ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟುಗೋಲು ಹಾಕಿದ್ದ ಅಫ್ಗನ್‌ ಆಸ್ತಿಯ ಬಿಡುಗಡೆ ಆದೇಶಕ್ಕೆ ಬೈಡನ್‌ ಸಹಿ

Last Updated 12 ಫೆಬ್ರುವರಿ 2022, 15:54 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕವು ಮುಟ್ಟುಗೋಲು ಹಾಕಿದ್ದ ಅಫ್ಗಾನಿಸ್ತಾನದ ಅಂದಾಜು 7 ಶತಕೋಟಿ ಡಾಲರ್ (₹52,745 ಕೋಟಿ) ಆಸ್ತಿಯನ್ನು ಬಿಡುಗಡೆಗೊಳಿಸುವ ಆದೇಶಕ್ಕೆ ಅಧ್ಯಕ್ಷ ಜೋ ಬೈಡನ್‌ ಅವರು ಶುಕ್ರವಾರ ಸಹಿ ಹಾಕಿದ್ದಾರೆ.

‘ಬಡತನ ಪೀಡಿತ ಅಫ್ಗಾನಿಸ್ತಾನಕ್ಕೆ ಮಾನವೀಯ ನೆರವು ಹಾಗೂ ವಿಶ್ವವನ್ನೇ ಬೆಚ್ಚಿಬೀಳಿಸಿದ ಸೆಪ್ಟೆಂಬರ್‌ 11ರ ಭಯೋತ್ಪಾದನಾ ದಾಳಿಯ ಸಂತ್ರಸ್ತರಿಗೆ ಸಹಾಯ ಒದಗಿಸಲುಈ ಹಣವನ್ನು ಉಪಯೋಗಿಸಲಾಗುವುದು’ ಎಂದು ಶ್ವೇತಭವನ ತಿಳಿಸಿದೆ.

‘ತಕ್ಷಣವೇ ಈ ಹಣವನ್ನು ಬಿಡುಗಡೆಗೊಳಿಸಲಾಗುವುದಿಲ್ಲ. ಆದರೆ, ಅಫ್ಗಾನಿಸ್ತಾನದಲ್ಲಿ ಪರಿಹಾರ ಹಾಗೂ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಟ್ರಸ್ಟ್‌ಗಳ ನಿಧಿಗೆ ಮುಟ್ಟುಗೋಲು ಹಾಕಲಾದ ಮೊತ್ತದಲ್ಲಿ 3.5 ಶತಕೋಟಿ ಡಾಲರ್‌ ಅನ್ನು (₹26,372 ಕೋಟಿ) ವರ್ಗಾವಣೆ ಮಾಡುವಂತೆ ಬೈಡನ್‌ ಬ್ಯಾಂಕುಗಳಿಗೆ ಸೂಚಿಸಿದ್ದಾರೆ. ಇನ್ನೂ,3.5 ಬಿಲಿಯನ್‌ ಡಾಲರ್‌ ಅನ್ನು ಭಯೋತ್ಪಾದನಾ ದಾಳಿಯ ಸಂತ್ರಸ್ತರುಗಳ ಮೊಕದ್ದಮೆಗಳಿಗೆ ಹಣ ‍ಪಾವತಿ ಮಾಡಲು ಬಳಸಲಾಗುವುದು’ ಎಂದು ಶ್ವೇತಭವನ ಹೇಳಿದೆ.

ಅಫ್ಗಾನಿಸ್ತಾನದ ಮೇಲೆ ತಾಲಿಬಾನ್‌ ಹಿಡಿತ ಸಾಧಿಸಿದ ಬಳಿಕ ಎಲ್ಲಾಅಂತರರಾಷ್ಟ್ರೀಯ ನೆರವುಗಳನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ಅಮೆರಿಕ ಸೇರಿ ವಿದೇಶದಲ್ಲಿರುವ ಅಫ್ಗಾನಿಸ್ತಾನದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿತ್ತು.

‘ಅಫ್ಗಾನಿಸ್ತಾನದ ಜನರಿಗೆ ನೆರವು ಒದಗಿಸಲು ಹಾಗೂ ತಾಲಿಬಾನಿಗಳ ಕೈಗೆ ಹಣ ಸೇರದಂತೆ ತಡೆಯಲು ಈ ಮಾರ್ಗವನ್ನು ಆಯ್ಕೆ ಮಾಡಲಾಗಿದೆ’ ಎಂದು ಶ್ವೇತಭವನ ಹೇಳಿಕೆ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT