ಭಾನುವಾರ, ನವೆಂಬರ್ 17, 2019
21 °C

ಚಾಮರಾಜನಗರ: ಎರಡು ತಲೆಯ ಕರು ಜನನ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಸಂತೇಮರಹಳ್ಳಿ ಸಮೀಪದ ಹಳ್ಳಿಕೆರೆಹುಂಡಿ ಗ್ರಾಮದಲ್ಲಿ ಹಸುವೊಂದು ಎರಡು ತಲೆಗಳನ್ನು ಹೊಂದಿರುವ ಗಂಡು ಕರುವಿಗೆ ಜನ್ಮ ನೀಡಿದೆ. 

ಗ್ರಾಮದ ನಿವಾಸಿ ರವಿ ಎಂಬುವರಿಗೆ ಸೇರಿದ ಹಸು ಅಪರೂಪದ ಕರುವಿಗೆ ಜನ್ಮ ನೀಡಿದೆ. ಕರು, ಎರಡು ಬಾಯಿ, ಎರಡು ಕಿವಿ ಮತ್ತು ನಾಲ್ಕು ಕಣ್ಣುಗಳನ್ನು ಹೊಂದಿದೆ. 

‘ಅದು ನಿಶ್ಶಕ್ತಿಯಿಂದ ಬಳಲುತ್ತಿದ್ದು, ಹಾಲು ಕುಡಿಸಲಾಗುತ್ತಿದೆ. ಎರಡು ಬಾಯಿಯಲ್ಲೂ ಹಾಲನ್ನು ಕುಡಿಯುತ್ತಿದೆ. ನಾಲ್ಕು ಕಣ್ಣುಗಳಿಗೂ ದೃಷ್ಟಿ ಇದೆ. ಆದರೆ, ಎದ್ದು ನಿಲ್ಲುವುದಕ್ಕೆ ಆಗುತ್ತಿಲ್ಲ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

‘ಹಸು ಕರು ಹಾಕಲು ಕಷ್ಟಪಡುತ್ತಿತ್ತು. ಹಾಗಾಗಿ ನನ್ನನ್ನು ಕರೆದರು. ಕರುವನ್ನು ಎಳೆದು ತೆಗೆಯಬೇಕಾಯಿತು. ವಿಚಿತ್ರವಾಗಿ ಜನಿಸಿರುವ ಕರು ಆರೋಗ್ಯದಿಂದ ಇದೆ. ನಿಂತುಕೊಳ್ಳಲು ಅದಕ್ಕೆ ಶಕ್ತಿ ಇಲ್ಲ. ಹಾಗಾಗಿ ಹಾಲು ಕುಡಿಸಲು ಮನೆಯವರಿಗೆ ತಿಳಿಸಿದ್ದೇನೆ’ ಎಂದು ಪಶುವೈದ್ಯ ಡಾ.ಸುಕಂದರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರತಿಕ್ರಿಯಿಸಿ (+)