‘ಮಮ್ಮೂಕ್ಕ’ ಅಭಿಮಾನಿ ಮಂಜು!

ಶನಿವಾರ, ಏಪ್ರಿಲ್ 20, 2019
31 °C

‘ಮಮ್ಮೂಕ್ಕ’ ಅಭಿಮಾನಿ ಮಂಜು!

Published:
Updated:
Prajavani

ಮಂಜು ವಾರಿಯರ್‌ಗೆ ಅದೃಷ್ಟ ಬೆನ್ನಟ್ಟಿ ಬರುತ್ತಿದೆ. ಒಂದೆಡೆ ಮೋಹನ್‌ಲಾಲ್‌ ಜೊತೆಗಿನ ’ಲೂಸಿಫರ್‌‘ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದರೆ ಮತ್ತೊಂದೆಡೆ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಮಂಜು.

ಇಷ್ಟಾದರೂ ಮಂಜುಗೆ ಇನ್ನೊಂದು ಬೇಸರ ಉಳಿದುಬಿಟ್ಟಿದೆಯಂತೆ. ಮಲಯಾಳಂ ಚಿತ್ರರಂಗದ ಮತ್ತೊಬ್ಬ ಮೇರುನಟ, ಎವರ್‌ಗ್ರೀನ್‌ ಹೀರೊ ಮಮ್ಮೂಟ್ಟಿ ಅವರೊಂದಿಗೆ ಮುಖ್ಯಭೂಮಿಕೆಯಲ್ಲಿ ನಟಿಸಬೇಕು ಎಂಬ ಅವರ ಕನಸು ಇನ್ನೂ ನನಸಾಗಿಲ್ಲವಂತೆ.

ತಮ್ಮ ಪ್ರತಿಭೆಗೆ ತಕ್ಕ ಅವಕಾಶಗಳು ಹುಡುಕಿ ಬರುತ್ತಿರುವುದು ಮತ್ತು ಬೇರೆ ಭಾಷೆಗೂ ವಿಸ್ತರಿಸಿಕೊಳ್ಳುತ್ತಿರುವುದು ತಮ್ಮ ಕುರಿತು ಅಭಿಮಾನ ಪಡುವಂತಾಗಿದೆ. ಆದರೂ ಮಾತೃಭಾಷೆಯಲ್ಲೇ ಪರಿಪೂರ್ಣತೆ ಕಾಣಬೇಕಾದರೆ ಮಮ್ಮೂಟ್ಟಿ ಜೊತೆ ನಟಿಸಬೇಕು ಎಂಬುದು ಅವರ ನಂಬಿಕೆ.

ಮಂಜು ವಾರಿಯರ್‌, ಮೋಹನ್‌ಲಾಲ್‌ ಅವರೊಂದಿಗೆ ಏಳು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಮಮ್ಮೂಟ್ಟಿ ಜೊತೆಗೆ ನಟಿಸುವ ದಿನಕ್ಕಾಗಿ ಕಾಯುತ್ತಲೇ ಇದ್ದಾರೆ. ಮಂಜು ಇತ್ತೀಚೆಗಷ್ಟೇ ’ಕುಂಜಾಲಿ ಮರಕ್ಕರ್‌‘ ಚಿತ್ರೀಕರಣವನ್ನು ಮುಗಿಸಿದ್ದಾರೆ. ’ಅಸುರನ್‌‘ ಚಿತ್ರೀಕರಣ ಸಾಗಿದೆ.

ತಮಿಳು ಚಿತ್ರರಂಗ ಮಾಲಿವುಡ್‌ ಬಗ್ಗೆ ಹೊಂದಿರುವ ಅಭಿಮಾನಕ್ಕೆ ಮಂಜು ಕರಗಿಹೋಗಿದ್ದಾರೆ. ’ಅಸುರನ್‌‘ ಚಿತ್ರದ ಪೋಸ್ಟರ್‌ ಮತ್ತು ಎಲ್ಲಾ ರೀತಿಯ ಪ್ರಚಾರ ಸಾಮಗ್ರಿಗಳಲ್ಲಿ ’ಧನುಷ್‌ ಮತ್ತು ಮಂಜು ವಾರಿಯರ್‌‘ ಎಂದೇ ನಿರ್ದೇಶಕ ವೆಟ್ರಿಮಾರನ್‌ ಉಲ್ಲೇಖಿಸುತ್ತಾರೆ. ಇದು ಅವರ ಅಭಿಮಾನದ ಪ್ರತೀಕ ಎನ್ನುತ್ತಾರೆ ಈ ಮೇರು ನಟಿ.

v

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !