ನಾಮಪತ್ರ ವಾಪಸ್; ಪಕ್ಷದ ತೀರ್ಮಾನವಲ್ಲ

ಶುಕ್ರವಾರ, ಏಪ್ರಿಲ್ 26, 2019
33 °C

ನಾಮಪತ್ರ ವಾಪಸ್; ಪಕ್ಷದ ತೀರ್ಮಾನವಲ್ಲ

Published:
Updated:

ವಿಜಯಪುರ: ‘ಶಿವಸೇನಾ ಅಭ್ಯರ್ಥಿ ಸಲ್ಲಿಸಿದ್ದ ಉಮೇದುವಾರಿಕೆ ವಾಪಸ್‌ ಪಡೆದಿರುವುದರ ಹಿಂದೆ ಬಿಜೆಪಿ, ಜೆಡಿಎಸ್‌ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಆರೋಪಿಸಿದ್ದಾರೆ.

‘ರಾಜಕೀಯ ಅನುಭವವಿರುವ ಕಾರಣ, ಗೋಲಗೇರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹಾದೇವ ರಾಠೋಡಗೆ ಶಿವಸೇನಾ ಪಕ್ಷದ ಬಿ ಫಾರಂ ನೀಡಲಾಗಿತ್ತು. ಪಕ್ಷದ ಯಾವೊಬ್ಬ ಪದಾಧಿಕಾರಿಗಳ ಗಮನಕ್ಕೆ ತರದೆ ರಾಠೋಡ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಸದ್ಯ ಸಂಪರ್ಕಕ್ಕೂ ಸಹ ಸಿಗುತ್ತಿಲ್ಲ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !