ಗೋಪ್ಯತೆ ಉಲ್ಲಂಘನೆ: ಫೇಸ್‌ಬುಕ್‌ಗೆ ₹34,280 ಕೋಟಿ ದಂಡ?

ಭಾನುವಾರ, ಜೂಲೈ 21, 2019
25 °C

ಗೋಪ್ಯತೆ ಉಲ್ಲಂಘನೆ: ಫೇಸ್‌ಬುಕ್‌ಗೆ ₹34,280 ಕೋಟಿ ದಂಡ?

Published:
Updated:
Prajavani

ವಾಷಿಂಗ್ಟನ್: ಖಾಸಗಿತನ ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ₹34,280 ಕೋಟಿ ದಂಡ ವಿಧಿಸಲು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ಮುಂದಾಗಿದೆ.

ವಾಲ್‌ಸ್ಟ್ರೀಟ್ ಜರ್ನಲ್ ಈ ವಿಷಯ ವರದಿ ಮಾಡಿದೆ.

ಆದರೆ ಅಂತಿಮವಾಗಿ ದಂಡ ವಿಧಿಸಲು ನ್ಯಾಯಾಂಗ ಇಲಾಖೆ ಅನುಮತಿ ಬೇಕಾಗುತ್ತದೆ. ಒಂದು ವೇಳೆ ಅನುಮತಿ ದೊರಕಿದಲ್ಲಿ, ಖಾಸಗಿತನ ಉಲ್ಲಂಘನೆಗೆ ಎಫ್‌ಟಿಸಿ ಈತನಕ ವಿಧಿಸಿದ ಅತಿ ಹೆಚ್ಚು ಮೊತ್ತದ ದಂಡ ಇದಾಗಲಿದೆ.

ದಂಡ ವಿಧಿಸುವ ಜತೆಗೆ, ವೈಯಕ್ತಿಕ ಮಾಹಿತಿಗಳನ್ನು ಫೇಸ್‌ಬುಕ್‌ ಹೇಗೆ ಬಳಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆಯೂ ನಿರ್ಬಂಧ ಹೇರಲು ಎಫ್‌ಟಿಸಿ ಮುಂದಾಗಲಿದೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. 2016ರಲ್ಲಿ ಕೇಂಬ್ರಿಜ್ ಅನಲಿಟಿಕಾ, ಫೇಸ್‌ಬುಕ್‌ನ ‌ಲಕ್ಷಾಂತರಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಳವು ಮಾಡಿತ್ತು ಎನ್ನುವುದು ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಫೇಸ್‌ಬುಕ್‌ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ಪುನರ್‌ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಫ್‌ಟಿಸಿ ಕಳೆದ ವರ್ಷ ಘೋಷಿಸಿತ್ತು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !