ಮಂಗಳವಾರ, ಸೆಪ್ಟೆಂಬರ್ 28, 2021
21 °C
ಕಾರು ಭಸ್ಮ, ಯಾವುದೇ ಸಾವು ನೋವುಗಳು ಸಂಭವಿಸಿದ ವರದಿಯಾಗಿಲ್ಲ

‌ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸದ ಬಳಿ ರಾಕೆಟ್‌ ದಾಳಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ‌ಅಫ್ಗಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಅವರ ನಿವಾಸದ ಸಮೀಪದಲ್ಲಿರುವ ಮೈದಾನದಲ್ಲಿ ಮಂಗಳವಾರ ಮೂರು ರಾಕೆಟ್‌ಗಳು ದಾಳಿ ನಡೆಸಿವೆ.  

ಮುಸ್ಲಿಂ ಸಮುದಾಯದ ತ್ಯಾಗ– ಬಲಿದಾನಗಳ ಹಬ್ಬ ಈದ್‌ ಅಲ್‌–ಅಧಾಕ್ಕೆ ಒಂದು ದಿನ ಬಾಕಿ ಇರುವಂತೆಯೇ ಈ ರಾಕೆಟ್‌ಗಳ ದಾಳಿ ನಡೆದಿದೆ. ಘಟನೆಯಲ್ಲಿ ಒಂದು ಕಾರು ಭಸ್ಮವಾಗಿದೆ. ಆದರೆ ಯಾವುದೇ ಸಾವು–ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ‌ಅಫ್ಗಾನಿಸ್ತಾನ ಆಂತರಿಕ ಸಚಿವಾಲಯದ ವಕ್ತಾರ ಮಿರ್ವಾಯಿಸ್ ಸ್ಟಾನಿಕ್ಜೈ ಹೇಳಿದ್ದಾರೆ.

ಹಸಿರು ವಲಯದ ನಡುವಿರುವ ಅಧ್ಯಕ್ಷರ ನಿವಾಸದ ಸುತ್ತಾ ಭದ್ರವಾದ ಸಿಮೆಂಟ್ ಗೋಡೆಗಳಿವೆ. ರಾಷ್ಟ್ರಾಧ್ಯಕ್ಷರ ಭವನ ಸಂಪರ್ಕಿಸುವ ಸುತ್ತಮುತ್ತಲಿನ ಎಲ್ಲ ರಸ್ತೆಗಳನ್ನು ಬಹಳ ಹಿಂದೆಯೇ ಮುಚ್ಚಲಾಗಿದೆ.

ಅಮೆರಿಕ ತನ್ನ ಸೇನಾಪಡೆಗಳನ್ನು ‌ಅಫ್ಗಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ ನಂತರ, ಅಫ್ಗನ್ ಮತ್ತು ತಾಲಿಬಾನಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ‌ಅಫ್ಗಾನಿಸ್ತಾನ ಕೆಲವಡೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು