ಗೋಲ್ಡನ್‌ ವೀಸಾ ಸ್ಥಗಿತಗೊಳಿಸಿದ ಬ್ರಿಟನ್‌

7
ದುರುಪಯೋಗದ ಆತಂಕ

ಗೋಲ್ಡನ್‌ ವೀಸಾ ಸ್ಥಗಿತಗೊಳಿಸಿದ ಬ್ರಿಟನ್‌

Published:
Updated:
Deccan Herald

ಲಂಡನ್‌: ದುರುಪಯೋಗದ ಕಾರಣ ಗೋಲ್ಡನ್‌ ವೀಸಾವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ಬ್ರಿಟನ್‌ ಸರ್ಕಾರ ಗುರುವಾರ ತಿಳಿಸಿದೆ.‌

ಅಗ್ರ ಹೂಡಿಕೆದಾರರಿಗೆ ನೀಡುವ (Tier 1 Visa) ವೀಸಾವನ್ನು ‘ಗೋಲ್ಡನ್‌ ವೀಸಾ’ ಎಂದು ಕರೆಯಲಾಗುತ್ತದೆ. ಬ್ರಿಟನ್‌ನಲ್ಲಿ ಮಿಲಿಯನ್‌ ಪೌಂಡ್‌ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡಲು ಆಸಕ್ತಿ ಉಳ್ಳವರಿಗೆ ಕ್ಷಿಪ್ರಗತಿಯಲ್ಲಿ ಈ ವೀಸಾ ನೀಡಲಾಗುತ್ತಿತ್ತು. ಈ ವೀಸಾವನ್ನು ಶುಕ್ರವಾರ ರಾತ್ರಿಯಿಂದಲೇ ಸ್ಥಗಿತಗೊಳಿಸಲಾಗುತ್ತಿದೆ. ಮುಂದಿನ ವರ್ಷ ಹೊಸ ಕಾನೂನು ಜಾರಿಯಾಗುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, 2009ರಿಂದ ಭಾರತದ 76 ಮಂದಿ ಕೋಟ್ಯಧಿಪತಿಗಳು ಈ ವರ್ಗದಲ್ಲಿ ವೀಸಾ ಪಡೆದು, ಬ್ರಿಟನ್‌ನಲ್ಲೇ ಶಾಶ್ವತವಾಗಿ ನೆಲೆಸಿದ್ದಾರೆ. 2013ರಲ್ಲಿ 16 ಮಂದಿ ಭಾರತೀಯರು ಈ ಸೌಲಭ್ಯ ಪಡೆದಿದ್ದರೆ, 2013ರಲ್ಲಿ ಏಳು ಮಂದಿಗೆ ಇಳಿಕೆಯಾಗಿತ್ತು.

ಕಳೆದ ವರ್ಷ 1 ಸಾವಿರ ಮಂದಿಗೆ ಈ ರೀತಿಯ ವೀಸಾ ನೀಡಲಾಗಿತ್ತು, ಇದರ ಹೆಚ್ಚಿನ ಲಾಭವನ್ನು ಚೀನಾ ಹಾಗೂ ರಷ್ಯಾದ ಕೋಟ್ಯಧಿಪತಿಗಳು ಪಡೆದುಕೊಂಡಿದ್ದರು.

‘ದೇಶದ ಆರ್ಥಿಕ ಹಾಗೂ ಉದ್ಯಮಪ್ರಗತಿಗೆ ಕೈಜೋಡಿಸುವ ಕಾನೂನು ಬದ್ಧ ಹಾಗೂ ನೈಜ ಹೂಡಿಕೆದಾರರಿಗೆ ಬ್ರಿಟನ್‌ ಯಾವಾಗಲೂ ಮುಕ್ತವಾಗಿ ತೆರೆದಿದೆ. ಆದರೆ, ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಬ್ರಿಟನ್‌ ವಲಸೆಖಾತೆ ವಿಭಾಗದ ಸಚಿವ ಕ್ಯಾರೋಲಿನ್‌ ನೊಕ್ಸ್‌ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !