ಗೂಡ್ಸ್‌ ರೈಲು ಸ್ಥಗಿತ; ಇಂಟರ್‌ಸಿಟಿ ವಿಳಂಬ

7

ಗೂಡ್ಸ್‌ ರೈಲು ಸ್ಥಗಿತ; ಇಂಟರ್‌ಸಿಟಿ ವಿಳಂಬ

Published:
Updated:

ಬೆಂಗಳೂರು: ಗೂಡ್ಸ್‌ ರೈಲು ತಾಂತ್ರಿಕ ದೋಷದಿಂದ ಸ್ಥಗಿತಗೊಂಡು ನಿಂತ ಕಾರಣ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗಬೇಕಾದ ಇಂಟರ್‌ಸಿಟಿ ರೈಲು (ಸಿದ್ಧಗಂಗಾ ಎಕ್ಸ್‌ಪ್ರೆಸ್‌) ಸುಮಾರು 3 ಗಂಟೆಗಳಷ್ಟು ತಡವಾಗಿ ಸಂಚರಿಸಿದೆ. 

ಗೊಲ್ಲಹಳ್ಳಿ ಬಳಿ ಮಧ್ಯಾಹ್ನ 2.30ರ ಸುಮಾರಿಗೆ ಗೂಡ್ಸ್‌ ರೈಲಿನ ಎಂಜಿನ್‌ನಲ್ಲಿ ದೋಷ ಕಂಡುಬಂದಿದೆ. ತಜ್ಞರು ಆಗಮಿಸಿ ಅದನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ನಿಡಗುಂದಿ ನಿಲ್ದಾಣದಲ್ಲಿ ತಂದು ನಿಲ್ಲಿಸಿದರು. ಬಳಿಕ ಬೆಂಗಳೂರು – ಹುಬ್ಬಳ್ಳಿ ನಡುವೆ ಸಂಚರಿಸುವ ರೈಲುಗಳಿಗೆ ಸಂಚರಿಸಲು ಅನುವು ಮಾಡಿಕೊಡಲಾಯಿತು. ರೈಲು ಕೆಲಕಾಲ ವಿಳಂಬವಾಗಿ ಸಂಚರಿಸಿದೆ. ಇದರಿಂದ ಇನ್ನೂ ಎರಡು ರೈಲುಗಳ ಸಂಚಾರದ ಅವಧಿ ವಿಳಂಬವಾಗಿದೆ ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.  

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !