ಅರ್ಹತೆ ಆಧಾರದಲ್ಲಿ ವಿದೇಶಿಗರು ಬರಲಿ: ಟ್ರಂಪ್‌

7

ಅರ್ಹತೆ ಆಧಾರದಲ್ಲಿ ವಿದೇಶಿಗರು ಬರಲಿ: ಟ್ರಂಪ್‌

Published:
Updated:
ಕೆಲವು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸುವ ಡೊನಾಲ್ಡ್ ಟ್ರಂಪ್‌ ನೇತೃತ್ವದ ಸರ್ಕಾರದ ನೀತಿಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ನಿಲುವಿಗೆ, ವಿವಿಧ ಸಂಘಟನೆಗಳ ಸದಸ್ಯರು ವಾಷಿಂಗ್ಟನ್‌ನಲ್ಲಿರುವ ಕೋರ್ಟ್‌ನ ಹೊರಭಾಗದಲ್ಲಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ವಾಷಿಂಗ್ಟನ್‌: ಅರ್ಹತೆ ಆಧರಿತ ವಲಸೆ ವ್ಯವಸ್ಥೆ ಮೂಲಕ ವಿದೇಶಿ ಕೆಲಸಗಾರರು ಅಮೆರಿಕಕ್ಕೆ ಬರುವುದನ್ನು ಬಯಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

‘ಜನ ನಮ್ಮ ದೇಶಕ್ಕೆ ಬರುವುದಕ್ಕೆ ನನ್ನ ವಿರೋಧವಿಲ್ಲ. ನಮಗೆ ಕೆಲಸಗಾರರು ಬೇಕಾಗಿದ್ದಾರೆ. ಆದರೆ, ಅರ್ಹರು ಕಾನೂನಿನ ಪ್ರಕಾರ ಬಂದರೆ ದೇಶಕ್ಕೂ ಒಳ್ಳೆಯದಾಗುತ್ತದೆ, ಕಂಪನಿಗಳಿಗೂ ನೆರವಾಗುತ್ತದೆ. ಭಾರಿ ಸಂಖ್ಯೆಯಲ್ಲಿ ಅಮೆರಿಕದಲ್ಲಿರುವ ಕಂಪನಿಗಳಿಗೆ ಬೇಕಾಗುವ ಕಾರ್ಮಿಕರನ್ನು ಈ ಮೂಲಕ ಒದಗಿಸಬಹುದಾಗಿದೆ’ ಎಂದಿದ್ದಾರೆ.

ಕೆಲವು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸುವ ತಮ್ಮ ಸರ್ಕಾರದ ನೀತಿಯನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ಬಳಿಕ, ವಲಸೆಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಟ್ರಂಪ್‌ ಈ ಪ್ರತಿಕ್ರಿಯೆ ನೀಡಿದ್ದಾರೆ.

ಇಂತಹ ನಿಲುವಿನಿಂದ ಭಾರತದಂತಹ ದೇಶಗಳ ಅರ್ಹರಿಗೆ ನೆರವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಚ್‌–1ಬಿ ವೀಸಾ ಪಡೆದು ಅಮೆರಿಕಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಿಂದ ಉದ್ಯೋಗಿಗಳು ಬರುತ್ತಾರೆ. ಆದರೆ ಪ್ರಸ್ತುತ ಇರುವ ವಲಸೆ ನಿಯಮಗಳಿಂದ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರೀನ್‌ ಕಾರ್ಡ್ ನೀಡುವಲ್ಲಿ ಪ್ರತಿ ದೇಶಕ್ಕೆ ಕೇವಲ ಶೇ 7ರಷ್ಟು ಅವಕಾಶವಿರುವುದರಿಂದ ಇಲ್ಲಿನ ಶಾಶ್ವತ ಪ್ರಜೆಗಳಾಗಲು ಸುಲಭದಲ್ಲಿ ಸಾಧ್ಯವಾಗುತ್ತಿಲ್ಲ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !