ಎಚ್‌1ಬಿ ನೌಕರರಿಗೆ ಕಡಿಮೆ ವೇತನ: ₹32 ಲಕ್ಷ ದಂಡ

7
ಬೆಂಗಳೂರು, ಹೈದರಾಬಾದಿನಲ್ಲಿ ಕಚೇರಿ ಹೊಂದಿರುವ ಸಂಸ್ಥೆ

ಎಚ್‌1ಬಿ ನೌಕರರಿಗೆ ಕಡಿಮೆ ವೇತನ: ₹32 ಲಕ್ಷ ದಂಡ

Published:
Updated:
Deccan Herald

ವಾಷಿಂಗ್ಟನ್‌ (ಪಿಟಿಐ): ನಿಗದಿಪಡಿಸಿದ ಮೊತ್ತಕ್ಕಿಂತ ಕಡಿಮೆ ವೇತನ ನೀಡಿದ 12 ಮಂದಿ ಉದ್ಯೋಗಿಗಳಿಗೆ 3 ಲಕ್ಷ ಡಾಲರ್‌ (₹ 2.15 ಕೋಟಿ) ಪಾವತಿಸುವಂತೆ ಅಮೆರಿಕ ಮೂಲದ ಐಟಿ ಸಾಫ್ಟ್‌ವೇರ್‌ ಕಂಪನಿಗೆ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಸೂಚನೆ ನೀಡಿದೆ. ಅಲ್ಲದೇ, ಕಾರ್ಮಿಕ ಕಾನೂನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಇದೇ ಸಂಸ್ಥೆಗೆ 45 ಸಾವಿರ ಡಾಲರ್‌ (₹32.34 ಲಕ್ಷ) ದಂಡ ವಿಧಿಸಿ ಆದೇಶ ಹೊರಡಿಸಿದೆ.

ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾದ ಮೇಲೆ ಎಚ್1ಬಿ ವೀಸಾ ಪಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದರು. ಇದನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ತನಿಖೆಗೆ ಆದೇಶಿಸುತ್ತಿದ್ದು, ಈ ವೇಳೆ ಕಡಿಮೆ ವೇತನ ನೀಡಿದ್ದ ಪ್ರಕರಣ ಬಯಲಾಗಿತ್ತು. ಎಚ್‌–1 ವೀಸಾ ಪಡೆದವರಲ್ಲಿ ಭಾರತೀಯರೇ ಹೆಚ್ಚು. 

‘ಅಮೆರಿಕದ ಕಾರ್ಮಿಕ ವೇತನ ಇಲಾಖೆ (ಡಬ್ಲ್ಯೂಎಚ್‌ಡಿ)  ನಡೆಸಿದ ತನಿಖೆ ವೇಳೆ ‘ಪೀಪಲ್‌ ಟೆಕ್‌ ಗ್ರೂಪ್‌ ಇಂಕ್‌’ ಕಂಪನಿ, ತನ್ನ ಅತಿಥಿ ನೌಕರರಿಗೆ ನಿಗದಿಪಡಿಸಿದ ವೇತನಕ್ಕಿಂತ ಕಡಿಮೆ ವೇತನ ನೀಡಿದ್ದು ಬೆಳಕಿಗೆ ಬಂದಿತ್ತು. ಈ ಮೂಲಕ ಎಚ್‌1 ವೀಸಾದ ಕಾರ್ಮಿಕ ಕಾನೂನನ್ನು ಕಂಪನಿಯೂ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ’ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಪೀಪಲ್‌ ಟೆಕ್‌ ಕಂಪನಿಯೂ ವಾಷಿಂಗ್ಟನ್‌ ಸಮೀಪದ ರೆಡ್‌ಮಂಡ್‌ನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಬೆಂಗಳೂರು ಮತ್ತು ಹೈದರಾಬಾದಿನಲ್ಲಿ ಕಚೇರಿಗಳನ್ನು ಹೊಂದಿವೆ.

ವಿದೇಶದಲ್ಲಿರುವ ತಾಂತ್ರಿಕ ಪ್ರಾವೀಣ್ಯತೆ ಹಾಗೂ ವಿಶೇಷ ತಜ್ಞರಿಗೆ ಅಮೆರಿಕದ ಕಂಪನಿಗಳಲ್ಲಿ ಕೆಲಸ ಮಾಡಲು ಎಚ್‌1ಬಿ ವೀಸಾ ನೀಡಲಾಗುತ್ತದೆ. ಆದರೆ ಈ ನೌಕರರಿಗೆ ಕನಿಷ್ಠ ವೇತನವನ್ನು ಕಾನೂನಿನ ಪ್ರಕಾರ ನಿಗದಿಪಡಿಸಲಾಗಿದೆ. 

‘ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್‌ ಅನಾಲಿಸ್ಟ್‌ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್‌ಗಳಿಗೆ ಪ್ರವೇಶ ಹಂತದ ವೇತನ ನೀಡಿದ್ದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದರು. ಅಲ್ಲದೇ ಕೆಲಸವಿಲ್ಲದ ಸಂದರ್ಭದಲ್ಲಿ ಸರಿಯಾಗಿ ವೇತನ ಪಾವತಿಸದಿರುವುದು ಕಂಡುಬಂದಿತ್ತು’ ಇಲಾಖೆಯ ಹಂಗಾಮಿ ನಿರ್ದೇಶಕ ಕೆರಿ ಆಗಿಲ್ಲರ್‌ ತಿಳಿಸಿದರು.

ಎಚ್‌1 ವೀಸಾ ಕಾನೂನು ಉಲ್ಲಂಘನೆ ಮಾಡಿದ 30 ಕಂಪನಿಗಳನ್ನು ಉದ್ದೇಶಪೂರ್ವಕ ಕಾನೂನು ಉಲ್ಲಂಘಿಸಿದ ಸಂಸ್ಥೆ ಎಂದು ಕಾರ್ಮಿಕ ಇಲಾಖೆ ಪಟ್ಟಿ ಮಾಡಿತ್ತು. ಈ ರೀತಿ ಪಟ್ಟಿಗೆ ಸೇರಿದ ಕಂಪನಿಗಳಲ್ಲಿ ಭಾರತೀಯ ಅಮೆರಿಕನ್ನರಿಗೆ ಸೇರಿದ ಕಂಪನಿಗಳೇ ಹೆಚ್ಚಿರುವುದು ಕಂಡುಬಂದಿದೆ.

 

 

 

 

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !