ಭಾನುವಾರ, ಮಾರ್ಚ್ 29, 2020
19 °C

ವಿವಾಹಬಾಹಿರ ಸಂಬಂಧ: ಪರಿಹಾರ ಇಲ್ಲವೇ?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

prajavani

28 ವರ್ಷದ ವಿವಾಹಿತೆ. ಇಬ್ಬರು ಮಕ್ಕಳಿದ್ದಾರೆ. ಪತಿ ನನಗೆ ಎಲ್ಲಾ ರೀತಿಯ ಖುಷಿಯನ್ನು ನೀಡಿದ್ದಾರೆ. ಆದರೆ ಅವರಿಗೆ ವಿವಾಹಬಾಹಿರ ಸಂಬಂಧವಿದೆ. ನಾನು ಹಲವಾರು ಬಾರಿ ಪ್ರಾಣಕ್ಕೆ ಅಪಾಯವನ್ನು ತಂದುಕೊಂಡರೂ ಪತಿ ಆ ಹೆಂಗಸಿನ ಸಹವಾಸ ಬಿಡುತ್ತಿಲ್ಲ. ನನಗೆ ಅದೇ ಯೋಚನೆ ಮರುಕಳಿಸುತ್ತಿರುತ್ತದೆ. ಅವರನ್ನು ಸರಿದಾರಿಗೆ ತರಲು ಸಲಹೆನೀಡಿ.

ಹೆಸರು, ಊರು ಇಲ್ಲ

ನೀವು ಜೀವಕ್ಕೆ ಅಪಾಯ ತಂದುಕೊಳ್ಳುವಷ್ಟು ತೀವ್ರವಾಗಿ ಪ್ರತಿಭಟಿಸಿದರೂ ಪತಿಗೆ ಆ ಸಂಬಂಧದಿಂದ ಬಿಡಿಸಿಕೊಳ್ಳಲಾಗುತ್ತಿಲ್ಲ. ಇದೇಕೆ ಎಂದು ಯೋಚಿಸಿದ್ದೀರಾ? ವಿವಾಹಬಾಹಿರ ಸಂಬಂಧಗಳು ಕೇವಲ ಕಾಮದಾಹವನ್ನು ತೀರಿಸಿಕೊಳ್ಳಲು ಶುರುವಾಗುತ್ತವೆ ಎನ್ನುವುದು ತಪ್ಪುತಿಳಿವಳಿಕೆ. ಪತಿಗೆ ಆ ಹೆಣ್ಣಿನೊಡನೆ ಕಾಮವನ್ನೂ ಮೀರಿದ ಅನ್ಯೋನ್ಯತೆ ಬೆಳೆದಿದೆ. ಅಂತಹ ಅನ್ಯೋನ್ಯತೆ ನಿಮ್ಮಿಬ್ಬರ ನಡುವೆ ಸಾಧ್ಯವಾದಾಗ ಅವರಿಗೆ ಬೇರೆ ಹೆಣ್ಣಿನ ಸಂಬಂಧದ ಅಗತ್ಯವಿರುವುದಿಲ್ಲ. ಕೇವಲ ಬೆದರಿಕೆ, ಒತ್ತಡಗಳಿಂದ ಇದು ಸಾಧ್ಯವಾಗುವುದಿಲ್ಲ. ಇಬ್ಬರೂ ದಾಂಪತ್ಯಚಿಕಿತ್ಸೆ ಪಡೆಯುವ ಬಗೆಗೆ ಪತಿಯ ಜೊತೆ ಮಾತನಾಡಿ. ಅವರು ಒಪ್ಪದಿದ್ದರೆ ಅವರಿಂದ ದೂರವಾಗಿ ನಿಮ್ಮ ಮತ್ತು ಮಕ್ಕಳ ಜೀವನವನ್ನು ಕಟ್ಟಿಕೊಳ್ಳುವುದು ಹೇಗೆ ಎಂದು ಯೋಚಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು