ವಿಜ್ಞಾನಿಗಳಿಗಾಗಿ ಹೊಸ ವೀಸಾ ಸೌಲಭ್ಯ

7
ಸಂಶೋಧನಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕ್ರಮ

ವಿಜ್ಞಾನಿಗಳಿಗಾಗಿ ಹೊಸ ವೀಸಾ ಸೌಲಭ್ಯ

Published:
Updated:

ಲಂಡನ್‌: ಸಂಶೋಧನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯರು ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು ಮತ್ತು ಸಂಶೋಧಕರಿಗಾಗಿ ಹೊಸ ವೀಸಾ ವ್ಯವಸ್ಥೆ ಸೌಲಭ್ಯ ಕಲ್ಪಿಸಲು ಬ್ರಿಟನ್‌ ಮುಂದಾಗಿದೆ.

ಐರೋಪ್ಯ ಒಕ್ಕೂಟಗಳ ವ್ಯಾಪ್ತಿಯಿಂದ ಹೊರಗಿರುವ ದೇಶಗಳ ಸಂಶೋಧಕರು, ವಿಜ್ಞಾನಿಗಳು ಮತ್ತು ಅಕಾಡೆಮಿಕ್‌ ತಜ್ಞರು ಎರಡು ವರ್ಷಗಳವರೆಗೆ ಬ್ರಿಟನ್‌ನಲ್ಲಿ ಇರಲು ಈ ಹೊಸ ವ್ಯವಸ್ಥೆ ಅವಕಾಶ ಕಲ್ಪಿಸಲಿದೆ.

ಇದಕ್ಕಾಗಿ ಹೊಸದಾಗಿ ಆರಂಭಿಸಿರುವ ‘ಯುನೈಟೆಡ್‌ ಕಿಂಗ್‌ಡಂ ಸಂಶೋಧನೆ ಮತ್ತು ಆವಿಷ್ಕಾರ (ಯುಕೆಆರ್‌ಐ) ಯೋಜನೆಯನ್ನು ಈಗಿರುವ ವ್ಯವಸ್ಥೆಯಲ್ಲೇ ವಿಲೀನಗೊಳಿಸಲು ನಿರ್ಧರಿಸಲಾಗಿದೆ.

‘ಸಂಶೋಧನೆ ಕ್ಷೇತ್ರದಲ್ಲಿ ಬ್ರಿಟನ್‌ ವಿಶ್ವದ ನಾಯಕತ್ವ ಹೊಂದಿದೆ. ಈ ಹೊಸ ಬದಲಾವಣೆಯಿಂದ ಅಂತರರಾಷ್ಟ್ರೀಯ ಸಂಶೋಧಕರಿಗೆ ಬ್ರಿಟನ್‌ನಲ್ಲಿ ಕಾರ್ಯನಿರ್ವಹಿಸಲು ಮತ್ತು ತರಬೇತಿ ಪಡೆಯಲು ಅನುಕೂಲವಾಗುತ್ತದೆ’ ಎಂದು ಬ್ರಿಟನ್‌ ವಲಸೆ ಸಚಿವ ಕ್ಯಾರೊಲಿನ್‌ ನೋಕಸ್‌ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !