ಭಾನುವಾರ, ಮೇ 16, 2021
24 °C

VIDEO: ಎಸ್.ಎಲ್. ಭೈರಪ್ಪ ಅವರ 'ಪರ್ವ' ಕಾದಂಬರಿ ನಾಟಕ ರೂಪಕ್ಕೆ ಬಂದ ಬಗೆ

ಆರೇಳು ವರ್ಷಗಳ ಹಿಂದೆಯೇ, ಎಸ್.ಎಲ್. ಭೈರಪ್ಪ ಅವರ 'ಪರ್ವ' ಕಾದಂಬರಿಯನ್ನು ನಾಟಕ ರೂಪಕ್ಕೆ ತರಲು ಮುಂದಾಗಿದ್ದವರು ನಿರ್ದೇಶಕ ಪ್ರಕಾಶ್ ಬೆಳವಾಡಿ. ಅದಕ್ಕಾಗಿ ಭೈರಪ್ಪ ಅವರನ್ನು ಭೇಟಿ ಕೂಡ ಮಾಡಿದ್ದರು. ಹೇಗೆ ಮಾಡುವುದು ಎಂಬ ಪ್ರಶ್ನೆ ಬಂದಾಗ, ಆ ವಿಚಾರವನ್ನು‌ ಅಲ್ಲಿಗೇ ನಿಲ್ಲಿಸಿದ್ದರು. ಇದೀಗ ಮತ್ತೆ 'ಪರ್ವ'ವನ್ನು ಕೈಗೆತ್ತಿಕೊಂಡು, ರಂಗರೂಪಕ್ಕೆ ತರುವುದರ ಜೊತೆಗೆ ಮೈಸೂರಿನ ರಂಗಾಯಣಕ್ಕಾಗಿ ನಿರ್ದೇಶಿಸಿದ್ದಾರೆ. ಏಳೂವರೆ ಗಂಟೆಗಳ ಈ ನಾಟಕದ ವಿಶೇಷ ಪ್ರದರ್ಶನ ಮಾರ್ಚ್ 12ರಿಂದ 14ರವರೆಗೆ ಮೈಸೂರಿನಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ, ನಿರ್ದೇಶಕ ಪ್ರಕಾಶ್ ಬೆಳವಾಡಿ, 'ಪ್ರಜಾವಾಣಿ' ಯೊಂದಿಗೆ ಮಾತನಾಡಿದ್ದಾರೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp