ಭಾನುವಾರ, ಸೆಪ್ಟೆಂಬರ್ 26, 2021
28 °C

ಗೊಳಸಂಗಿ: ಹಜರತ್ ಬಾವಾಸಾಹೇಬ್ ಖಾದ್ರಿ ಉರುಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿಡಗುಂದಿ: ಗೊಳಸಂಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮುಸ್ಲಿಂ ಸಮಾಜದ ಹಜರತ್ ಸೂಫಿ ಶೇಖ್ ಅಬ್ದಲ್ ರಹೀಮ್ ಖಾದ್ರಿ ಅಲ್ ಸಿದ್ದಿಕಿ ಉರ್ಫ ಬಾವಾಸಾಹೇಬ್ ಖಾದ್ರಿ ರಹೇಮತುಲ್ಲಾ ಅಲೈ ಅವರ 333ನೇಯ ಉರುಸ್‌ ಮೇ 3ರಿಂದ ಆರಂಭಗೊಳ್ಳಲಿದೆ.

ಮೇ 4ರ ಸಂಜೆ 5.30ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಸೈಯ್ಯದ್‌ಶಾ ಶಂಶುದ್ದೀನ್ ಖಾದ್ರಿ ಸಾಹೇಬ್ ಜಾಗೀರದಾರ ಮನೆಯಿಂದ ಗಂಧ ಹೊರಟು ಹಜರತ್ ಬಾವಾಸಾಹೇಬ್ ಖಾದ್ರಿ(ರ.ಹ.)ಅವರ ಮಜಾರೆ ಶರೀಫ್‌ಕ್ಕೆ ತೆರಳಲಿದೆ. ಸಜ್ಜಾದೆ ನಸೀನ್ ಮತ್ತು ಬಿರಾದಾರೆ ಸಜ್ಜಾದೆ ನಸೀನ್‌ ಅವರಿಂದ ನಡೆಯಲಿದೆ.

ಹಜರತ್ ಸೈಯ್ಯದ್‌ಶಾ ತಜಮುಲ್ ಖಾದ್ರಿ ಸಾಹೇಬ್ ಜಹಾಗೀರದಾರ ಇವರಿಂದ ಸಲಾಂ ಹಾಗೂ ಫಾತಿಯಾಖಾನಿ ಕಾರ್ಯಕ್ರಮ ನಡೆಯಲಿದೆ. ಅಂದೇ ಅನ್ನಸಂತರ್ಪಣಾ ಕಾರ್ಯಕ್ರಮ ಜರಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.