದ್ದವರನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದರು.’

‘ಅದೇ ವೇಳೆಯೇ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯಾಗಿತ್ತು. ಸಹಾಯಕ್ಕೆ ಹೋದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಹೆಡ್‌ ಕಾನ್‌ಸ್ಟೆಬಲ್ ಹಾಗೂ ಎಎಸ್‌ಐ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಸಮವಸ್ತ್ರ ಹಿಡಿದು ಎಳೆದಾಡಿ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು’ ಎಂದರು.

ಪ್ರತಿಕ್ರಿಯಿಸಿ (+)