ಮಿಸೆಸ್ ಇಂಡಿಯಾ: ರಾಜ್ಯದ ನಾಲ್ವರಿಗೆ ಕಿರೀಟ

ಬೆಂಗಳೂರು: ಗೋವಾದಲ್ಲಿ ಇತ್ತೀಚೆಗೆ ನಡೆದ ‘ಮಿಸೆಸ್ ಇಂಡಿಯಾ ಐ ಆಮ್ ಪವರ್ಫುಲ್ ಸ್ಪರ್ಧೆ’ಯಲ್ಲಿ ರಾಜ್ಯದ ನಾಲ್ವರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಒಟ್ಟು ನಾಲ್ಕು ವಿಭಾಗದ ಸ್ಪರ್ಧೆಗಳಲ್ಲಿ ಕರ್ನಾಟಕದ ಸ್ಪರ್ಧಿಗಳಾದ ದಿವ್ಯಾ ನವೀನ್ (ಮಿಸೆಸ್ ಇಂಡಿಯಾ ಗ್ಲೋಬಲ್ ಯೂನಿವರ್ಸ್), ವಾಣಿ ರೆಡ್ಡಿ (ಮಿಸೆಸ್ ಇಂಡಿಯಾ ವರ್ಲ್ಡ್ ವೈಡ್), ಶ್ರೀದೇವಿ ಅಪ್ಪಾಚ (ಮಿಸೆಸ್ ಇಂಡಿಯಾ ಕರ್ವಿ ವರ್ಲ್ಡ್), ಕಾರ್ತಿಕಾ ಶ್ಯಾಮ್ (ಮಿಸೆಸ್ ಇಂಡಿಯಾ ಕರ್ವಿ ಯೂನಿವರ್ಸ್) ವಿಜೇತರಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಐವರು ಸ್ಪರ್ಧಿಗಳು ರಾಷ್ಟ್ರ ಮಟ್ಟದ ಮಿಸೆಸ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.