‘ಆಡಳಿತ ಸ್ಥಗಿತ ವರ್ಷಗಟ್ಟಲೆಮುಂದುವರಿಸುವೆ’

7

‘ಆಡಳಿತ ಸ್ಥಗಿತ ವರ್ಷಗಟ್ಟಲೆಮುಂದುವರಿಸುವೆ’

Published:
Updated:
Prajavani

ವಾಷಿಂಗ್ಟನ್ : ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಆರ್ಥಿಕ ಬೆಂಬಲ ನೀಡಲು ಸಂಸತ್ತು ನಿರಾಕರಿಸಿದರೆ, ಎರಡು ವಾರಗಳಿಂದ ಆಡಳಿತ ಭಾಗಶಃ ಕಾರ್ಯಸ್ಥಗಿತಗೊಳಿಸಿರುವುದನ್ನು ಮುಂದುವರಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೆದರಿಸಿದ್ದಾರೆ. 

ಶ್ವೇತಭವನದಲ್ಲಿ ಸಂಸದರೊಂದಿಗೆ ಟ್ರಂಪ್ ನಡೆಸಿದ ಸಭೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಇದಾದ ಬಳಿಕ ಮಾತ
ನಾಡಿದ ಅವರು, ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸುವ ಸಲುವಾಗಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ ಘೋಷಿಸಲು ಸಹ ತಾವು ಸಿದ್ಧವಿರುವುದಾಗಿ ಹೇಳಿದರು. 

‘ತಿಂಗಳು ಅಥವಾ ವರ್ಷಗಟ್ಟಲೆ ಆಡಳಿತ ಸ್ಥಗಿತಗೊಳಿಸುತ್ತೇನೆ ಎಂದು ಅವರು ಬೆದರಿಸಿದರು’ ಎಂದು ಸೆನೆಟ್‌ನ ಅಲ್ಪಸಂಖ್ಯಾತ ನಾಯಕ್ ಚಕ್ ಶುಮರ್ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದರು. 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !