ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ತೆರೆಸಾ ಮೇ ಮೇಲೆ ಹೆಚ್ಚಿದ ಒತ್ತಡ

ಗುರುವಾರ , ಏಪ್ರಿಲ್ 25, 2019
27 °C
ಐರೋಪ್ಯ ಒಕ್ಕೂಟದಿಂದ (ಬ್ರೆಕ್ಸಿಟ್‌) ಹೊರನಡೆಯುವ ಯೋಜನೆಗೆ ದೊರೆಯದ ನಿರೀಕ್ಷಿತ ಬೆಂಬಲ

ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ತೆರೆಸಾ ಮೇ ಮೇಲೆ ಹೆಚ್ಚಿದ ಒತ್ತಡ

Published:
Updated:
Prajavani

ಲಂಡನ್‌ : ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಹೊರನಡೆಯುವ (ಬ್ರೆಕ್ಸಿಟ್‌) ಯೋಜನೆಗೆ ಸೂಕ್ತ ಬೆಂಬಲ ಪಡೆಯುವ ನಿಟ್ಟಿನಲ್ಲಿ ಬ್ರಿಟನ್‌ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವಂತೆ ತೆರೆಸಾ ಮೇ ಅವರ ವಿರುದ್ಧವೇ ಕನ್ಸರ್ವೇಟಿವ್‌ ಪ‍ಕ್ಷದಲ್ಲಿ ಒತ್ತಡಗಳು ಹೆಚ್ಚಾಗುತ್ತಿದೆ.

‘ತೆರೆಸಾ ಅವರ ರಾಜಕೀಯ ಶಕ್ತಿಯನ್ನು ಇನ್ನಷ್ಟು ಕುಂಠಿತಗೊಳಿಸಿ, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಡ ತಂತ್ರ ಹೇರಲು ಪಕ್ಷದ ಹಿರಿಯ ನಾಯಕರು ಯೋಜನೆ ರೂಪಿಸಿದ್ದಾರೆ’ ಎಂದು ಬ್ರಿಟನ್‌ನ ಮಾಧ್ಯಮಗಳು ವರದಿ ಮಾಡಿವೆ. 

‘ಪ್ರಧಾನಿ ಹುದ್ದೆಗೆ ತೆರೆಸಾ ಅವರು ರಾಜೀನಾಮೆ ನೀಡುವ ಕುರಿತಂತೆ ಯಾವುದೇ ಸುಳಿವು ಇಲ್ಲ’ ಪ್ರಧಾನಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರೆಕ್ಸಿಟ್‌ ಒಪ್ಪಂದವು ಸಂಸತ್ತಿನಲ್ಲಿ ಎರಡು ಬಾರಿ ಮಂಡನೆಯಾಗಿ ಸೋಲುಕಂಡಿದೆ. ಮತ್ತೊಂದು ಬಾರಿ ಈ ಒಪ್ಪಂದವನ್ನು ಮತಕ್ಕೆ ಹಾಕುವಂತೆ ತೆರೆಸಾ ಮಾಡಿದ್ದ ಮನವಿಯನ್ನು ಸ್ಪೀಕರ್‌ ತಿರಸ್ಕರಿಸಿದ್ದರು.

ಮೂರನೇ ಬಾರಿ ಒಪ್ಪಂದಕ್ಕೆ ಸೂಕ್ತ ಬೆಂಬಲ ಪಡೆಯಲು ತೆರೆಸಾ ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇದು ಯಶಸ್ವಿಯಾದರೆ ಪ್ರಧಾನಿ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ.

ಏಪ್ರಿಲ್‌ 12ರ ಒಳಗಾಗಿ ತನ್ನ ಮುಂದಿನ ನಡೆಯನ್ನು ತಿಳಿಸುವಂತೆ ಐರೋಪ್ಯ ಒಕ್ಕೂಟವು (ಇಯು) ಬ್ರಿಟನ್‌ಗೆ ತಾಕೀತು ಮಾಡಿತ್ತು. ಅನುಮೋದನೆ ದೊರೆಯದಿದ್ದರೂ ಸಹ ಒಕ್ಕೂಟದಿಂದ ಹೊರನಡೆಯಲು ಬ್ರಿಟನ್‌ಗೆ ಅವಕಾಶವಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !